ಮಡಿಕೇರಿ, ಮೇ 29: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಅಧಿಕವಾಗಿದ್ದು, ದೇಶದ ಹಲವು ರಾಜ್ಯಗಳಲ್ಲಿ ಮುಂದಿನ ಇಪ್ಪತ್ನಾಲ್ಕು ಗಂಟೆಗಳಲ್ಲಿ ಚಂಡಮಾರುತದ ಅನುಭವ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ಮಾಡಿದೆ.ವಾಯುಭಾರ ಕುಸಿತವು ಉಷ್ಣವಲಯದ ಚಂಡಮಾರುತವಾಗಿ ಬದಲಾಗಲಿದ್ದು, ಅರಬ್ಬಿ ಸಮುದ್ರದ ಪ್ರದೇಶಗಳಲ್ಲಿ ಭಾರೀ ಮಳೆಯ ಅನುಭವವಾಗಲಿದೆ. ಕೇರಳಕ್ಕೆ ಹೆಜ್ಜೆಯಿಡಲಿರುವ ನೈರುತ್ಯ ಮಳೆ ನಿಗದಿಯಂತೆ ಇನ್ನೆರಡು ದಿನಗಳಲ್ಲಿ ಸುರಿಯಲಿದ್ದು, ಭೂಕುಸಿತದಿಂದಾಗಿ ವಾಯುವಿನ ವೇಗ ಹೆಚ್ಚಿದ್ದು, ನೈರುತ್ಯದತ್ತ ಮೋಡಗಳನ್ನು ತಳ್ಳುತ್ತಿದೆ ಎನ್ನಲಾಗಿದೆ. ವಾಡಿಕೆಯಂತೆ ಜೂನ್ ಮೊದಲ ವಾರದಲ್ಲೇ ಕೊಡಗಿಗೂ ಮಳೆ ಕಾಣಿಸಲಿದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ಯಿತ್ತಿದೆ. ಈಗಾಗಲೇ ಜಿಲ್ಲೆಯಲ್ಲಿ ಜನರಿಗೆ ಮಳೆಯ ಅನುಭವವುಂಟಾಗಿದೆ.