ಮಡಿಕೇರಿ, ಮೇ 31 : ಮಡಿಕೇರಿ, ವೀರಾಜಪೇಟೆ, ಸೋಮವಾರಪೇಟೆ ತಾಲೂಕಿಗೆ ಸಂಬಂಧಿಸಿದ ಹೋಬಳಿಗಳಲ್ಲಿ ಜೂನ್ ತಿಂಗಳಲ್ಲಿ ಪಿಂಚಣಿ ಅದಾಲತ್ ನಡೆಯಲಿದೆ. ಜೂ. 1 ರಂದು ಮಧ್ಯಾಹ್ನ 1 ಗಂಟೆಗೆ ಸಂಪಾಜೆ, ಜೂ. 2 ರಂದು ಮಧ್ಯಾಹ್ನ 12 ಗಂಟೆಗೆ ಮಡಿಕೇರಿ, ಜೂ. 3 ರಂದು ಬೆಳಿಗ್ಗೆ 11.30 ಗಂಟೆಗೆ ನಾಪೋಕ್ಲು, ಮಧ್ಯಾಹ್ನ 1 ಗಂಟೆಗೆ ಭಾಗಮಂಡಲ, ಜೂ. 5 ರಂದು ಬೆಳಿಗ್ಗೆ 10.30 ಗಂಟೆಗೆ ಶಾಂತಳ್ಳಿ, ಮಧ್ಯಾಹ್ನ 12.30 ಗಂಟೆಗೆ ಶನಿವಾರಸಂತೆ, ಮಧ್ಯಾಹ್ನ 1 ಗಂಟೆಗೆ ಕೊಡ್ಲಿಪೇಟೆ, ಜೂ. 7 ರಂದು ಬೆಳಿಗ್ಗೆ 10.30 ಗಂಟೆಗೆ ಅಮ್ಮತ್ತಿ, ಬೆಳಿಗ್ಗೆ 11 ಗಂಟೆಗೆ ಪೊನ್ನಂಪೇಟೆ, ಮಧ್ಯಾಹ್ನ 11.30 ಗಂಟೆಗೆ ಬಾಳೆಲೆ, ಮಧ್ಯಾಹ್ನ 12.30 ಗಂಟೆಗೆ ಶ್ರೀಮಂಗಲ, ಮಧ್ಯಾಹ್ನ 1 ಗಂಟೆಗೆ ಹುದಿಕೇರಿ, ಮಧ್ಯಾಹ್ನ 2.30 ಗಂಟೆಗೆ ವೀರಾಜಪೇಟೆ, ಜೂ. 9 ರಂದು ಮಧ್ಯಾಹ್ನ 2.30 ಗಂಟೆಗೆ ಸುಂಟಿಕೊಪ್ಪ, ಮಧ್ಯಾಹ್ನ 3.30 ಗಂಟೆಗೆ ಕುಶಾಲನಗರದಲ್ಲಿ ಪಿಂಚಣಿ ಅದಾಲತ್ ನಡೆಯಲಿದೆ ಎಂದು ಮಡಿಕೇರಿ ಉಪವಿಭಾಗದ ಉಪವಿಭಾಗಾಧಿಕಾರಿ ಡಾ. ನಂಜುಂಡೇಗೌಡ ತಿಳಿಸಿದ್ದಾರೆ.