ಗೋಣಿಕೊಪ್ಪಲು, ಮೇ 28: ವೀರಾಜಪೇಟೆ ತಾಲೂಕು ಪತ್ರಿಕಾ ದಿನಾಚರಣೆಯನ್ನು ಜುಲೈ 9 ರಂದು ಆಚರಿಸುವ ನಿರ್ಧಾರವನ್ನು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕುಪ್ಪಂಡ ದತ್ತಾತ್ರಿ ಅಧ್ಯಕ್ಷತೆಯಲ್ಲಿ ಸಂಘದ ಸಭಾಂಗಣದಲ್ಲಿ ನಡೆದ ತಾಲೂಕು ವಾರ್ಷಿಕ ಮಹಾಸಭೆಯಲ್ಲಿ ತೆಗೆದುಕೊಳ್ಳಲಾಯಿತು. ಪತ್ರಕರ್ತರಿಗೆ ವಿವಿಧ ಕ್ರೀಡಾಕೂಟ ಸೇರಿದಂತೆ ಸಹಭಾಗಿತ್ವಕ್ಕೆ ಹೆಚ್ಚು ಆದÀ್ಯತೆ ಕೊಡಲು ಕಾರ್ಯಕ್ರಮ ನಡೆಸಲು ನಿರ್ಧರಿಸಲಾಯಿತು. ಪತ್ರಕರ್ತ ಕುಟುಂಬಕ್ಕೂ ಹಲವು ಕಾರ್ಯಕ್ರಮ ಆಯೋಜಿಸುವಂತೆ ಸದಸ್ಯರ ಸಲಹೆಯಂತೆ ನಿರ್ಧರಿಸಲಾಯಿತು. ಇದರಂತೆ ಕಟ್ಟಡದ ಉಳಿದಿರುವ ಕಾಮಗಾರಿಯನ್ನು ಶೀಘ್ರದಲ್ಲಿ ಮುಗಿಸಲು ಕಟ್ಟಡ ಸಮಿತಿಗೆ ಹೆಚ್. ಕೆ. ಜಗದೀಶ್ ಸಣ್ಣುವಂಡ ಕಿಶೋರ್ ನಾಚಪ್ಪ, ಅಜ್ಜಮಾಡ ಕುಶಾಲಪ್ಪ, ರೆಜಿತ್ ಕುಮಾರ್, ಸುಬ್ರಮಣಿ, ಸಲೀಂ ಹಾಗೂ ಮಂಜುನಾಥ್ ನೇತೃತ್ವದಲ್ಲಿ ಸಮಿತಿ ಪುನರ್ ರಚಿಸಲಾಯಿತು.

ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ಹೆಚ್ಚು ಸಂಘಟಿತರಾಗುವ ಮೂಲಕ ಸಂಘದ ಬಲವರ್ಧನೆಗೆ ಸದಸ್ಯರು ಪಣ ತೊಡಬೇಕು. ತಾಲೂಕು ಸಭೆಗೆ ಕಳೆದ ಬಾರಿಗಿಂತ ಹೆಚ್ಚು ಸದಸ್ಯರು ಪಾಲ್ಗೊಂಡಿರುವದು ಸಹಭಾಗಿತ್ವದ ಮೂಲವಾಗಿದೆ ಎಂದರು.ಮುಂದಿನ ಪದಾಧಿಕಾರಿಗಳ ಸಭೆಯನ್ನು ವಿರಾಜಪೇಟೆ, ಸಿದ್ದಾಪುರ ಸುತ್ತಮುತ್ತ ನಡೆಸುವ ಮೂಲಕ ಸದಸ್ಯರನ್ನು ಮತ್ತಷ್ಟು ಒಂದಾಗಿಸುವ ನಿರ್ಣಯ ತೆಗೆದುಕೊಳ್ಳಲಾಯಿತು. ಕಳೆದ ಬಾರಿಯ ವರದಿ ಹಾಗೂ ಲೆಕ್ಕಪತ್ರ ಮಂಡನೆ ಅಂಗೀಕರಿಸಲಾಯಿತು.

ಪ್ರ. ಕಾರ್ಯದರ್ಶಿ ರಾಜ್ ಕುಶಾಲಪ್ಪ ಕಳೆದ ಮಹಾಸಭೆಯ ವರದಿ ವಾಚಿಸಿದರು. ಖಜಾಂಜಿ ಸಣ್ಣುವಂಡ ಕಿಶೋರ್ ನಾಚಪ್ಪ ಲೆಕ್ಕಪತ್ರ ಮಂಡಿಸಿದರು. ರೇಖಾ ಗಣೇಶ್ ಪ್ರಾರ್ಥಿಸಿದರು. ಹೆಚ್. ಕೆ. ಜಗದೀಶ್ ವಂದಿಸಿದರು. ವೀಕ್ಷಕರಾಗಿ ಜಿಲ್ಲಾ ಸಂಘದ ಉಪಾಧ್ಯಕ್ಷ ಪಳೆಯಂಡ ಪಾರ್ಥ ಚಿಣ್ಣಪ್ಪ ಪಾಲ್ಗೊಂಡಿದ್ದರು.