ವೀರಾಜಪೇm,É ಮೇ 27: ವೀರಾಜಪೇಟೆ ಬಳಿಯ ಕೊಳತೋಡು ಬೈಗೋಡು ತಿರುವಿನಲ್ಲಿ ಶುಕ್ರವಾರ ರಾತ್ರಿ 9-45 ಗಂಟೆಗೆ ಜೆನ್ ಕಾರೊಂದಕ್ಕೆ ಸಾರಿಗೆ ಸಂಸ್ಥೆ ಬಸ್ಸೊಂದು ಡಿಕ್ಕಿಯಾದ ಪರಿಣಾಮ ವೀರಾಜಪೇಟೆ ಪಂಜರ್‍ಪೇಟೆಯ ನಿವಾಸಿ, ಕಾರು ಚಾಲಕ ಎಂ.ಬಿ. ಮುದ್ದಪ್ಪ ಅಲಿಯಾಸ್ ಮಧು (37) ಸ್ಥಳದಲ್ಲಿಯೇ ದುರ್ಮರಣಗೊಂಡಿದ್ದಾರೆ.
ಬೆಂಗಳೂರು ಡಿಪೋದ ಬಸ್ (ಕೆ.ಎ. 098 5160) ಅಪರಾಹ್ನ 2.15 ಗಂಟೆಗೆ ಬೆಂಗಳೂರಿನಿಂದ ಹೊರಟು ವೀರಾಜಪೇಟೆಗೆ ರಾತ್ರಿ 9-45ಗಂಟೆಗೆ ತಲುಪಬೇಕಾಗಿದ್ದು ಬಸ್ಸಿಗೆ ವೀರಾಜಪೇಟೆ ಕಡೆಯಿಂದ ಬಂದ ಕಾರು (ಕೆ.ಎ. 12 ಎನ್. 1515) ಬಸ್ಸಿನ ಬಲಬದಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಕಾರಿನ ಮುಂಭಾಗ ಪೂರ್ಣ ಜಜ್ಜಿ ಹೋಗಿದೆ. ಚಾಲಕನ ಆಸನದÀ ಬದಿಗೆ ಸ್ಟೇರಿಂಗ್ ತಾಗಿಕೊಂಡಿದ್ದರಿಂದ ಮುದ್ದಪ್ಪ ಅವರ ಎದೆ ಭಾಗಕ್ಕೆ ತೀವ್ರ ಸ್ವರೂಪದ ಗಾಯ ಉಂಟಾಗಿದೆ. ಬಸ್ಸಿನ ಬಲಭಾಗ ಮಾತ್ರ ಜಜ್ಜಿದಂತಾಗಿದೆ.
ಬಸ್ಸಿನ ಚಾಲಕ ಗೌಡರ ಈರಪ್ಪ ಇಲ್ಲಿನ ಗ್ರಾಮಾಂತರ ಪೊಲೀಸರಿಗೆ ನೀಡಿದ ದೂರಿನ ಮೇರೆ ಪೊಲೀಸರು ಕಾರಿನ ಚಾಲಕ ಮುದ್ದಪ್ಪ ವಿರುದ್ಧ ಪ್ರಕರಣ ದಾಖಲಿಸಿ ಎರಡು ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಘಟನೆ ಸ್ಥಳಕ್ಕೆ ಸರ್ಕಲ್ ಇನ್ಸ್‍ಪೆಕ್ಟರ್ ಎನ್. ಕುಮಾರ್ ಆರಾಧ್ಯ ಹಾಗೂ ಸಬ್‍ಇನ್ಸ್‍ಪೆಕ್ಟರ್ ನಂಜುಂಡ ಸ್ವಾಮಿ ಭೇಟಿ ನೀಡಿ ಮಹಜರು ನಡೆಸಿದರು.