ಮಡಿಕೇರಿ, ಮೇ 27: ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕುರಿತು ರಾಷ್ಟ್ರದಲ್ಲಿ ಆಹಾರ ವಸ್ತುಗಳಿಗೆ ಸಂಬಂಧಿಸಿದ 8 ಕಾನೂನುಗಳನ್ನು ಕ್ರೋಢಿಕರಿಸಿ, ಜನರಿಗೆ ಸುರಕ್ಷತೆ ಹಾಗೂ ಗುಣಮಟ್ಟ ಆಹಾರ ಪದಾರ್ಥಗಳನ್ನು ನೀಡುವ ಉದ್ದೇಶದಿಂದ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ -2006 ಹಾಗೂ ಅದರಡಿ ರಚಿಸಲಾಗಿರುವ ನಿಯಮ, ನಿಬಂಧನೆಗಳು 5 ನೇ ಆಗಸ್ಟ್ 2011 ರಿಂದ ಜಾರಿಗೆ ಬಂದಿರುತ್ತದೆ. ಈ ಕಾಯ್ದೆಯ ಉದ್ದೇಶವು ಆಹಾರ ಪದಾರ್ಥಗಳ ವ್ಯವಹಾರಸ್ಥರನ್ನು ಒಂದೇ ಸೂರಿನಡಿಯಲ್ಲಿ ನಿಬಂಧನೆ ಮತ್ತು ಪರಿವೀಕ್ಷಣೆಗೆ ಒಳಪಡಿಸುವದಾಗಿದೆ.
ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ಬಳಕೆ ಮಾಡುವ ವಿವಿಧ ಪದಾರ್ಥಗಳ ಸುರಕ್ಷತೆ ಮತ್ತು ಗುಣಮಟ್ಟವನ್ನು ಕಾಯ್ದುಕೊಂಡು, ಮಾನವನ ಸೇವನೆಗೆ ಯೋಗ್ಯವಾದ ಆಹಾರವನ್ನು ಪೂರೈಸುವದು ಈ ಕಾಯ್ದೆಯ ಮೂಲ ಉದ್ದೇಶವಾಗಿರುತ್ತದೆ. ಈ ಕಾಯ್ದೆಯು ಜನಪರವಾಗಿದ್ದು, ಜನರ ಹಿತಾಸಕ್ತಿಯನ್ನು ಕಾಪಾಡುವಲ್ಲಿ ಒಂದು ದಿಟ್ಟ ಹೆಜ್ಜೆಯಾಗಿರುತ್ತದೆ. ಎಲ್ಲಾ ರೀತಿಯ ಆಹಾರ ಪದಾರ್ಥಗಳ ತಯಾರಕರು, ಸಂಸ್ಕರಣೆ ಮಾಡುವವರು, ಪ್ಯಾಕ್ ಮಾಡುವವರು, ಸಾಗಣೆದಾರರು, ಸಂಗ್ರಹದಾರರು, ವಿತರಕರು, ಮಾರಾಟದಾರರು ಮತ್ತು ಆಮದುದಾರರು ಈ ಕಾಯ್ದೆ ವ್ಯಾಪ್ತಿಗೆ ಒಳಪಡುತ್ತಾರೆ. ವಾರ್ಷಿಕ ರೂ. 12 ಲಕ್ಷದೊಳಗೆ ವ್ಯಾಪಾರ ನಡೆಸುವವರು ಆಹಾರ ನೋಂದಣಿಯನ್ನು ಹಾಗೂ ರೂ. 12 ಲಕ್ಷಕ್ಕಿಂತ ಹೆಚ್ಚಿನ ವ್ಯಾಪಾರ ನಡೆಸುವವರು ಆಹಾರ ಪರವಾನಗಿ ಅನ್ನು ಪಡೆದುಕೊಳ್ಳಬೇಕಾಗಿರುತ್ತದೆ.
ಕರ್ನಾಟಕ ರಾಜ್ಯದಲ್ಲಿ ಈ ವ್ಯವಸ್ಥೆ 7.3.2014 ರಿಂದ ಜಾರಿಗೊಂಡಿದೆ. ಎಲ್ಲಾ ಆಹಾರ ಪದಾರ್ಥಗಳ ವ್ಯವಹಾರಸ್ಥರು ಈ ಸವಲತ್ತನ್ನು ಈ ಎರಡು ಅಂರ್ತಜಾಲ ತಾಣಗಳಿಂದ ಪಡೆಯಬಹುದಾಗಿದೆ. hಣಣಠಿ://ಜಿooಜಟiಛಿeಟಿsiಟಿg.ಜಿssಚಿi.gov.iಟಿ ಮತ್ತು ತಿತಿತಿ.ಜಿssಚಿi.gov.iಟಿ ಹೆಚ್ಚಿನ ಮಾಹಿತಿಗೆ ಅಂಕಿತ ಅಧಿಕಾರಿಗಳು, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ, ಕೊಡಗು ಜಿಲ್ಲೆ -08272-220054, ಆಹಾರ ಸುರಕ್ಷತ ಅಧಿಕಾರಿ, ಮಡಿಕೇರಿ ತಾಲೂಕು -9964263599, ಆಹಾರ ಸುರಕ್ಷತ ಅಧಿಕಾರಿ, ಸೋಮವಾರಪೇಟೆ ತಾಲೂಕು -8277510323, ಆಹಾರ ಸುರಕ್ಷತ ಅಧಿಕಾರಿ, ವೀರಾಜಪೇಟೆ ತಾಲೂಕು -9449289203 ನ್ನು ಸಂಪರ್ಕಿಸಬಹುದು ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಂಕಿತಾಧಿಕಾರಿ ತಿಳಿಸಿದ್ದಾರೆ.