ಮಡಿಕೇರಿ, ಜೂ. 1: ಉದ್ಯೋಗ ಮತ್ತು ತರಬೇತಿ ಇಲಾಖೆಯ ಅಧೀನದಲ್ಲಿರುವ ಮಡಿಕೇರಿಯ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗೆ ಆಗಸ್ಟ್-2017ನೇ ಸಾಲಿನ ಪ್ರವೇಶದ ಸಲುವಾಗಿ ಮೆರಿಟ್-ಕಂ-ರಿಸರ್ವೇಷನ್ ಆಧಾರಿತ ಪ್ರವೇಶ ಮಾಡಿಕೊಳ್ಳಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ತಾ. 12 ರವರೆಗೆ ಆನ್‍ಲೈನ್ ಮುಖಾಂತರ ಅರ್ಜಿ ಸಲ್ಲಿಸುವದು ಮತ್ತು ಅದರ ಸ್ವೀಕೃತಿ ಸಂಖ್ಯೆಯನ್ನು ಪಡೆಯುವದು ತಿತಿತಿ.emಠಿಣಡಿg.ಞಚಿಡಿ.ಟಿiಛಿ.iಟಿ &amdiv; ತಿತಿತಿ.ಜeಣಞಚಿಡಿಟಿಚಿಣಚಿಞಚಿ.oಡಿg.iಟಿ. ತಾ. 14 ರಂದು ಆನ್‍ಲೈನ್‍ನಲ್ಲಿ ಅಭ್ಯರ್ಥಿಗಳ ತಾತ್ಕಾಲಿಕ ಶ್ರೇಣಿ ಪಟ್ಟಿ ಪ್ರಕಟ, ತಾತ್ಕಾಲಿಕ ಶ್ರೇಣಿ ಪಟ್ಟಿ ಪ್ರಕಟಣೆಯ ಮುಖಾಂತರ ಅಭ್ಯರ್ಥಿಗಳು ಆನ್‍ಲೈನ್‍ನಲ್ಲಿ ತಮ್ಮ ರ್ಯಾಂಕಿಂಗ್ ಅನ್ನು ಪರೀಕ್ಷಿಸಿಕೊಳ್ಳಬಹುದು. ತಾ. 15 ರಿಂದ 17 ರವರೆಗೆ ಅಭ್ಯರ್ಥಿಗಳು ಹತ್ತಿರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳಿಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲನಾ ಶುಲ್ಕ ರೂ. 50 ನ್ನು ಪಾವತಿಸಿ ಕಡ್ಡಾಯವಾಗಿ ತಮ್ಮ ಮೂಲ ದಾಖಲೆಗಳನ್ನು ಪರಿಶೀಲನೆಗೆ ಹಾಜರುಪಡಿಸುವದು. ಮೂಲ ದಾಖಲೆಗಳನ್ನು ಪರಿಶೀಲನೆ ಮಾಡದಿದ್ದಲ್ಲಿ ಜ್ಯೇಷ್ಠತಾ ಪಟ್ಟಿಯಲ್ಲಿ ಅಭ್ಯರ್ಥಿಗಳ ಹೆಸರು ಇರುವದಿಲ್ಲ.

ಅಭ್ಯರ್ಥಿಗಳು ದಾಖಲಾತಿ ಪರಿಶೀಲನೆಗೆ ಹಾಜರಾಗುವ ವೇಳೆಯಲ್ಲಿ ತಮಗೆ ಅನ್ವಯಿಸುವ ಮೂಲ ದಾಖಲಾತಿಗಳೊಂದಿಗೆ ಒಂದು ಸೆಟ್ ಜೆರಾಕ್ಸ್ ಪ್ರತಿಯನ್ನು ತರತಕ್ಕದ್ದು.

1, 2, 3 ನೇ ಸುತ್ತಿನ ಪ್ರವೇಶದಲ್ಲಿ ಸೀಟು ಸಿಗದೇ ಇರುವ ಅಭ್ಯರ್ಥಿಗಳು ಆನ್‍ಲೈನ್ ಮುಖಾಂತರ ಖಾಲಿ ಇರುವ ಸಂಸ್ಥೆ ಹಾಗೂ ವೃತ್ತಿಗಳನ್ನು ಗುರುತಿಸಿ ಜುಲೈ, 16 ರಿಂದ 18 ರವರೆಗೆ ಮರು ಆಯ್ಕೆ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ದೂ. 08272-298357 ನ್ನು ಸಂಪರ್ಕಿಸಬಹುದು ಎಂದು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಂಶುಪಾಲರು ತಿಳಿಸಿದ್ದಾರೆ.