ಸುಂಟಿಕೊಪ್ಪ, ಮೇ 27: ಬ್ಲೂ ಬಾಯ್ಸ್ ಯೂತ್ ಕ್ಲಬ್ ವತಿಯಿಂದ ಸಂಘದ 37ನೇ ವಾರ್ಷಿಕೋತ್ಸವ ಮತ್ತು ದಿ.ಡಿ. ಶಿವಪ್ಪ ಜ್ಞಾಪಕಾರ್ಥದ 22ನೇ ವರ್ಷದ ರಾಜ್ಯಮಟ್ಟದ ‘ಗೋಲ್ಡ್ ಕಪ್’ ಫುಟ್‍ಬಾಲ್ ಟೂರ್ನಿಯ ಸೆಮಿಫೈನಲ್ ಪಂದ್ಯಾವಳಿಯು ಈಗಲ್ ಎಫ್.ಸಿ.ಬೆಂಗಳೂರು v/s ಜೆಆರ್‍ಟಿ ಮೊಗ್ರಲ್ ಕುಂಬ್ಳೆ ಹಾಗೂ ಕೋಸ್ಮಸ್‍ಎಫ್.ಸಿ.ಕ್ಯಾಲಿಕೆಟ್v/s ಹೋರಿಜನ್ ಬೆಂಗಳೂರು ತಂಡಗಳ ನಡುವೆ ನಡೆಯಿತು. ಫೈನಲ್‍ಗೆ ಜೆಆರ್‍ಟಿ ಮೊಗ್ರಲ್ ಕುಂಬ್ಳೆ ಹಾಗೂ ಹೋರಿಜನ್ ಬೆಂಗಳೂರು ಪ್ರವೇಶ ಪಡೆಯಿತು.

ಜಿ.ಯಂ.ಪಿ. ಶಾಲಾ ಮೈದಾನದಲ್ಲಿ ನಡೆದ ಮೊದಲನೆ ಸೆಮಿಫೈನಲ್ ಪಂದ್ಯಾವಳಿಯು ಈಗಲ್ ಎಫ್.ಸಿ. ಬೆಂಗಳೂರು ಹಾಗೂ ಜೆಆರ್‍ಟಿ ಮೊಗ್ರಲ್ ಕುಂಬ್ಳೆ ತಂಡಗಳ ನಡುವೆ ನಡೆದು 2-0 ಗೋಲುಗಳಿಂದ ಈಗಲ್ ಎಫ್.ಸಿ ತಂಡವನ್ನು ಮೊಗ್ರಲ್ ಕುಂಬ್ಳೆ ಸೋಲಿಸುವ ಮೂಲಕ ಫೈನಲ್ ಪ್ರವೇಶ ಪಡೆದರು.

ಕೋಸ್ಮಸ್ ಎಫ್.ಸಿ. ಕ್ಯಾಲಿಕೆಟ್ ಹಾಗೂ ಹೋರಿಜನ್ ಬೆಂಗಳೂರು ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಹೋರಿಜನ್ ಬೆಂಗಳೂರು ತಂಡ

1-0 ಗೋಲುಗಳಿಂದ ಫೈನಲ್ ಪ್ರವೇಶ ಪಡೆಯಿತು.

ಮೊದಲ ಸೆಮಿಫೈನಲ್ ಪಂದ್ಯಾವಳಿಯನ್ನು ಕೊಡಗರಹಳ್ಳಿ ಟಿಂಬರ್ ವ್ಯಾಪಾರಿ ಇಬ್ರಾಹಿಂ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಎ. ಉಸ್ಮಾನ್, ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಎಸ್. ಸುನೀಲ್ ಹಾಗೂ ಪತ್ರಕರ್ತರ ಸಂಘದ ಅಧ್ಯಕ್ಷÀ ಎಂ.ಬಿ. ವಿನ್ಸೆಂಟ್ ಕ್ರೀಡಾಪಟುಗಳಿಗೆ ಶುಭಕೋರಿ, ಎಂ.ಎಸ್. ಸುನೀಲ್ ಚೆಂಡು ಒದೆಯುವ ಮೂಲಕ ಉದ್ಘಾಟಿಸಿದರು. ದ್ವಿತೀಯ ಸೆಮಿಫೈನಲ್ ಪಂದ್ಯಾವಳಿಯನ್ನು ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಕೆ.ಇ. ಕರೀಂ ಹಾಗೂ ಶಾಹೀದ್ ಉದ್ಘಾಟಿಸಿದರು.