ಮಡಿಕೇರಿ, ಮೇ 26: ಕೊಡಗು ಜಿಲ್ಲೆಯಲ್ಲಿ 3ನೇ ಅಂತರ್ ರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆರ್ಟ್ ಆಫ್ ಲಿವಿಂಗ್, ಬೆಂಗಳೂರು ಇವರ ಸಹಯೋಗದೊಂದಿಗೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಹಾಗೂ ಜಿಲ್ಲೆಯ ಎಲ್ಲಾ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳ ಹಾಗೂ ನೌಕರರುಗಳ ಸಾರ್ವಜನಿಕರ ಸಹಕಾರದೊಂದಿಗೆ ಆಚರಣೆ ಸಂಬಂಧ ಪೂರ್ವಭಾವಿ ಸಭೆ ನಡೆಯಿತು.

ಜಿಲ್ಲಾ ಆಯುಷ್ ಅಧಿಕಾರಿ ಡಾ. ಬಿ.ಹೆಚ್. ರಾಮಚಂದ್ರ, ಜಿಲ್ಲೆಯ ಆಯುಷ್ ವೈದ್ಯರುಗಳು, ಬೆಂಗಳೂರು ಆರ್ಟ್ ಆಫ್ ಲೀವಿಂಗ್ ಟೀಚರ್ಸ್ ಕೋ-ಆರ್ಡಿನೇಟರ್ ಎ.ಪಿ. ರಾಜಪ್ಪ, ಮಡಿಕೇರಿ ಯೋಗ ಕೇಂದ್ರ, ಭಾರತೀಯ ವಿದ್ಯಾಭವನದ ಯೋಗ ಶಿಕ್ಷಕರಾದ ಕೆ.ಕೆ. ಮಹೇಶ್ ಕುಮಾರ್, ಆರ್ಟ್ ಆಫ್ ಲೀವಿಂಗ್‍ನ ಕೃಷ್ಣ ಬೋಪಯ್ಯ, ಬೆಂಗಳೂರು ಆರ್ಟ್ ಆಫ್ ಲೀವಿಂಗ್‍ನ ಅಪೇಕ್ಷ್ ಮೆಂಬರ್ ಗಂಗಾ ಚಂಗಪ್ಪ, ಡಿ.ಡಿ.ಸಿ. ಅಡ್ವೊಕೇಟ್ ಕೆ.ಡಬ್ಲ್ಯೂ. ಬೋಪಯ್ಯ ಹಾಗೂ ಇತರೆ ಯೋಗ ಶಿಕ್ಷಕರಾದ ಎಂ. ರಾಗಿಣಿ, ಕೆ.ಪಿ. ಅರುಣ, ಕೆ.ಜಿ. ಸೋಮೇಶ್, ಟೀನಾ, ರಿಚಾ ಇತರರು ಉಪಸ್ಥಿತರಿದ್ದರು.

ಈ ವರ್ಷ ಯೋಗವನ್ನು ಹೆಚ್ಚು ಜನಪ್ರಿಯಗೊಳಿಸಲು ಹಾಗೂ ಜನರನ್ನು ರೋಗಮುಕ್ತರನ್ನಾಗಿ ಮಾಡಲು ಮಾನಸಿಕ ಸ್ವಸ್ಥತೆಯನ್ನು ಕಾಪಾಡಿಕೊಳ್ಳಲು ಕಾರ್ಯಕ್ರಮಗಳನ್ನು ನಡೆಸುವ ಬಗ್ಗೆ ಚರ್ಚಿಸಲಾಯಿತು.

ಉಚಿತವಾಗಿ ಯೋಗವನ್ನು ಕಲಿಯುವವರು ರಾಜಪ್ಪ ಎ.ಪಿ. ಟೀಚರ್ಸ್ ಕೋ-ಆರ್ಡಿನೇಟರ್, ಆರ್ಟ್ ಆಫ್ ಲೀವಿಂಗ್, ಬೆಂಗಳೂರು ಮೊಬೈಲ್ ಸಂಖ್ಯೆ: 9480238559, ಕೆ.ಕೆ. ಮಹೇಶ್ ಕುಮಾರ್, ಯೋಗ ಶಿಕ್ಷಕರು, ಭಾರತೀಯ ವಿದ್ಯಾಭವನ, ಯೋಗ ಕೇಂದ್ರ, ಮಡಿಕೇರಿ ಮೊ.ಸಂ: 9480731020, ಟೀನಾ, ಆರ್ಟ್ ಆಫ್ ಲೀವಿಂಗ್, ಗೋಣಿಕೊಪ್ಪ, ಮೊ.ಸಂ: 9742415696, ಕೆ.ಪಿ. ಅರುಣ, ಆರ್ಟ್ ಆಫ್ ಲೀವಿಂಗ್, ಅಮ್ಮತ್ತಿ, ಮೊ.ಸಂ: 8762174012, ರಿಚಾ, ಆರ್ಟ್ ಆಫ್ ಲಿವಿಂಗ್, ಮಾಹಿತಿ ಕೇಂದ್ರ, ಗೌಳಿಬೀದಿ, ಮಡಿಕೇರಿ ಮೊ.ಸಂ: 8762567547, ಎಂ.ಈ. ರಾಗಿಣಿ, ಆರ್ಟ್ ಆಫ್ ಲಿವಿಂಗ್, ಕುಶಾಲನಗರ, ಸೋಮವಾರಪೇಟೆ ತಾ. ಮಾದಾಪುರ ಮೊ.ಸಂ: 9945987717, ಸೋಮೇಶ್ ಕೆ.ಜಿ. ಆರ್ಟ್ ಆಫ್ ಲಿವಿಂಗ್, ಬೀರೂರು ಗ್ರಾಮ, ಪೊನ್ನಪ್ಪಸಂತೆ, ಬಾಳೆಲೆ, ದ. ಕೊಡಗು ಮೊ.ಸಂ: 9449790253 ಹಾಗೂ ಕೃಷ್ಣ ಬೋಪಯ್ಯ, ಆರ್ಟ್ ಆಫ್ ಲಿವಿಂಗ್, ಮಡಿಕೇರಿ, ಮೊ.ಸಂ: 9945135240 ನ್ನು ಸಂಪರ್ಕಿಸಬಹುದು.

