ನಾಪೆÉÇೀಕ್ಲು, ಮೇ 27 : ಕಠಿಣ ಪರಿಶ್ರಮದಿಂದ ಯಾವದೇ ವೃತ್ತಿ ಮಾಡಿದರು. ಅದರಿಂದ ಫಲ ಸಾಧ್ಯ ಎಂದು ನಿವೃತ್ತ ಕರ್ನಲ್ ಕಂಡ್ರತಂಡ ಸುಬ್ಬಯ್ಯ ಅಭಿಪ್ರಾಯಪಟ್ಟರು. ನಾಪೆÉÇೀಕ್ಲು ಕೊಡವ ಸಮಾಜದ ಕ್ರೀಡಾ ಮತ್ತು ಸಾಂಸ್ಕøತಿಕ ರಿಕ್ರಿಯೇಷನ್ ಕ್ಲಬ್ ಮತ್ತು ಮಾಜಿ ಸೈನಿಕರ ಸಹಯೋಗದೊಂದಿಗೆ ಕಳೆದ 15 ದಿನಗಳಿಂದ ನಡೆಸಲಾಗುತ್ತಿರುವ ಸೈನಿಕರ ಕೋಚಿಂಗ್ ಕ್ಯಾಂಪ್ ಶಿಬಿರದ ಅಂತಿಮ ದಿನದ ಸಮಾರಂಭದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಭವಿಷ್ಯದಲ್ಲಿ ದೇಶ ಸೇವೆ ಮಾಡಬೇಕಾದರೆ ಸೈನ್ಯವನ್ನು ಸೇರಬೇಕೆಂದು ಕಿವಿಮಾತು ಹೇಳಿದ ಅವರು ಭಾರತ ದೇಶದಲ್ಲಿ 1784 ರಲ್ಲಿ ಕೂರ್ಗ್ ರೆಜಿಮೆಂಟ್ ಸ್ಥಾಪನೆ ಗೊಂಡಾಗ 100 ಸೈನಿಕರಲ್ಲಿ 90 ರಷ್ಟು ಮಂದಿ ಕೊಡಗಿನ ಸೈನಿಕರು ಇದ್ದರು. ಈಗ ಕೂರ್ಗ್ ರೆಜಿಮೆಂಟ್‍ನಲ್ಲಿ ಬೆರಳೆಣಿಕೆಯಷ್ಟು ಕೊಡಗಿನವರು ಇದ್ದಾರೆ ಎಂದು ವಿಷಾಧ ವ್ಯಕ್ತಪಡಿಸಿದರು.
ಕೊಡವ ಸಮಾಜದ ಕ್ರೀಡಾ, ಸಾಂಸ್ಕøತಿಕ ರಿಕ್ರಿಯೇಷನ್ ಕ್ಲಬ್ ಅಧ್ಯಕ್ಷ ಕಾಂಡಂಡ ಜೋಯಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ಕ್ಲಬ್ ವತಿಯಿಂದ ಕಳೆದ ವರ್ಷವು ಇಂತಹ ಕೋಚಿಂಗ್ ಕ್ಯಾಂಪ್ ಆಯೋಜಿಸಲಾಗಿದ್ದು ಅಂದು ಕೇವಲ 15 ಮಕ್ಕಳು ಭಾಗವಹಿಸಿ ಅದರಲ್ಲಿ 4 ಮಕ್ಕಳು ಆಯ್ಕೆಯಾಗಿದ್ದರು. ಇಂದು ಸುಮಾರು 60 ಮಕ್ಕಳು ಭಾಗವಹಿಸಿ ಇದರ ಪ್ರಯೋಜನವನ್ನು ಪಡೆದುಕೊಂಡಿದ್ದು, ಈ ಶಿಬಿರದ ಎಲ್ಲಾ ವಿದ್ಯಾರ್ಥಿಗಳು ಆಯ್ಕೆಯಾಗುವದರ ಮೂಲಕ ದೇಶ ಸೇವೆಗೆ ಸಜ್ಜುಗೊಳ್ಳಬೇಕೆಂದರು.
ಕಾರ್ಯಕ್ರಮವನ್ನುದ್ದೇಶಿಸಿ ಕೊಡವ ಸಮಾಜದ ಅಧ್ಯಕ್ಷ ಬಿದ್ದಾಟಂಡ ರಮೇಶ್ ಚಂಗಪ್ಪ, ಕೊಡವ ಸಮಾಜದ ಮಾಜಿ ಅಧ್ಯಕ್ಷ ಮಣವಟ್ಟಿರ ಬಿ, ಮಾಚಯ್ಯ, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಪಾಡೆಯಂಡ ಶಂಭು, ಕರ್ನಾಟಕ ಕೊಡವ ಸಾಹಿತ್ಯ ಅಕಾಡಮಿ ಅಧ್ಯಕ್ಷ ಬಿ.ಎಸ್. ತಮ್ಮಯ್ಯ, ಮಾರ್ಚಂಡ ಗಣೇಶ್ ಮಾತನಾಡಿದರು.
ವೇದಿಕೆಯಲ್ಲಿ ಕಲಿಯಂಡ ಹ್ಯಾರಿ ಮಂದಣ್ಣ, ಕೊಂಡೀರ ಗಣೇಶ್, ಕಲ್ಯಾಟಂಡ ರಮೇಶ್ ಮತ್ತು ಕೋಚಿಂಗ್ ನೀಡಿದ ಅರೆಯಡ ನಕುಲ ಪೊನ್ನಪ್ಪ, ಕೇಟೋಳಿರ ಡಾಲಿ ಅಪ್ಪಚ್ಚ, ಕಂಗಾಂಡ ಮಿಟ್ಟು ಪೂವಯ್ಯ, 27 ಕೂರ್ಗ್ ರೆಜಿಮೆಂಟ್‍ನ ಚೋಕಿರ ಮಹೇಶ್ (ಮಧು) ಮತ್ತು ಕುದುಪಜೆ ಸನತ್ ಕುಮಾರ್ ಮತ್ತಿತರರು ಇದ್ದರು.
ಮೊದಲಿಗೆ ಮಣವಟ್ಟಿರ ದಯ ಕುಟ್ಟಪ್ಪ ಪ್ರಾರ್ಥಿಸಿ ನಿರೂಪಿಸಿದರು. ಕಲ್ಯಾಟಂಡ ರಮೇಶ್ ಚಂಗಪ್ಪ ಸ್ವಾಗತಿಸಿ, ಕೊಂಡೀರ ಗಣೇಶ್ ವಂದಿಸಿದರು. -ದುಗ್ಗಳ