ಸೋಮವಾರಪೇಟೆ,ಮೇ.29: ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರಕಾರ ನೂತನವಾಗಿ ಜಾರಿಗೆ ತಂದಿರುವ ಮಾಂಸಕ್ಕಾಗಿ ಜಾನುವಾರುಗಳ ಮಾರಾಟ ನಿಷೇಧ ಕಾಯ್ದೆಯನ್ನು ಸ್ವಾಗತಿಸಿ ಇಲ್ಲಿನ ಹಿಂದೂ ಜಾಗರಣಾ ವೇದಿಕೆಯ ಆಶ್ರಯದಲ್ಲಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು.
ಇಲ್ಲಿನ ಪುಟ್ಟಪ್ಪ ವೃತ್ತದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಸರಕಾರದ ಆದೇಶವನ್ನು ಸ್ವಾಗತಿಸಿ ಪ್ರಧಾನಿ ಮೋದಿ ಸೇರಿದಂತೆ ಕೇಂದ್ರ ಸರ್ಕಾರದ ಪರ ಜಯಘೋಷ ಮೊಳಗಿಸಿದರು. ಸರಕಾರದ ನಿರ್ಧಾರವನ್ನು ಸಂಘಟನೆಗಳ ಪ್ರಮುಖರು ಮುಕ್ತ ಕಂಠದಿಂದ ಶ್ವಾಘಿಸಿದರು.
ಈ ಸಂದರ್ಭ ಹಿಂದೂಪರ ಸಂಘಟನೆಗಳ ಪ್ರಮುಖರಾದ ಸುಭಾಷ್ ತಿಮ್ಮಯ್ಯ, ಉಮೇಶ್, ನಗರಳ್ಳಿ ರಮೇಶ್, ದರ್ಶನ್ ಜೋಯಪ್ಪ, ಹುಲ್ಲೂರಿಕೊಪ್ಪ ಮಾದಪ್ಪ, ಟಿ.ಕೆ. ರಮೇಶ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.