ಗೋಣಿಕೊಪ್ಪಲು, ಮೇ 26: ಪೊನ್ನಂಪೇಟೆ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ದಾಖಲಾತಿ ಆಂದೋಲನ ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯಿತಿ ಸದಸ್ಯೆ ಶ್ರೀಜಾ ಶಾಜಿ ಅಚ್ಯುತನ್ ಚಾಲನೆ ನೀಡಿದರು.
ಶಾಲಾ ವ್ಯಾಪ್ತಿಯಲ್ಲಿ ತಾ. 16 ರಿಂದ 30 ರವರೆಗೆ ದಾಖಲಾತಿ ಆಂದೋಲನ ನಡೆಯುತ್ತಿದ್ದು, ಪೋಷಕರು 6ರಿಂದ 14 ವರ್ಷದ ಎಲ್ಲಾ ಮಕ್ಕಳನ್ನು ಶಾಲೆಗೆ ಸೇರಿಸುವಂತೆ ತಿಳಿಸಿದರು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ, ಶಾಲೆಬಿಟ್ಟ ಮಕ್ಕಳನ್ನು ಶಾಲೆಗೆ ಸೇರಿಸಿ, 6 ರಿಂದ 14 ವರ್ಷದ ಮಕ್ಕಳನ್ನು ಕಡ್ಡಾಯವಾಗಿ ಸೇರಿಸುವದು, ಬಾಲ ಕಾರ್ಮಿಕ ಪದ್ಧತಿಯನ್ನು ನಿರ್ನಾಮ ಮಾಡಿರಿ, ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿ ಎಂಬ ಘೋಷಣೆಯನ್ನು ಕೂಗಿದರು.
ಈ ಸಂದರ್ಭ ತಾಲೂಕು ಪಂಚಾಯಿತಿ ಸದಸ್ಯೆ ಮೂಕಳೇರ ಆಶಾ ಪೂಣಚ್ಚ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮೂಕಳೇರ ಸುಮಿತಾ ಗಣೇಶ್, ಮುಖ್ಯ ಶಿಕ್ಷಕ ಕೆ.ಕೆ. ರವಿ, ಸಮೂಹ ಸಂಪನ್ಮೂಲ ವ್ಯಕ್ತಿ ತಿರುನೆಲ್ಲಿಮಾಡ ಜೀವನ್, ಶಿಕ್ಷಕರಾದ ರೋಜಿó, ಗಂಗಮ್ಮ ಶಕೀಲಾಭಾನು, ಕುಸುಮ, ಎ.ಪಿ. ಸಾವಿತ್ರಿ ಹಾಜರಿದ್ದರು.