ವೀರಾಜಪೇಟೆ, ಮೇ 30: ವೀರಾಜಪೇಟೆ ಬಳಿಯ ಬಿಟ್ಟಂಗಾಲದ ನಾಂಗಾಲ ಗ್ರಾಮದ ಕೆ.ಜಗನ್ ಎಂಬವರ ಮನೆಯ ಹತ್ತಿರ ಕೆರೆಯ ಬಳಿಯಲ್ಲಿ ಕೇರೆ ಹಾವನ್ನು ನುಂಗುತ್ತಿದ್ದ ಭಾರೀ ಗಾತ್ರದ ಕಾಳಿಂಗ ಸರ್ಪವನ್ನು ಬಿಟ್ಟಂಗಾಲದ ಪೊನ್ನೀರ ಸ್ನೇಕ್ ಗಗನ್ ಸೆರೆ ಹಿಡಿದು ಕೊಡಗು ಕೇರಳ ಗಡಿ ಪ್ರದೇಶವಾದ ಮಾಕುಟ್ಟ ಅರಣ್ಯಕ್ಕೆ ಬಿಟ್ಟರು.ಮೂರು ದಿನಗಳಿಂದ ಗ್ರಾಮಸ್ತರಿಗೆ ಬುಸ್ ಗುಡುತ್ತಾ ಭೀತಿ ಹುಟ್ಟಿಸಿದ್ದ ಸುಮಾರು ಹತ್ತು ಅಡಿ ಉದ್ದದ ಮೂರೂವರೆ ಇಂಚು ದಪ್ಪದ ಕಾಳಿಂಗ ಸರ್ಪ ನಿನ್ನೆ ದಿನ ಸಂಜೆ ಹಾವನ್ನು ನುಂಗುತ್ತಿರುವ ದೃಶ್ಯವನ್ನು ನೋಡಿದ ಗ್ರಾಮಸ್ತರು ತಕ್ಷಣ ಸ್ನೇಕ್ ಗಗನ್ ಅವರನ್ನು ಸಂಪರ್ಕಿಸಿದಾಗ ಕಾಳಿಂಗ ಸರ್ಪವನ್ನು ಸೆರೆ ಹಿಡಿಯಲಾಯಿತು.