ಮಡಿಕೇರಿ, ಮೇ 28 : ಕೊಡಗು ಜಿಲ್ಲೆಯ ಐದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳ ಸಭೆಯನ್ನು ಶೀಘ್ರ ನಡೆಸುವ ಮೂಲಕ ಪಕ್ಷದೊಳಗಿನ ಗೊಂದಲವನ್ನು ನಿವಾರಿಸಲಾಗುವದು ಎಂದು ಜಿಲ್ಲಾ ಕಾಂಗ್ರೆಸ್ ಪ್ರಬಾರ ಅಧ್ಯಕ್ಷ ಟಿ.ಪಿ. ರಮೇಶ್ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಪಕ್ಷ ಯಾರನ್ನೂ ಕಡೆಗಣಿಸಿಲ್ಲ, ಕಡೆಗಣಿಸುವದೂ ಇಲ್ಲವೆಂದು ಸ್ಪಷ್ಟಪಡಿಸಿದರು. ಪಕ್ಷಕ್ಕೆ ಯಾರೂ ಕೂಡ ರಾಜೀನಾಮೆ ನೀಡುವ ಸಂಭವವೇ ಇಲ್ಲವೆಂದು ತಿಳಿಸಿದರು. ಪಕ್ಷದ ಐದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳ ಸಭೆ ನಡೆಸಿ ವಲಯ ಸಮಿತಿಗಳ ಪುನರ್ ರಚನೆಗೆ ಅವರುಗಳು ನೀಡುವ ದಿನಾಂಕದಂದೇ ಪ್ರವಾಸ ಕೈಗೊಂಡು ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸುವದಾಗಿ ತಿಳಿಸಿದರು.

ಜೂ.10 ರಂದು ಎಐಸಿಸಿ ಮತ್ತು ಕೆಪಿಸಿಸಿಯ ವೀಕ್ಷಕರುಗಳು ಎರಡು ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡಿ ಪಕ್ಷದ ಎಲ್ಲಾ ಮುಖಂಡರುಗಳೊಂದಿಗೆ ಸಮಾ ಲೋಚನೆ ನಡೆಸಲಿದ್ದಾರೆ. ಪಕ್ಷದ ಪರ ಕೆಲಸ ಮಾಡಿದ್ದರೆ ವೀಕ್ಷಕರಿಂದ ‘ಶಹಬ್ಬಾಸ್ ಗಿರಿ’ ದೊರಕಲಿದೆ. ಕೆಲಸ ವಾಗದಿದ್ದರೆ ಕೆಲಸ ಮಾಡಿಸಲಿದ್ದಾರೆ.

ಜಿಲ್ಲೆಯಲ್ಲಿ ಕಾಂಗ್ರೆಸ್ ಸದಸ್ಯರ ಸಂಖ್ಯೆ ಕಡಿಮೆ ಇದೆ ಎನ್ನುವ ಆರೋಪ ಸತ್ಯವಾಗಿದೆ. ಐದು ಬ್ಲಾಕ್ ಕಾಂಗ್ರೆಸ್

(ಮೊದಲ ಪುಟದಿಂದ) ಸಮಿತಿಯಲ್ಲಿ ಸದಸ್ಯ ಬಲ ಏನೇನು ಸಾಲದು. ಎಲ್ಲಾ ಬ್ಲಾಕ್‍ಗಳಲ್ಲಿ ಪಕ್ಷ ಪುನರ್ ಸಂಘÀಟನೆಯಾಗಬೇಕಾಗಿದೆ ಎಂದು ಟಿ.ಪಿ.ರಮೇಶ್ ಅಭಿಪ್ರಾಯಪಟ್ಟರು.

