ಸುಂಟಿಕೊಪ್ಪ, ಮೇ 29: ‘ಸುಂಟಿಕೊಪ್ಪ ಫುಟ್‍ಬಾಲ್ ಕ್ರೀಡಾ ಪ್ರತಿಭೆಗಳು ದೇಶದ ತಂಡದಲ್ಲಿ ಸ್ಥಾನಪಡೆದು ಆಡುತ್ತಿದ್ದು ಹುಲಿ ಹುಟ್ಟಿದ ಊರಲ್ಲಿ ಹುಲಿಯೇ ಹುಟ್ಟುತ್ತದೆ ಎನ್ನುವದಕ್ಕೆ ಸುಂಟಿಕೊಪ್ಪವೇ ಸಾಕ್ಷಿ’ಯಾಗಿದೆ ಎಂದು ಶಾಸಕ ಅಪ್ಪಚ್ಚು ರಂಜನ್ ಹೇಳಿದರು.

ಬ್ಲೂ ಬಾಯ್ಸ್ ಯೂತ್ ಕ್ಲಬ್‍ನ 37ನೇ ವಾರ್ಷಿಕೋತ್ಸವ ಮತ್ತು ದಿ.ಡಿ.ಶಿವಪ್ಪ ಅವರ ಜ್ಞಾಪಕಾರ್ಥವಾಗಿ ಆಯೋಜಿಸಲಾಗಿದ್ದÀ 22 ನೇ ವರ್ಷದ ರಾಜ್ಯ ಮಟ್ಟದ ‘ಗೋಲ್ಡ್ ಕಪ್’ ಫÀುಟ್‍ಬಾಲ್ ಟೂರ್ನಿಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು. ವಿನೋದ್ ಶಿವಪ್ಪ ಅವರು ತನ್ನ ತಂದೆಯ ಜ್ಞಾಪಕಾರ್ಥವಾಗಿ ಕಳೆದ 22 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ರಾಜ್ಯಮಟ್ಟದ ಫÀುಟ್‍ಬಾಲ್ ಪಂದ್ಯಾವಳಿಯಿಂದ ಹಲವು ಪ್ರತಿಭೆಗಳ ಬೆಳವಣಿಗೆಗೆ ಅನಾವರಣಗೊಳಿಸಲು ಕ್ರೀಡಾಕೂಟವು ಸಹಕಾರಿಯಾಗಿದೆ. ಮುಂದಿನ ದಿನಗಳಲ್ಲಿ ಹಳ್ಳಿಯ ಮಕ್ಕಳು ಫÀುಟ್ಬಾಲ್ ಕ್ರೀಡೆಯಿಂದ ಪ್ರೇರಿತರಾಗಿ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ರಾಜ್ಯ ಹಾಗೂ ದೇಶಕ್ಕೆ ಉತ್ತಮ ಕ್ರೀಡಾಪಟುಗಳಾಗಿ ಮೂಡಿಬರಲೆಂದು ಹಾರೈಸಿದರು.

ರಾಜ್ಯ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷ ಟಿ.ಪಿ. ರಮೇಶ್ ಮಾತನಾಡಿ, ಕ್ರೀಡೆಯಲ್ಲಿ ಸೋಲು ಗೆಲುವು ಸಹಜ. ಕ್ರೀಡೆಯಲ್ಲಿ ಕೌಶಲ್ಯವನ್ನು ಇಟ್ಟುಕೊಂಡು ಹೆಚ್ಚಿನ ಆಸಕ್ತಿ ತೋರಿದರೆ ಮಾತ್ರ ಯಶಸ್ಸುಗೊಳಿಸಲು ಸಾಧ್ಯವೆಂದು ನುಡಿದರು.

ಮಾಜಿ ಶಾಸಕ ಕೆ.ಎಂ. ಇಬ್ರಾಹಿಂ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಅಂದಿನ ದಿನಗಳಲ್ಲಿ ದಾನಿಗಳು ಇಲ್ಲದೆ ಕಷ್ಟದ ಸಂದರ್ಭದಲ್ಲಿ ವಿನೋದ್ ಶಿವಪ್ಪ ತಂದೆಯ ಜ್ಞಾಪಕಾರ್ಥವಾಗಿ ನಡೆಸಿಕೊಂಡು ಬರುತ್ತಿದ್ದ ಕ್ರೀಡೆಯನ್ನು ನಿಲ್ಲಿಸದೆ ಮುಂದುವರೆಸುವಂತಾಗ ಬೇಕೆಂದು ಕಿವಿಮಾತು ಹೇಳಿದರು.

ಜಿ.ಪಂ. ಸದಸ್ಯೆ ಕೆ.ಪಿ. ಚಂದ್ರಕಲಾ ಮಾತನಾಡಿ, ಸರಕಾರಿ ಕೆರೆ, ಆಟದ ಮೈದಾನಗಳು ಜನಪ್ರತಿನಿಧಿಗಳು ಹಾಗೂ ಉಳ್ಳವರ ಪಾಲಾಗುತ್ತಿರುವ ಕಾಲಘಟ್ಟದಲ್ಲಿ ಈ ಮೈದಾನವನ್ನು ಉಳಿಸಿ ಬೆಳಸಿಕೊಂಡು ಹೋಗುತ್ತಿರುವದು ಶ್ಲಾಘನೀಯ. ಮುಂದಿನ ದಿನಗಳಲ್ಲಿ ಈ ಮೈದಾನದ ಅಭಿವೃದ್ಧಿಗೆ ಜಿ.ಪಂ. ವತಿಯಿಂದ ಅನುದಾನ ಒದಗಿಸಲು ಶ್ರಮಿಸುವದಾಗಿ ಭರವಸೆ ವ್ಯಕ್ತಪಡಿಸಿದರು.

