ಸಿದ್ದಾಪುರ, ಮೇ. 30: ಆದಿ ದ್ರಾವಿಡ ಜನಾಂಗದ ಜಿಲ್ಲಾಮಟ್ಟದ ಕ್ರೀಡಾಕೂಟವು ಸಡಗರದಿಂದ ಜರುಗಿತು. ಕೊಡಗು ಜಿಲ್ಲಾ ಆದಿ ದ್ರಾವಿಡ ಎಲ್ಲಾ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಚೆಟ್ಟಳ್ಳಿಯ ಪ್ರೌಢ ಶಾಲಾ ಮೈದಾನದಲ್ಲಿ ಎರಡು ದಿನಗಳ ಕಾಲ ನಡೆದ ಕ್ರೀಡಾಕೂಟವನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ. ಹರೀಶ್‍ರವರು ಡಾ. ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಚಾಲನೆÉ ನೀಡಿದರು.

ಅತಿಥಿಗಳಾಗಿ ಆಗಮಿಸಿದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ಆದಿ ದ್ರಾವಿಡ ಜನಾಂಗದವರಿಗೆ ಸರ್ಕಾರದಿಂದ ಎಲ್ಲಾ ಸೌಲಭ್ಯಗಳು ಸಿಗುವಂತೆ ಶ್ರಮಿಸುವದಾಗಿ ಭರವಸೆ ನೀಡಿದರು.

ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಕೆ.ಜಿ. ಬೋಪಯ್ಯ ಅವರು ಕೊಡಗು ಕ್ರೀಡೆಯ ತವರೂರಾಗಿದ್ದು, ಆದಿ ದ್ರಾವಿಡ ಜನಾಂಗದವರು ಜನಾಂಗದ ವರನ್ನು ಒಗ್ಗೂಡಿಸಲು ಕ್ರೀಡಾ ಕೂಟವನ್ನು ಆಯೋಜಿಸಿರು ವದು ಉತ್ತಮ ಬೆಳವಣಿಗೆಯಾಗಿದೆ ಎಂದು ಶ್ಲಾಘಿಸಿದರು. ಜನಾಂಗದವರು ತಮ್ಮ ಮಕ್ಕಳಿಗೆ ಶಿಕ್ಷಣವನ್ನು ನೀಡಬೇಕು, ಸಂಘಟಿತರಾಗಿ ಎಲ್ಲಾ ಕ್ಷೇತ್ರದಲ್ಲಿ ಹೆಸರುಗಳಿಸಬೇಕೆಂದು ಕಿವಿಮಾತು ಹೇಳಿದರು. ಆದಿ ದ್ರಾವಿಡ ಜನಾಂಗದ ವರಿಗೆ ಸರಿಯಾದ ಜಾತಿ ಪ್ರಮಾಣ ಪತ್ರ ಹಾಗೂ ಶಾಶ್ವತ ಸೂರು ಸಿಗಲು ಪ್ರಯತ್ನಿಸಬೇಕೆಂದು ಕರೆ ನೀಡಿದರು.

ತಾಲೂಕು ಪಂಚಾಯಿತಿ ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ ಮಾತನಾಡಿ, ಆದಿ ದ್ರಾವಿಡ ಜನಾಂಗದವರು ದುಡಿಮೆಯನ್ನೇ ಅವಲಂಬಿಸಿಕೊಂಡು ತೋಟದ ಲೈನ್ ಮನೆಗಳಲ್ಲಿ ವಾಸ ಮಾಡಿಕೊಂಡಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದರು. ಮುಂದಿನ ಪೀಳಿಗೆಗಾಗಿ ಶಾಶ್ವತ ಸೂರನ್ನು ಹೋರಾಟದ ಮೂಲಕ ಪಡೆದು ಕೊಳ್ಳಬೇಕೆಂದು ಕರೆ ನೀಡಿದರು. ಹೋರಾಟಕ್ಕೆ ಬೆಂಬಲ ನೀಡುವದಾಗಿ ಹೇಳಿದರು.

