ವೀರಾಜಪೇಟೆ, ಮೇ 26: ವೀರಾಜಪೇಟೆಯ ಎವೆಂಜರ್ಸ್ ಬ್ಯಾಡ್ಮಿಂಟನ್ ಕ್ಲಬ್ನ ಆಶ್ರಯದಲ್ಲಿ ನಡೆದ ಎರಡನೇ ವರ್ಷದ ಶಟಲ್ ಬ್ಯಾಡ್ಮಿಂಟನ್ ಟೂರ್ನಿ ಇತ್ತೀಚೆಗೆ ಮುಕ್ತಾಯಗೊಂಡಿತು. ಚಿಕ್ಕಪೇಟೆಯ ಯುವಜನ ಮತ್ತು ಕ್ರೀಡಾ ಇಲಾಖೆಯ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಟೂರ್ನಿಯಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ 38 ತಂಡಗಳು ಪಾಲ್ಗೊಂಡಿದ್ದವು. ಕುಶಾಲನಗರದ ಸದಾಯತ್-ಶ್ರೀನಿವಾಸ್ ಜೋಡಿ ವಿಜೇತರಾದರು. ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಕುಶಾಲನಗರದ ಮುರಳಿ-ರಂಜನ್ ತಂಡ ವಿಜೇತರಾದರು.
ಪಂದ್ಯಾವಳಿಯನ್ನು ಹಿರಿಯ ಕ್ರೀಡಾಪಟು ಹ್ಯಾರಿ ಅಚ್ಚಯ್ಯ ಉದ್ಘಾಟಿಸಿದರು. ಎವೆಂಜರ್ಸ್ ಕ್ಲಬ್ ಅಧ್ಯಕ್ಷ ಸಕ್ಲೇನ್, ಡಿ.ಎ. ಎಜಾಸ್, ಸಿ.ಎ. ನಾಸಿರ್, ಸ್ಪೋಟ್ಸ್ ಪಾಯಿಂಟ್ನ ಸಮೀರ್ ಅತಿಥಿಗಳಾಗಿ ಹಾಜರಿದ್ದರು. ಜಿಲ್ಲೆಯ ಹಿರಿಯ ಬ್ಯಾಡ್ಮಿಂಟನ್ ಪಟು ಹುಂಡಿಯ ಮೊಯ್ದೀನ್ ಹಾಗೂ ಪಾಲಂಗಾಲದ ಮಾಥ್ಯು ತರಕನ್ ಅವರನ್ನು ಈ ಸಂದರ್ಭ ಸನ್ಮಾನಿಸಲಾಯಿತು.