ಮಡಿಕೇರಿ, ಮೇ 27: ತಾ. 28ರಂದು (ಇಂದು) ಬೆಂಗಳೂರಿನಲ್ಲಿ ನಡೆಯಲಿರುವ ಬಲಿಜ ಸಮಾವೇಶಕ್ಕೆ ಜಿಲ್ಲೆಯಿಂದ ಐದುನೂರು ಮಂದಿ ಪ್ರತಿನಿಧಿಗಳು ಈ ರಾತ್ರಿ ರಾಜಧಾನಿಯತ್ತ ಪಯಣ ಬೆಳೆಸಿದರು.
ನಗರದ ಸರಕಾರಿ ಬಸ್ ಡಿಪೋದಲ್ಲಿ ಸಮಾಜ ಬಾಂಧವರಿಂದ ಪೂಜೆಯ ಬಳಿಕ ‘ಶಕ್ತಿ' ಸಂಪಾದಕರಾದ ಜಿ. ಚಿದ್ವಿಲಾಸ್ ಹಾಗೂ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ರಮೇಶ್ ಕುಟ್ಟಪ್ಪ ಅವರುಗಳು ಫಲಕ ಅನಾವರಣಗೊಳಿಸುವ ಮೂಲಕ ಶುಭ ಹಾರೈಸಿದರು.
ಈ ಸಂದರ್ಭ ಬಲಿಜ ಸಮಾಜದ ಜಿಲ್ಲಾಧ್ಯಕ್ಷ ಟಿ.ಎಲ್. ಶ್ರೀನಿವಾಸ್, ಲೋಗನಾಥ, ಕಾರ್ಯದರ್ಶಿ ಟಿ.ವಿ. ಲೋಕೇಶ್, ಮಡಿಕೇರಿ ತಾಲೂಕು ಅಧ್ಯಕ್ಷೆ ಮೀನಾಕ್ಷಿ ಕೇಶವ, ವೀರಾಜಪೇಟೆ ತಾಲೂಕು ಅಧ್ಯಕ್ಷ ಗಣೇಶ್ ನಾಯ್ಡು, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಬಾಲಕೃಷ್ಣ ಮೊದಲಾದವರು ಈ ಸಂದರ್ಭ ಹಾಜರಿದ್ದರು.