ಹಾಗೆಯೇ ಭಾರತೀಯ ವಿದ್ಯಾಭವನ, ಮಡಿಕೇರಿ, ಬಾಲಭವನ, ಮಡಿಕೇರಿ, ಗೋಣಿಕೊಪ್ಪದ ಸೌಖ್ಯ ಹಾಲ್, ಅಮ್ಮತ್ತಿಯ ವಿ.ಎಸ್.ಎಸ್. ಎನ್. ಹಾಲ್, ಬಾಳೆಲೆಯ ಕಿಡ್ಸ್ ಆರ್.ಅಜ್. ಹಾಲ್ ಹಾಗೂ ಬಿರುನಾಣಿಯ ರೂಟ್ಸ್ ಸ್ಕೂಲ್ ಈ ಸಂಸ್ಥೆಗಳಲ್ಲಿ ಯೋಗ ತರಬೇತಿಯ ಶಿಕ್ಷಣವನ್ನು ನೀಡಲಾಗುತ್ತಿದೆ.

ಸಭೆಯಲ್ಲಿ ಎಲ್ಲಾ ಶಾಲಾ ಮತ್ತು ಕಾಲೇಜುಗಳ ಮುಖ್ಯಸ್ಥರುಗಳು, ವಿದ್ಯಾರ್ಥಿಗಳಿಗೆ ಯೋಗ ಶಿಕ್ಷಣವನ್ನು ನೀಡಲು ಸಮಯಾವಕಾಶವನ್ನು ನೀಡಲು ಕೋರಲಾಗಿದೆ. ಶಾಲಾ ಮತ್ತು ಕಾಲೇಜುಗಳಿಂದ ಆಯ್ದ ದೈಹಿಕ ಶಿಕ್ಷಕರಿಗೆ ಯೋಗ ತರಬೇತಿಯನ್ನು ಟಿ.ಒ.ಟಿ ನೀಡಲು ಎ.ಪಿ. ರಾಜಪ್ಪ ಟೀಚರ್ಸ್ ಕೋ.ಆರ್ಡಿನೇಟರ್, ಆರ್ಟ್ ಆಫ್ ಲೀವಿಂಗ್, ಬೆಂಗಳೂರು ಇವರು ವಹಿಸಿಕೊಂಡಿದ್ದಾರೆ. ಸಂಬಂಧಿಸಿದ ತಾಲೂಕುಗಳಲ್ಲಿ ಆಯಾಯ ತಹಶೀಲ್ದಾರರಲ್ಲಿ ಆರ್ಟ್ ಆಫ್ ಲೀವಿಂಗ್‍ನ ಕಾರ್ಯಕರ್ತರೂ ಸಂಪರ್ಕಿಸಿ ಯೋಗ ದಿನಾಚರಣೆಯನ್ನು ಎಲ್ಲಾ ಮುಖ್ಯಸ್ಥರನ್ನೊಳಗೊಂಡು ಆಚರಣೆ ಮಾಡಲು ಕೋರಿದೆ.

ಗ್ರಾಮಮಟ್ಟದಲ್ಲಿ ಗ್ರಾ.ಪಂ. ಸಹಕಾರದೊಂದಿಗೆ ಎಲ್ಲಾ ಗ್ರಾಮಸ್ಥರಿಗೆ ತಲಪಲು ತರಬೇತಿ ಪಡೆದ ಶಿಕ್ಷಕರು ಹಾಗೂ ಯೋಗ ಕಾರ್ಯಕರ್ತರು ಸಹಕಾರ ನೀಡಲು ಸೂಚಿಸಲಾಯಿತು. ಈ ಸಂಬಂಧ ಎಲ್ಲರೂ ಯೋಗದ ಉಪಯೋಗವನ್ನು ಪಡೆಯಲು ಸೂಚಿಸಿದೆ.

ಹೆಚ್ಚಿನ ಸಂಖ್ಯೆಯಲ್ಲಿ ಜೂನ್ 21 ರಂದು ನಡೆಯುವ 3ನೇ ಅಂತರ್ ರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳುವಂತೆ ಮತ್ತು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಆಯುಷ್ ಇಲಾಖೆಯ ಜಿಲ್ಲಾ ಆಯುಷ್ ಅಧಿಕಾರಿ ಕೋರಿದ್ದಾರೆ.