ಕಾಂಗ್ರೆಸ್ ಒಂದು ಜಾತ್ಯತೀತ ಪಕ್ಷವಾಗಿದ್ದು, ಎಲ್ಲಾ ಸಮುದಾಯದವರು ಅಧಿಕಾರವನ್ನು ಬಯಸುತ್ತಾರೆ. ಅದರಲ್ಲಿ ತಪ್ಪೇನು ಇಲ್ಲವೆಂದು ತಿಳಿಸಿದ ಅವರು, ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟು ಸಹಕಾರ ನೀಡುತ್ತಿದ್ದಾರೆ. ಪಕ್ಷದೊಳಗೆ ಯಾವದೇ ಭಿನ್ನಾಭಿಪ್ರಾಯಗಳಿದ್ದರು ಪಕ್ಷದ ಮನೆಯೊಳಗೆ ಕುಳಿತು ಚರ್ಚೆ ಮಾಡಬೇಕು. ಕಾಂಗ್ರೆಸ್ ಪಕ್ಷದಲ್ಲಿ ಪಕ್ಷದ ವಿಚಾರಗಳನ್ನು ಬಹಿರಂಗ ವಾಗಿ ಹೇಳಲು ಅವಕಾಶವಿಲ್ಲ. ಪಕ್ಷ ವಿರೋಧಿ ಹೇಳಿಕೆ ನೀಡಿದರೆ ಸೂಕ್ತ ಕ್ರಮ ಕೈಗೊಳ್ಳಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಈಗಾಗಲೇ ಸೂಚನೆ ನೀಡಿದ್ದಾರೆ. ಪಕ್ಷದ ಯಾರೊಬ್ಬರು ಬಹಿರಂಗ ಹೇಳಿಕೆಗಳನ್ನು ನೀಡಿ ಗೊಂದಲ ಸೃಷ್ಟಿಸದೆ ನೇರವಾಗಿ ತಮ್ಮ ಬಳಿ ಬಂದು ಚರ್ಚಿಸುವಂತೆ ಮನವಿ ಮಾಡಿದರು.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ 1300 ಮಂದಿ ಬಡವರಿಗೆ ನಿವೇಶನದ ಹಕ್ಕು ಪತ್ರ ವಿತರಿಸಲಾಗಿದೆ. ಇನ್ನು 2500 ಫಲಾನುಭವಿಗಳಿಗೆ ಹಕ್ಕು ಪತ್ರ ನೀಡಲಾಗುತ್ತಿದೆ. ಕಂದಾಯ ಕಛೇರಿಯಲ್ಲಿ ಕಾಂಗ್ರೆಸ್ ಸರ್ಕಾರ ಬಂದ ನಂತರ ಜನಸಾಮಾನ್ಯರ ಕೆಲಸ ಆರಂಭವಾಗಿದೆ. ಬಿಜೆಪಿ ಸರ್ಕಾರವಿದ್ದಾಗ ಈ ರೀತಿಯ ಯಾವದೇ ಕಾರ್ಯಗಳು ನಡೆದಿರಲಿಲ್ಲವೆಂದು ಟಿ.ಪಿ.ರಮೇಶ್ ಆರೋಪಿಸಿದರು.

ಮುಂದಿನ ದಿನಗಳಲ್ಲಿ ಐದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಿಗೆ ಉಸ್ತುವಾರಿ ಸಚಿವರೊಂದಿಗೆ ಮುಕ್ತವಾಗಿ ಚರ್ಚಿಸಲು ಅವಕಾಶ ದೊರೆಯಲಿದ್ದು, ಲಿಖಿತ ರೂಪದಲ್ಲಿ ಮನವಿಗಳನ್ನು ಸಲ್ಲಿಸಬಹುದಾಗಿದೆ. ವಿನಾಕಾರಣ ನಾಯಕರ ದೂಷಣೆ ಮಾಡುವದನ್ನು ಬಿಟ್ಟು ಸಂಪರ್ಕದ ಕೊರತೆಯನ್ನು ನೀಗಿಸಿಕೊಳ್ಳಬೇಕಾಗಿದೆ. ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ ಅವರು ವಾರದ ಪ್ರತಿ ಶುಕ್ರವಾರ ತಮ್ಮ ಕಚೇರಿಯಲ್ಲಿ ಹಾಗೂ ತಾವು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಹಾಜರಿದ್ದು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದೇವೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷÀರುಗಳಿಗೆ ಕೂಡ ಶುಕ್ರವಾರ ಕಚೇರಿಗೆ ಭೇಟಿ ನೀಡುವಂತೆ ತಿಳಿಸಲಾಗಿದೆ. ಈ ರೀತಿ ಮಾಡುವದರಿಂದ ಗೊಂದಲಗಳು ನಿವಾರಣೆಯಾಗುತ್ತದೆ ಎಂದು ಟಿ.ಪಿ. ರಮೇಶ್ ಅಭಿಪ್ರಾಯಪಟ್ಟರು. ಪಕ್ಷದ ಕಾರ್ಯಕರ್ತರು ಅಥವಾ ಯಾರೇ ಸಾರ್ವಜನಿಕರು ತಮ್ಮ ಸಮಸ್ಯೆಗಳ ಬಗ್ಗೆ ಅರ್ಜಿ ಸಹಿತ ತಮ್ಮ ಬಳಿ ಬಂದರೆ ಸ್ಪಂದಿಸುವದಾಗಿ ತಿಳಿಸಿದ ಅವರು ದೂರವಾಣಿ ಮೂಲಕ ಸಮಸ್ಯೆ ಹೇಳಿಕೊಳ್ಳುವ ಬದಲು ಮುಕ್ತವಾಗಿ ಚರ್ಚಿಸಿ ಎಂದು ಸಲಹೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಸಲಾಂ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹನೀಫ್ ಸಂಪಾಜೆ, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಸಂಯೋಜಕ ತೆನ್ನೀರ ಮೈನ ಹಾಗೂ ನಾಪೋಕ್ಲು ಗ್ರಾ.ಪಂ ಅಧ್ಯಕ್ಷ ಕೆ.ಯು.ಇಸ್ಮಾಯಿಲ್ ಉಪಸ್ಥಿತರಿ ದ್ದರು.