ಮಡಿಕೇರಿ, ಮೇ 31 : ಸಿಪಾಯಿ, ಸೈನಿಕ ಲಿಪಿಕ, ಉಗ್ರಾಣ ಪಾಲಕ ತಾಂತ್ರಿಕ, ಸೈನಿಕ ತಾಂತ್ರಿಕ, ಸೈನಿಕ ಶುಶ್ರೂಷಕ, ಸೈನಿಕ ಟ್ರೇಡ್‍ಮೆನ್ ಹೀಗೆ ನಾನಾ ಹುದ್ದೆಗಳಿಗೆ ಸೇನಾ ನೇಮಕಾತಿ ರ್ಯಾಲಿ ನಡೆಯುತ್ತಿದ್ದು, ಸೇನಾ ನೇಮಕಾತಿ ರ್ಯಾಲಿಯ ವಿವಿಧ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಜೊತೆಗೆ ಜುಲೈನಲ್ಲಿ ನಡೆಯುವ ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಸೆಪ್ಟೆಂಬರ್ ಅಂತ್ಯಕ್ಕೆ ಕರ್ತವ್ಯಕ್ಕೆ ನಿಯೋಜನೆಗೊಳ್ಳಲಿದ್ದಾರೆ ಎಂದು ಭಾರತೀಯ ಸೇನೆಯ ಬ್ರಿಗ್ರೇಡಿಯರ್ ಪಿ.ಎಸ್. ಭಾಜ್ವ ತಿಳಿಸಿದ್ದಾರೆ.

ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಇಂದು ಬೆಳಿಗ್ಗೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದೈಹಿಕ ದಾಢ್ರ್ಯತೆ, ವೈದ್ಯಕೀಯ ಪರೀಕ್ಷೆ ಹೀಗೆ ನಾನಾ ಚಟುವಟಿಕೆಗಳು ರ್ಯಾಲಿ ಸಂದರ್ಭದಲ್ಲಿ ನಡೆಯಲಿದ್ದು, ಇದರಲ್ಲಿ ಉತ್ತೀರ್ಣರಾದವರು ಲಿಖಿತ ಪರೀಕ್ಷೆಗೆ ಅರ್ಹರಾಗುತ್ತಾರೆ. ಲಿಖಿತ ಪರೀಕ್ಷೆಯು ಜುಲೈ ಕೊನೆ ವಾರದಲ್ಲಿ ನಡೆಯಲಿದೆ ಎಂದು ತಿಳಿಸಿದರು.

ಸೇನಾ ನೇಮಕಾತಿ ರ್ಯಾಲಿಗೆ ಸುಮಾರು 5,500 ಮಂದಿ ನೋಂದಣಿಯಾಗಿದ್ದು, ಇದರಲ್ಲಿ 3,300 ಮಂದಿ ಯುವಕರು ಪಾಲ್ಗೊಂಡಿದ್ದಾರೆ.

(ಮೊದಲ ಪುಟದಿಂದ) ಪ್ರಥಮ ಹಂತದಲ್ಲಿ ಸುಮಾರು 400 ಮಂದಿ ಆಯ್ಕೆಯಾಗುವ ಸಾಧ್ಯತೆ ಇದ್ದು, ಎರಡನೇ ಹಂತದಲ್ಲಿ ಲಿಖಿತ ಪರೀಕ್ಷೆ ಜುಲೈ 30 ರಂದು ನಡೆಯಲಿದೆ ಎಂದು ಅವರು ತಿಳಿಸಿದರು. ಕೊಡಗು ಜಿಲ್ಲೆಯಿಂದ 1071 ಯುವಕರು ಹೆಸರು ನೊಂದಾಯಿಸಿಕೊಂಡಿದ್ದು, 700 ಮಂದಿ ಪಾಲ್ಗೊಂಡಿದ್ದಾರೆ ಎಂದು ಅವರು ಮಾಹಿತಿ ನೀಡಿದರು. ಸೇನಾ ನೇಮಕಾತಿ ರ್ಯಾಲಿಗೆ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್, ಸೈನಿಕ ಕಲ್ಯಾಣ ಇಲಾಖೆ ಹೀಗೆ ಎಲ್ಲರೂ ಸಹಕಾರ ನೀಡಿದ್ದಾರೆ ಎಂದು ಅವರು ತಿಳಿಸಿದರು. ಕರ್ನಲ್ ನವರತನ್ ಸಿಬಿಯ, ಎಚ್.ಎಸ್. ಚವಾಣ್, ಸಿಂಗೋಲ್ ಶಾಂತರಾಮ್, ಸೈನಿಕ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಕರ್ನಲ್ ಗೀತಾ ಇತರರು ಇದ್ದರು.