ಸೋಮವಾರಪೇಟೆ, ಮೇ 27: ಪಟ್ಟಣದ ವರ್ಕ್‍ಶಾಪ್ ಮತ್ತು ಬಟ್ಟೆ ಮಾರಾಟ ಮಳಿಗೆಯಲ್ಲಿ ಬಾಲ ಕಾರ್ಮಿಕರಾಗಿ ದುಡಿಯುತ್ತಿದ್ದ ಈರ್ವರನ್ನು ಪತ್ತೆ ಹಚ್ಚಿರುವ ಹಿರಿಯ ಕಾರ್ಮಿಕ ನಿರೀಕ್ಷಕರ ನೇತೃತ್ವದ ತಂಡ ಬಾಲ ಕಾರ್ಮಿಕರ ಪೋಷಕರಿಗೆ ನೋಟೀಸ್ ಜಾರಿ ಮಾಡಿದೆ. ವಿವಿಧ ಇಲಾಖೆಗಳ ಸಹಕಾರ ದಿಂದ ಪಟ್ಟಣದ ಮುಖ್ಯ ರಸ್ತೆ, ತ್ಯಾಗರಾಜ ರಸ್ತೆ, ಖಾಸಗಿ ಬಸ್ ನಿಲ್ದಾಣದ ಹತ್ತಿರದ ಅಂಗಡಿಗಳು, ವಾಣಿಜ್ಯ ಮಳಿಗೆಗಳಿಗೆ ತೆರಳಿ ತಪಾಸಣೆ ನಡೆಸಿದ ಸಂದರ್ಭ, ಇಬ್ಬರು ಬಾಲ ಕಾರ್ಮಿಕರನ್ನು ಪತ್ತೆಹಚ್ಚಿ ಮಾಲೀಕರಿಗೆ ನೋಟಿಸ್ ಜಾರಿಗೊಳಿಸ ಲಾಯಿತು.ಇಲ್ಲಿನ ಮುಖ್ಯರಸ್ತೆಯ ಸಲೀಂ ಆಟೋ ವಕ್ರ್ಸ್ ಹಾಗೂ ತ್ಯಾಗರಾಜ ರಸ್ತೆಯ ಬಾಂಬೆ ಸೂಪರ್ ಬಜಾರ್‍ನಲ್ಲಿ ಕೆಲಸ ಮಾಡುತ್ತಿದ್ದ ಬಾಲಕ ಮತ್ತು ಬಾಲಕಿಯರನ್ನು ಪತ್ತೆಹಚ್ಚಿ ಅಂಗಡಿ ಮಾಲೀಕರ ವಿರುದ್ಧ ದೂರು ದಾಖಲಿಸಿಕೊಳ್ಳಲಾಯಿತು.

ಬಾಲ್ಯಾವಸ್ಥೆ ಮತ್ತು ಕಿಶೋರವಸ್ಥೆ (ನಿಷೇಧ ಮತ್ತು ನಿಯಂತ್ರಣ) ಕಾರ್ಮಿಕರ ಕಾಯ್ದೆಯಡಿ ಬಾಲ ಕಾರ್ಮಿಕರ ಪತ್ತೆಹಚ್ಚುವಿಕೆ ಕಾರ್ಯ ಕ್ರಮ ನಡೆಯುತ್ತಿದೆ.

(ಮೊದಲ ಪುಟದಿಂದ) ಇನ್ನೊಂದು ಕಡೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹಿರಿಯ ಕಾರ್ಮಿಕ ನಿರೀಕ್ಷಕ ಮಹದೇವಸ್ವಾಮಿ ಹೇಳಿದರು.

ಕಾರ್ಯಾಚರಣೆಯಲ್ಲಿ ಹಿರಿಯ ಕಾರ್ಮಿಕ ನಿರೀಕ್ಷಕ ಎಂ.ಎಂ.ಯತ್ನಬ್ಬಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಹಿಳಾ ಮೇಲ್ವಿಚಾರಕಿ ಯಶೋಧ, ಬಾಲಕಾರ್ಮಿಕ ಯೋಜನಾ ನಿರ್ದೇಶಕ ಆರ್.ಶಿರಾಜ್ ಆಹಮ್ಮದ್, ಶಿಕ್ಷಣ ಇಲಾಖೆಯ ರಾಮಚಂದ್ರ ಮೂರ್ತಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಡಿ.ಕೆ.ಮಂಜುನಾಥ್, ಕಂದಾಯ ಇಲಾಖೆಯ ಕೆ.ಡಿ.ಮೋಹನ್, ಪೊಲೀಸ್ ಇಲಾಖೆ ಮೋಹನ್ ಮತ್ತಿತರರು ಭಾಗವಹಿಸಿದ್ದರು.