ಮಡಿಕೇರಿ, ಮೇ 28: ಮದೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಡುವ ಗ್ರಾಮಗಳಾದ ಬೆಟ್ಟತ್ತೂರು ಗ್ರಾಮದ ವಾರ್ಡ್ ಸಭೆ ತಾ. 30 ರಂದು ಬೆಳಿಗ್ಗೆ 10.30 ಗಂಟೆಗೆ ಬೆಟ್ಟತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆಯಲಿದೆ. ಅವಂದೂರು ಗ್ರಾಮದ ವಾರ್ಡ್ ಸಭೆ ತಾ. 30 ರಂದು ಅಪರಾಹ್ನ 2 ಗಂಟೆಗೆ ಅವಂದೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನಡೆಯಲಿದೆ. ಕಾಟಕೇರಿ ಹಾಗೂ ತಾಳತ್ತಮನೆ ಗ್ರಾಮದ ವಾರ್ಡ್ ಸಭೆ ತಾ. 31 ರಂದು ಬೆಳಿಗ್ಗೆ 10 ಗಂಟೆಗೆ ತಾಳತ್ತಮನೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ. ಮದೆ ಗ್ರಾಮದ ವಾರ್ಡ್ ಸಭೆ ತಾ. 31 ರಂದು ಮಧ್ಯಾಹ್ನ 12.30 ಗಂಟೆಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ನಡೆಯಲಿದೆ. ಜೋಡುಪಾಲ ಮತ್ತು ದೇವರಕೊಲ್ಲಿ ಗ್ರಾಮದ ವಾರ್ಡ್‍ಸಭೆ ತಾ. 31 ರಂದು ಅಪರಾಹ್ನ 2.30 ಗಂಟೆಗೆ ದೇವರಕೊಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ.ಬೆಟ್ಟಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಗ್ರಾಮಗಳ ವಾರ್ಡ್‍ಸಭೆ ಆಯಾ ವಾರ್ಡ್‍ನ ಸದಸ್ಯರ ಅಧ್ಯಕ್ಷತೆಯಲ್ಲಿ ತಾ. 30 ರಂದು ಪಾಲೂರು ಗ್ರಾಮದ ಪುದಿಯನೆರವನ ಮನೆಯ ಪಕ್ಕ ಕೊಲ್ಲಿಬಾಣೆಯಲ್ಲಿ ಪೂರ್ವಾಹ್ನ 10 ಗಂಟೆಗೆ ಬಿ.ಎ. ರಾಮಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ತಾ. 30 ರಂದು ತೆನ್ನೀರ ಪೊನ್ನಪ್ಪ ಅವರ ಅಧ್ಯಕ್ಷತೆಯಲ್ಲಿ ಮಧ್ಯಾಹ್ನ 12 ಗಂಟೆಗೆ ಅರ್ವತೋಕ್ಲು ಬೇಕೋಟು ವಿಷ್ಣಪ್ಪ ದೇವಸ್ಥಾನದ ಬಳಿ ನಡೆಯಲಿದೆ.

ಗ್ರಾಮಸಭೆ: ಮದೆ ಗ್ರಾಮ ಪಂಚಾಯಿತಿಯ ಗ್ರಾಮಸಭೆ ಜೂನ್ 1 ರಂದು ಬೆಳಿಗ್ಗೆ 11 ಗಂಟೆಗೆ ಪಂಚಾಯಿತಿ ಅಧ್ಯಕ್ಷ ಮುದ್ಯನ ಬಿ. ಚಂದ್ರಶೇಖರ್ ಅಧ್ಯಕ್ಷತೆಯಲ್ಲಿ ಮದೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣಲದಲ್ಲಿ ನೋಡಲ್ ಅಧಿಕಾರಿ ಉಪಸ್ಥಿತಿಯಲ್ಲಿ ನಡೆಯಲಿದೆ.

ಬೆಟ್ಟಗೇರಿ ಗ್ರಾಮದ ಗ್ರಾಮಸಭೆ ಜೂನ್ 6 ರಂದು ಪೂರ್ವಾಹ್ನ 11 ಗಂಟೆಗೆ ಪಂಚಾಯಿತಿ ಅಧ್ಯಕ್ಷೆ ಶಾಂತಿ ಅವರ ಅಧ್ಯಕ್ಷತೆಯಲ್ಲಿ ಬೆಟ್ಟಗೇರಿಯ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ನೋಡಲ್ ಅಧಿಕಾರಿಯ ಉಪಸ್ಥಿತಿಯಲ್ಲಿ ನಡೆಯಲಿದೆ.