ಮಡಿಕೇರಿ, ಮೇ 27: ಆಗಸ್ಟ್ 7ರಂದು ಚಂದ್ರಗ್ರಹಣ ಸಂಭವಿಸಲಿದೆ. ಚಂದ್ರಗ್ರಹಣದ ಪರಿಣಾಮ ಮಳೆಯ ಆರ್ಭಟ ಹೆಚ್ಚಲಿದೆ. ಭೂಕಂಪನ ಅನುಭವ ಆಗಲಿದೆ ಎಂದು ಜ್ಯೋತಿಷ್ಯ ತಜ್ಞೆ ಕರೋಟಿರ ಶಶಿ ಸುಬ್ರಮಣಿ ಗ್ರಹಗತಿ ಆಧಾರದಲ್ಲಿ ಹೇಳಿದ್ದಾರೆ.ಆದರೆ ಜೂನ್ ತಿಂಗಳಲ್ಲಿ ಮಳೆಯ ಪ್ರಭಾವ ಕಡಿಮೆ ಕಂಡುಬರಲಿದ್ದು, ಆಗಾಗ ಸೂರ್ಯ ದರ್ಶನ ಸಾಧ್ಯ ಎನ್ನಲಾಗಿದೆ.ನೈರುತ್ಯ ಮಳೆ - ಗಾಳಿಯು ಮೇ 28-29ರಲ್ಲಿ ಪಶ್ಚಿಮ ಘಟ್ಟ ತಲಪಿ, ಜೂನ್ ಮೊದಲ ವಾರದಲ್ಲಿ ಕೊಡಗನ್ನು ಪ್ರವೇಶಿಸಲಿದೆ. ಗ್ರಹಗತಿಯಂತೆ ಕೊಡಗಿನಲ್ಲಿ ಈ ಬಾರಿ ಮಳೆಯಿಂದ ಕೃಷಿಗೆ ಹೇಳುವಷ್ಟು ಹಾನಿ ಆಗಲಿಕ್ಕಿಲ್ಲ.ಜುಲೈ ಬಳಿಕ ಬರುವ ಪುನರ್ವಸು, ಪುಷ್ಯಾ ಮತ್ತು ಆಶ್ಲೇಷಾ ಮಳೆಗಳು ನಿರೀಕ್ಷೆಗೂ ಮೀರಿ ಗಾಳಿ- ಮಳೆ, ಗುಡುಗು, ಮಿಂಚುಗಳಿಂದ ಕೂಡಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ.

ಚಂದ್ರಗ್ರಹಣದ ಪ್ರಭಾವ ವೆಂಬಂತೆ ವಿಶ್ವದಲ್ಲಿ ಅಲ್ಲಲ್ಲಿ ಭೂಕಂಪನ, ಹಿರಿಯ ನಾಯಕರುಗಳ ಹತ್ಯೆ ಸಂಭವಿಸ ಬಹುದು ಎಂದು ಭವಿಷ್ಯ ನುಡಿದಿದ್ದಾರೆ.