ಮಡಿಕೇರಿ, ಮೇ 27: ಗೋಣಿಕೊಪ್ಪಲು ಕಾವೇರಿ ಕಾಲೇಜು ಹಿಂಭಾಗದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಕಲ್ಕಿ ಭಗವಾನ್ ಮತ್ತು ಭಗವತಿ ಮಂದಿರವನ್ನು ಇಂದು ದೈವಿಕ ಕೈಂಕರ್ಯಗಳೊಂದಿಗೆ ಲೋಕಾರ್ಪಣೆ ಮಾಡಲಾಯಿತು.ಕಲ್ಕಿ ಮೂಲ ಸ್ಥಳ ಸತ್ಯಲೋಕದ ಆಚಾರ್ಯೆಯರಾದ ಜಯಪ್ರಭ ಹಾಗೂ ಸುಮಿತ್ರ ಇವರುಗಳ ಪೌರೋಹಿತ್ಯದಲ್ಲಿ ದೈವಿಕ ಪೂಜಾ ಕೈಂಕರ್ಯಗಳು, ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನೂತನ ಮಂದಿರದಲ್ಲಿ ನೆರವೇರಿತು.ವಿಶೇಷ ಗಣಪತಿ ಯಜ್ಞ ಹಾಗೂ ಪ್ರಾರ್ಥನೆಯೊಂದಿಗೆ ಸಾಮೂಹಿಕ ಪೂಜೆ ಉಷಾಕಾಲದಿಂದ ನಡೆದು, ಅಪರಾಹ್ನ ನವಗ್ರಹ ಹೋಮ, ಸಾಮೂಹಿಕ ಭಜನೆ, ಪ್ರಾರ್ಥನಾ ಸೇವೆಗಳು ಜರುಗಿದವು.
ಸುಸಜ್ಜಿತ ಮಂದಿರದಲ್ಲಿ ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಸದ್ಭಕ್ತರಿಗೆ ಪ್ರಸಾದ ವ್ಯವಸ್ಥೆ ಏರ್ಪಡಿಸಲಾಗಿತ್ತು. ಸೇವಾಕರ್ತ ಡಾಲು ನಾಣಯ್ಯ ತಂಡದವರು ದೈವಿಕ ಕೈಂಕರ್ಯ ಸುಸೂತ್ರವಾಗಿ ನೆರವೇರುವಲ್ಲಿ ಶ್ರಮಿಸಿದರು. ‘ಶಕ್ತಿ' ಪ್ರಧಾನ ಸಂಪಾದಕ ಜಿ. ರಾಜೇಂದ್ರ ಸೇರಿದಂತೆ ಸೇವಾಕರ್ತರನ್ನು
(ಮೊದಲ ಪುಟದಿಂದ) ಸನ್ನಿಧಿಯಿಂದ ಗೌರವಿಸಲಾಯಿತು. ತಾ.28ರಂದು (ಇಂದು) ಸುದರ್ಶನ ಹೋಮ, ಪಾದುಕಾ ಪೂಜೆಯೊಂದಿಗೆ ಭಗವಂತನ ಪ್ರಾರ್ಥನೆ ನಡೆಯಲಿದೆ.