ನಾಪೋಕ್ಲು, ಮೇ 31: ಸಮೀಪದ ಎಮ್ಮೆಮಾಡಿನ ಎಸ್ಎಸ್ಎಫ್ ಯೂನಿಟ್ ವತಿಯಿಂದ ರಂಜಾನ್ ಕಿಟ್ನ್ನು ಬಡಕುಟುಂಬಗಳಿಗೆ ವಿತರಿಸಲಾಯಿತು. ಕಾರ್ಯಕ್ರಮವನ್ನು ಸಯ್ಯದ್ ಇಲಿಯಾಸ್ ತಂಞಳ್ ಅಲ್ ಹೈದ್ರುಸಿ ಉದ್ಘಾಟಿಸಿದರು. ಎಸ್ಎಸ್ಎಫ್ ಎಮ್ಮೆಮಾಡು ಯೂನಿಟ್ ಅಧ್ಯಕ್ಷ ಸಯ್ಯದ್ ಸೈಫ್ಉದ್ದೀನ್ ತಂಙಳ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಕ್ಯಾಂಪಸ್ ಕಾರ್ಯದರ್ಶಿ ಅಬ್ದುಲ್ಲ ಕೊಳಕೇರಿ, ಮಡಿಕೇರಿ ಡಿವಿಜನ್ ಅಧ್ಯಕ್ಷ ನಝೀರ್ ಬಾಖವಿ, ಡಿವಿಜನ್ ಕ್ಯಾಂಪಸ್ ಕಾರ್ಯದರ್ಶಿ ಶೌಕತ್, ಯೂನಿಟ್ ಕಾರ್ಯದರ್ಶಿ ಜಾಬೀರ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. ಜಿಲ್ಲಾ ಕ್ಯಾಂಪಸ್ಕಾರ್ಯದರ್ಶಿ ಅಬ್ದುಲ್ ಯೂನಿಟ್ ಅಧ್ಯಕ್ಷರಾದ ಸಯ್ಯದ್ ಸೈಫ್ ಉದ್ದೀನ್ ತಂಙಳ್ರವರಿಗೆ ಎಸ್ಎಸ್ಎಫ್ನ ಸದಸ್ಯತನ ನೀಡುವ ಮೂಲಕ ಸದಸ್ಯತ್ವ ಆಂದೋಲನಕ್ಕೆ ಚಾಲನೆ ನೀಡಲಾಯಿತು.