ಜಿ.ಪಂ. ಮಾಜಿ ಸದಸ್ಯ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಬಿ. ಭಾರತೀಶ್ ಮಾತನಾಡಿ, ಬ್ಲೂಬಾಯ್ಸ್ ಯೂತ್ ಕ್ಲಬ್‍ಗೆ ಕಳೆದ 37 ವರ್ಷಗಳಿಂದ ಸ್ವಂತ ನಿವೇಶನ ಹಾಗೂ ಕಟ್ಟಡವನ್ನು ಹೊಂದಿಕೊಳ್ಳಲು ಇಂದಿಗೂ ಸಾಧ್ಯವಾಗದಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿ, ಮುಂದಿನ ದಿನಗಳಲ್ಲಿ ಗ್ರಾ.ಪಂ. ಹಾಗೂ ಜಿ.ಪಂ. ವತಿಯಿಂದ ನಿವೇಶನ ಒದಗಿಸಿಕೊಟ್ಟಲ್ಲಿ ಸ್ವಂತ ಕಟ್ಟಡ ನಿರ್ಮಿಸಲು ಶಾಸಕರು, ಸಂಸದರೊಂದಿಗೆ ಮಾತನಾಡಿ ಅನುದಾನ ಒದಗಿಸಲು ಶ್ರಮಿಸುವದಾಗಿ ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ಹಾಸನ ಜಿಲ್ಲಾ ಗ್ರಾಹಕರ ವ್ಯಾಜ್ಯದ ಅದ್ಯಕ್ಷ ಎ. ಲೋಕೇಶ್ ಕುಮಾರ್ ವಹಿಸಿದ್ದರು.

ವೇದಿಕೆಯಲ್ಲಿ ತಾ.ಪಂ. ಸದಸ್ಯ ಓಡಿಯಪ್ಪನ ವಿಮಲಾವತಿ, ಪನ್ಯ ತೋಟದ ಮಾಲೀಕ ಅಖಿಲೇಶ್ ಬಸಪ್ಪ, ಮಾಜಿ ಗ್ರಾ.ಪಂ. ಅಧ್ಯಕ್ಷ ಎಂ.ಎ. ಉಸ್ಮಾನ್, ವರ್ಕ್‍ಶಾಪ್ ಸಂಘದ ಅಧ್ಯಕ್ಷ ವಿ.ಎ. ಸಂತೋಷ್, ಮಾಜಿ ಗ್ರಾ.ಪಂ. ಉಪಾಧ್ಯಕ್ಷ ಸದಾಶಿವ ರೈ, ನಗರ ಕಾಂಗ್ರೆಸ್ ಅಧ್ಯಕ್ಷ ಕೆ.ಇ. ರಫೀಕ್, ಹಿರಿಯ ಪತ್ರಕರ್ತ ಬಿ.ಸಿ. ದಿನೇಶ್, ಬ್ಲೂ ಬಾಯ್ಸ್ ಸಂಘದ ಅಧ್ಯಕ್ಷ ಮೋನಪ್ಪ ಪೂಜಾರಿ, ಪದಾಧಿಕಾರಿಗಳು ಮತ್ತಿತರರು ಇದ್ದರು.

ಈ ಬಾರಿ ನಡೆದ ಫುಟ್ಬಾಲ್ ಪಂದ್ಯಾಟದಲ್ಲಿ ಅತ್ಯುತ್ತಮ ಶಿಸ್ತಿನ ತಂಡವೆಂದು ಕೋಸ್ಮಸ್ ಕ್ಯಾಲಿಕೆಟ್ ತಂಡ ಆಯ್ಕೆಗೊಂಡರೆ, ಉತ್ತಮ ಆಟಗಾರನಾಗಿ ಹೋರಿಜನ್ ತಂಡದ ವಿಜು ಪಡೆದುಕೊಂಡರೆ, ಪನ್ಯ ಎಫ್.ಸಿ. ಸುಂಟಿಕೊಪ್ಪ ತಂಡವು ಪಂದ್ಯಾವಳಿಯಲ್ಲೇ ಅತೀ ಹೆಚ್ಚು ಗೋಲು ಬಾರಿಸಿದ ತಂಡವೆಂದು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.

ಸಮರೋಪ ಸಮಾರಂಭಕ್ಕೂ ಮೊದಲು ಡಿ. ಶಿವಪ್ಪ ಮೆಮೋರಿಯಲ್ ಗೋಲ್ಡ್ ಕಪ್‍ನ್ನು ವಾಹನದಲ್ಲಿ ಇರಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕೇರಳದ ಚಂಡೆ ಮೇಳದೊಂದಿಗೆ ಮೆರವಣಿಗೆಯನ್ನು ನಡೆಸಲಾಯಿತು.