ಮಡಿಕೇರಿ, ಮೇ 30: ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ಉಳಿಕಲ್ ತಾಲೂಕಿನ ಇತಿಹಾಸ ಪ್ರಸಿದ್ಧ ಕೊಡಗಿನ ಜನರ ಆರಾಧ್ಯ ದೇವರಾದ ಬೈತೂರು ಮತ್ತು ಪೈಯ್ಯಾವೂರು ದೇವಸ್ಥಾನಗಳ ಅಭಿವೃದ್ಧಿ ಕಾರ್ಯ ನಡೆಯುತ್ತಿದ್ದು, ಭಕ್ತರು ಸಹಕಾರ ನೀಡಬೇಕೆಂದು ದೇವಾಲಯ ಆಡಳಿತ ಮಂಡಳಿಯ ಅಧ್ಯಕ್ಷ ಕೆ.ವಿ.ಜಿ. ಕುರೂಪ್ ಮನವಿ ಮಾಡಿದ್ದಾರೆ.

ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಬೈತೂರಿನಿಂದ 2 ಕಿ.ಮೀ. ಅಂತರದಲ್ಲಿ ಪೈಯ್ಯೂರುಕೇರಿ ಎಂಬ ಗ್ರಾಮವಿದ್ದು, ದ್ವಾಪರ ಯುಗದಲ್ಲಿ ಶಿವ ಮತ್ತು ಅರ್ಜುನನ ನಡುವೆ ಇಲ್ಲಿ ಯುದ್ಧ ಸಂಭವಿಸಿತ್ತು ಎನ್ನುವ ಪೌರಾಣಿಕ ಹಿನ್ನೆಲೆ ಇದೆ.

ಈ ಊರಿನಲ್ಲಿ ಅರ್ಜುನಕೊಟ್ಟ ಎಂಬ ಸಣ್ಣ ಬೆಟ್ಟವಿದ್ದು, ಅಲ್ಲಿ ಶಿವನ ದೇವಾಲಯವಿದೆ. ಸುಮಾರು 800 ವರ್ಷಗಳ ಹಿಂದೆ ನಶಿಸಿಹೋಗಿದ್ದ 5 ಕ್ಷೇತ್ರಗಳಲ್ಲಿ ಈ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ 2010ನೇ ಇಸವಿಯಲ್ಲಿ ಆರಂಭಗೊಂಡಿತ್ತು. 2016 ರಲ್ಲಿ ದೇವರ ಪ್ರತಿಷ್ಠಾಪನೆಯಾಗಿದ್ದು, ಇನ್ನೂ ಅನೆÉೀಕ ಅಭಿವೃದ್ಧಿ ಕಾರ್ಯಗಳು ಬಾಕಿ ಉಳಿದಿವೆ. ಬೈತೂರು ದೇವರೊಂದಿಗೆ ಧಾರ್ಮಿಕ ಸಂಬಂಧವನ್ನು ಹೊಂದಿರುವ ಕೊಡಗಿನ ಭಕ್ತರು ದೇವಾಲಯದ ಅಭಿವೃದ್ಧಿಗೆ ಕೈಜೋಡಿಸಬೇಕೆಂದು ಕೆ.ವಿ.ಜಿ. ಕುರೂಪ್ ಮನವಿ ಮಾಡಿದರು.

ವಂತಿಗೆಯ ರೂಪದಲ್ಲಿ ನೀಡುವ ಹಣವನ್ನು ಈ ಖಾತೆಗೆ ಕಳುಹಿಸಿಕೊಡಬಹುದಾಗಿದೆ. ಯೂನಿಯನ್ ಬ್ಯಾಂಕ್ ಖಾತೆ ಸಂಖ್ಯೆ: 616002010007776 (ಐಎಫ್‍ಎಸ್‍ಸಿ ಕೋಡ್-ಐಎಸ್‍ಟಿಯುಬಿಐಎನ್ 0561606). ಮೊಬೈಲ್ ಸಂಖ್ಯೆ-9605171773ನ್ನು ಸಂಪರ್ಕಿಸುವಂತೆ ಕೋರಿದರು.

ಗೋಷ್ಠಿಯಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಂ.ಕೆ. ಅಪ್ಪಯ್ಯ, ಕಾರ್ಯದರ್ಶಿ ಅಚ್ಚುತ್ತನ್, ದೇವಸ್ಥಾನ ಸಮಿತಿಯ ಉಪಾಧ್ಯಕ್ಷ ಬಾಲಕೃಷ್ಣ, ಸದಸ್ಯರುಗಳಾದ ಪ್ರಭಾಕರ ಹಾಗೂ ಸುಜಿತ್ ಉಪಸ್ಥಿತರಿದ್ದರು.