ಕಾರ್ಯಕ್ರಮದಲ್ಲಿ ಆದಿ ದ್ರಾವಿಡ ಸಮಾಜ ಸೇವಾ ಸಂಘದ ಜಿಲ್ಲಾಧ್ಯಕ್ಷÀ ಜನಾರ್ಧನ, ಉಪಾಧ್ಯಕ್ಷÀ ಕುಶಾಲಪ್ಪ, ವೀರಾಜಪೇಟೆ ತಾಲೂಕು ಅಧ್ಯಕ್ಷ ಶಿವಪ್ಪ, ಉಪಾಧ್ಯಕ್ಷ ಚಂದ್ರಶೇಖರ್, ಜಿಲ್ಲಾ ಕೋಶಾಧಿಕಾರಿ ಜಗನ್ನಾಥ, ಕಾರ್ಯದರ್ಶಿ ಸುನಿಲ್, ಕ್ರೀಡಾ ಸಮಿತಿ ಅಧ್ಯಕ್ಷ ಹೆಚ್.ಪಿ. ವಿಶ್ವನಾಥ್, ಕಾರ್ಯದರ್ಶಿ ಜಗನ್ನಾಥ, ಸಂದೀಪ್, ಗ್ರಾಮ ಪಂಚಾಯಿತಿ ಸದಸ್ಯರಾದ ರಾಧ ಹಾಗೂ ಲಲಿತ ಹಾಗೂ ವಿವಿಧ ಘಟಕದ ಪದಾಧಿಕಾರಿಗಳು ಹಾಜರಿದ್ದರು. ಬಳಿಕ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.

ಕ್ರೀಡಾಕೂಟದ ವಿಜೇತರು

ವಾಲಿಬಾಲ್‍ನಲ್ಲಿ ಸಿದ್ದಾಪುರ ಪ್ರಥಮ, ಸುಂಟಿಕೊಪ್ಪ ದ್ವಿತೀಯ, ಕಬಡ್ಡಿ ಅಭ್ಯತ್‍ಮಂಗಲ ಪ್ರಥಮ, ಜ್ಯೋತಿನಗರ ದ್ವಿತೀಯ, ಹಗ್ಗಜಗ್ಗಾಟ ಅಭ್ಯತ್‍ಮಂಗಲ ಪ್ರಥಮ, ಸುಂಟಿಕೊಪ್ಪ ದ್ವಿತೀಯ, ಮಹಿಳೆಯರ ಹಗ್ಗಜಗ್ಗಾಟ ಜ್ಯೋತಿನಗರ ಪ್ರಥಮ, ಸಿದ್ದಾಪುರ ದ್ವಿತೀಯ, 400x4 ಓಟದ ಸ್ಪರ್ಧೆಯಲ್ಲಿ ಪ್ರಥಮ ಪಾಲಿಬೆಟ್ಟ, ದ್ವಿತೀಯ ಹೊಸತೋಟ, 200 ಮೀ ಓಟದ ಸ್ಪರ್ಧೆಯಲ್ಲಿ ಸತೀಶ್ ಪಾಲಿಬೆಟ್ಟ ಪ್ರಥಮ, ಪ್ರತಾಪ್ ಹೊಸತೋಟ ದ್ವಿತೀಯ ಹಾಗೂ ಶಶಿ ಸಿದ್ದಾಪುರ ತೃತೀಯ, ಮಹಿಳೆಯರ 200 ಮೀ ಓಟದಲ್ಲಿ ಸಿದ್ದಾಪುರದ ಜಾನಕಿ ಪ್ರಥಮ ಹೊಸತೋಟದ ಪೂಜಾ ದ್ವಿತೀಯ, 100 ಮೀ ಪುರುಷರ ಓಟದಲ್ಲಿ ಹೊಸತೋಟದ ಪ್ರತಾಪ್ ಪ್ರಥಮ, ಸಿದ್ದಾಪುರದ ಶಶಿ ದ್ವಿತೀಯ ಬಹುಮಾನ, ಮಹಿಳೆಯರ 100 ಮೀ ಓಟದಲ್ಲಿ ಜಂಬೂರುವಿನ ಕುಮಾರಿ ಪ್ರಥಮ, ಸಿದ್ದಾಪುರದ ರಶ್ಮಿ ದ್ವಿತೀಯ, ನಿಂಬೆ ಚಮಚದ ಓಟದಲ್ಲಿ ಅಭ್ಯತ್‍ಮಂಗಲದ ಲೀಲ ಪ್ರಥಮ, ಹುಂಡಿಯ ಚಂದ್ರಿಕ ದ್ವಿತೀಯ, ಮಕ್ಕಳ ಸ್ಪರ್ದೆಯಲ್ಲಿ ಸಿದ್ದಾಪುರದ ಅಶ್ವಿನಿ ಪ್ರಥಮ, ಜ್ಯೋತಿನಗರದ ಹಿತೇಶ್ ದ್ವಿತೀಯ, ಸಂಗೀತ ಚೆಂಡು ಸ್ಪರ್ಧೆಯಲ್ಲಿ ಶ್ವೇತ ಪ್ರಥಮ, ನಳಿನಿ ದ್ವಿತೀಯ ಬಹುಮಾನ ಪಡೆದುಕೊಂಡರು.