ನಾಪೆÇೀಕ್ಲು, ಮೇ.26: ನಾಪೆÇೀಕ್ಲು ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆದ ಏಳನೇ ವರ್ಷದ ಗೊಲ್ಲ ಜನಾಂಗದ ಕ್ರೀಡಾ ಕೂಟದಲ್ಲಿ ಮಡಿಕೇರಿಯ ಅರೆಯಂಡ ತಂಡ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟದಲ್ಲಿ ಜಯಗಳಿಸುವದರ ಮೂಲಕ ಎರಡನೇ ಬಾರಿಗೆ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಪೆÇನ್ನುಕಂಡ ತಂಡ ರನ್ನರ್ಸ್ ಪ್ರಶಸ್ತಿ ಪಡೆದಿದೆ. ಎರಡು ದಿನಗಳ ಕಾಲ ನಡೆದ ಕ್ರೀಡಾಕೂಟದಲ್ಲಿ ಪುರುಷರಿಗೆ ಮತ್ತು ಮಹಿಳೆಯರಿಗೆ ಅಂತರ ಗ್ರಾಮ ಹಗ್ಗಜಗ್ಗಾಟ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಅಂತಿಮವಾಗಿ ಕೋಡಿಯಂಡ ಮತ್ತು ಬೇಂಗೂರು ತಂಡಗಳ ನಡುವೆ ನಡೆದ ಪುರುಷರ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಕೋಡಿಯಂಡ ತಂಡವು ಜಯಗಳಿಸುವದರ ಮೂಲಕ ಮೊದಲ ಸ್ಥಾನ ಪಡೆಯಿತು. ಕಕ್ಕಬ್ಬೆ ಮತ್ತು ಅರೆಯಂಡ ತಂಡಗಳ ನಡುವೆ ನಡೆದ ಮಹಿಳೆಯರ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಕಕ್ಕಬ್ಬೆ ತಂಡವು ಅರೆಯಂಡ ತಂಡವನ್ನು

(ಮೊದಲ ಪುಟದಿಂದ) ಸೋಲಿಸಿ ಪ್ರಶಸ್ತಿ ಪಡೆಯಿತು. ಮ್ಯಾನ್ ಆಫ್ ದಿ ಸೀರಿಸ್ ಪ್ರಶಸ್ತಿಯನ್ನು ಅರೆಯಂಡ ಪವನ್, ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ಅರೆಯಂಡ ಮಿಲನ್ ಪಡೆದರು.

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ತಾಲೂಕು ಪಂಚಾಯಿತಿ ಸದಸ್ಯೆ ಕೋಡಿಯಂಡ ಇಂದಿರಾ ಹರೀಶ್, ಜನಾಂಗದ ಪ್ರತಿಭೆ ಅನಾವರಣಕ್ಕೆ ಈ ಕ್ರೀಡಾಕೂಟ ವೇದಿಕೆಯಾಗಿದೆ. ಇಂತಹ ಪ್ರತಿಭೆಗಳಿಗೆ ಸಮಾಜ, ಶಿಕ್ಷಕರು, ಪೆÇೀಷಕರು ಹೆಚ್ಚಿನ ಪೆÇ್ರೀತ್ಸಾಹ ನೀಡಿದ್ದಲ್ಲಿ ರಾಷ್ಟ್ರೀಯಮಟ್ಟದಲ್ಲಿ ಬೆಳಗಲು ಸಾಧ್ಯವಾಗಲಿದೆ ಎಂದರು.

ನಾಪೆÇೀಕ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎ.ಇಸ್ಮಾಯಿಲ್ ಮಾತನಾಡಿ ಸಮಾಜದ ಏಳಿಗೆಗೆ ಇತರರು ಸಹಕರಿಸಿದಲ್ಲಿ ಇಂತಹ ಕ್ರೀಡಾಕೂಟಗಳನ್ನು ಯಶಸ್ವಿಯಾಗಿ ನಡೆಸಲು ಸಾಧ್ಯವಾಗುತ್ತದೆ. ಸಮಾಜದ ಜನರೊಂದಿಗೆ ಇತರ ಸಮಾಜದವರು ಕ್ರೀಡಾಕೂಟದಲ್ಲಿ ಬೆರೆಯುವದರಿಂದ ಪರಸ್ಪರ ಸಾಮರಸ್ಯ ವೃದ್ಧಿಯಾಗಲಿದೆ ಎಂದರು.

ಕೊಡಗು ಗೊಲ್ಲ ಸಮಾಜದ ಅಧ್ಯಕ್ಷ ಆಚೀರ ಎಸ್. ನಾಣಯ್ಯ ಮಾತನಾಡಿ, ಸಮಾಜದ ಬೆಳವಣಿಗೆಗೆ ಎಲ್ಲರು ಶ್ರಮಿಸಬೇಕು. ಸಮಾಜದ ಒಳಗೆ ಒಗ್ಗಟ್ಟಿರಬೇಕು. ಹೊಡೆದಾಳುವ ನೀತಿಯನ್ನು ಅನುಸರಿಸಿದರೆ ಸಮಾಜದ ಮೇಲೆ ಕೆಟ್ಟ ಪರಿಣಾಮ ಉಂಟಾಗಲಿದೆ ಎಂದರು.

ವೇದಿಕೆಯಲ್ಲಿ ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಜಾಹಿರ್, ಮೇಲಾಟಂಡ ವಿದ್ಯಾ ಕುಶಾಲಪ್ಪ, ಕಡವಡಿರ ಸಂತೋಷ್, ಪೆÇನ್ನುಕಂಡ ಚಿತ್ರಾ ಮೊಣ್ಣಪ್ಪ, ಬಿದ್ದಿಯಂಡ ಉಲ್ಲಾಸ್, ಚೋಕಿರ ವಾಸುದೇವ್, ಬಾಬಿ ಭೀಮಯ್ಯ, ತೆಕ್ಕಡ ಇಂದಿರಾ ನಾಗೇಶ್, ಕೊಂಗೀರ ಪೂಣಚ್ಚ, ಬಿದ್ದಿಯಂಡ ರಾಜು ಗಣಪತಿ, ಸಂಪಾಜೆ ಗ್ರಾಮ ಪಂಚಾಯಿತಿ ಸದಸ್ಯೆ ಯಮುನಾ ಗಿರೀಶ್, ಕೊಟ್ಟಂಡ ಅನಿತಾ ದಿನೇಶ್ ಮತ್ತಿತರರು ಇದ್ದರು.