ನಾಪೆÇೀಕ್ಲು, ಮೇ. 29: ರಾಜ್ಯ ಸರಕಾರದ ಆದೇಶದಂತೆ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸುವ ನಿಟ್ಟಿನಲ್ಲಿ ರಾಜ್ಯ ಗೃಹ ಇಲಾಖೆಯ ಅಧಿಕಾರಿಗಳು, ಸ್ಥಳೀಯ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖಾ ಅಧಿಕಾರಿಗಳ ತಂಡ ನಾಪೆÇೀಕ್ಲು ಪಟ್ಟಣದ ಅಂಗಡಿ ಮಳಿಗೆಗಳಿಗೆ ದಿಢೀರ್ ಧಾಳಿ ನಡೆಸಿ ಧೂಮಪಾನ ನಿಷೇಧದ ಬಗ್ಗೆ ನಾಮಫಲಕ ಅಳವಡಿಸದ ಮಾಲೀಕರ ವಿರುದ್ಧ 157 ಪ್ರಕರಣಗಳನ್ನು ದಾಖಸುವದರ ಮೂಲಕ ಸುಮಾರು 18,300 ರೂ. ದಂಡ ವಿಧಿಸಿದೆ.
ಇದಕ್ಕೂ ಮೊದಲು ಸ್ಥಳೀಯ ಪೆÇಲೀಸ್ ಠಾಣೆಯಲ್ಲಿ ಗೃಹ ಇಲಾಖೆಯ ಅಧಿಕಾರಿ ಡಾ. ಜಾನ್ ಕೆನಡಿಯಾ ನೇತೃತ್ವದಲ್ಲಿ ಧೂಮಪಾನದಿಂದ ಆಗುವ ಹಾನಿಗಳು ಮತ್ತು ದುಷ್ಪರಿಣಾಮಗಳ ಬಗ್ಗೆ ಸಂಬಂಧಿಸಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಸರಕಾರಿ ಶಿಕ್ಷಣ ಕೇಂದ್ರದ ಮುಖ್ಯಸ್ಥರು, ಕಂದಾಯ ಇಲಾಖಾಧಿಕಾರಿಗಳು, ಪೆÇಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡುವ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ಜಾನ್ ಕೆನಡಿಯಾ ನಾಪೆÇೀಕ್ಲು ವ್ಯಾಪ್ತಿಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಅಭಿವೃದ್ಧಿ ಅಧಿಕಾರಿಗಳ ಮೂಲಕ ಧೂಮಪಾನ ನಿಷೇಧದ ಬಗ್ಗೆ ನಾಮ ಫಲಕ ಅಳವಡಿಸಲು ಸೂಚಿಸಲಾಗುವದು. ತಪ್ಪಿದಲ್ಲಿ ಅಂತಹ ಅಂಗಡಿ ಮಳಿಗೆಗಳ ಪರವಾನಿಗೆಯನ್ನು ರದ್ದು ಪಡಿಸಲಾಗುವದು. ಖಾಯಂ ನಾಮಫಲಕ ಅಳವಡಿಸುವದು ಕಡ್ಡಾಯವಾಗಿದೆ. ಪೇಪರ್ಗಳಲ್ಲಿ ಬರೆದು ಅಂಟಿಸಿರುವದನ್ನು ಪರಿಗಣಿಸಲಾಗುವದಿಲ್ಲ ಎಂದರು.
ಸಭೆಯಲ್ಲಿ ಠಾಣಾಧಿಕಾರಿ ಬಿ.ಎಸ್.ವೆಂಕಟೇಶ್, ಸ್ಥಳೀಯ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲೆ ಪಿ.ಕೆ.ನಳಿನಿ, ಕಂದಾಯ ಪರಿವೀಕ್ಷಕ ರಾಮಯ್ಯ, ಎ.ಎಸ್ಗಳಾದ ದೇವರಾಜ್, ಶೀಧರ್, ಪಿಡಿಓಗಳಾದ ಕೇಶವ್, ವೀಣಾ ಕುಮಾರಿ, ಸಚಿನ್, ಚೋಂದಕ್ಕಿ, ಪೂವಮ್ಮ, ಹೆಡ್ ಕಾನ್ಸ್ಟೆಬಲ್ ಅಪ್ಪಾಜಿ, ಅರಣ್ಯ ಇಲಾಖೆಯ ವಿಜಯ ಕುಮಾರ್, ಕಾಳೇಗೌಡ ಇದ್ದರು.