ಸೋಮವಾರಪೇಟೆ, ಜೂ. 1: ಗೌಡಳ್ಳಿ ಗ್ರಾಮದ ಶ್ರೀ ಪುಲಿಗುರಿ ಬಸವೇಶ್ವರ ದೇವಾಲಯ ತಾ. 4ರಂದು ಲೋಕಾರ್ಪಣೆಗೊಳ್ಳಲಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಜಿ.ಪಿ.ಸುನಿಲ್ ಹೇಳಿದರು. ಧರ್ಮಸ್ಥಳದ ಡಾ|| ವೀರೇಂದ್ರ ಹೆಗ್ಗಡೆ ಸೇರಿದಂತೆ ದಾನಿಗಳು ನೂತನ ದೇವಾಲಯಕ್ಕೆ ಸಹಾಯ ಮಾಡಿರುವದಾಗಿ ಅವರು ತಿಳಿಸಿದರು.

ಪತ್ರಿಕಾಭವನದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ತಾ.2ರಂದು ಸಂಜೆ 6 ಗಂಟೆಯಿಂದ ಹೋಮ, ವಾಸ್ತು ಪೂಜೆ ನಡೆಯಲಿದೆ. 3 ರಂದು ಬೆಳಿಗ್ಗೆ 6 ಗಂಟೆಗೆ ನಾಗದೇವರು ಹಾಗು ಚೌಡೇಶ್ವರಿ ವಿಗ್ರಹ ಪ್ರತಿಷ್ಠಾಪನೆ ನೆರವೇರಲಿದೆ. ತಾ. 4ರಂದು ಬೆಳಿಗ್ಗೆ 6 ಗಂಟೆಯಿಂದ ಮಹಾಗಣಪತಿ, ಬಸವಣ್ಣದೇವರ ಬಿಂಬ ಪ್ರತಿಷ್ಠಾಪನೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

ತಾ. 4 ರಂದು ಮಧ್ಯಾಹ್ನ 12ಗಂಟೆಗೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು, ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ದಿವ್ಯಸಾನಿಧ್ಯ ವಹಿಸಲಿದ್ದಾರೆ. ಮಹಾಸಂಸ್ಥಾನದ ಶ್ರೀ ಶಂಭುನಾಥ ಮಹಾಸ್ವಾಮೀಜಿ, ಮುದ್ದಿನಕಟ್ಟೆ ಮಠಾಧೀಶರಾದ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಸಂಸದ ಪ್ರತಾಪ್‍ಸಿಂಹ, ಶಾಸಕ ಅಪ್ಪಚ್ಚು ರಂಜನ್, ಮಾಜಿ ಸಚಿವ ಬಿ.ಎ.ಜೀವಿಜಯ, ಜಿಪಂ ಸದಸ್ಯ ದೀಪಕ್, ತಾಪಂ ಸದಸ್ಯೆ ಕುಸುಮಾ ಅಶ್ವಥ್, ಗೌಡಳ್ಳಿ ಗ್ರಾಪಂ ಅಧ್ಯಕ್ಷ ಧರ್ಮಾಚಾರಿ, ಪ್ರಮುಖರಾದ ಎಸ್.ಬಿ.ಭರತ್ ಕುಮಾರ್, ಎಸ್.ಎ.ಸುರೇಶ್, ಎಚ್.ಆರ್.ಸುರೇಶ್, ದಾನಿಗಳಾದ ಹರಪಳ್ಳಿ ರವೀಂದ್ರ, ಬಿ.ಎಂ.ಮಂಜುನಾಥ್, ಗಿರೀಶ್ ಮಲ್ಲಪ್ಪ, ನಾಪಂಡ ಮುತ್ತಪ್ಪ, ಕೆ.ಎಂ.ಮಧುಕುಮಾರ್, ಅರುಣ್ ಕೊತ್ತನಳ್ಳಿ, ಜಿ.ಪಿ.ಸೋಮಶೇಖರ್, ಬೋರೇಗೌಡ, ಚಾಮೇರ ಪವನ್ ದೇವಯ್ಯ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಧರ್ಮಸ್ಥಳ ಧರ್ಮಾಧಿಕಾರಿ ಶ್ರೀ ಡಾ.ವಿರೇಂದ್ರ ಹೆಗ್ಗಡೆಯವರು ದೇವಾಲಯದ ವಿಶೇಷ ದಾನಿಗಳಾಗಿದ್ದಾರೆ ಎಂದರು. ಗೋಷ್ಠಿಯಲ್ಲಿ ದೇವಾಲಯ ಸಮಿತಿಯ ಜಿ.ಎಸ್.ರಾಜು, ಜಿ.ಎ.ಮಹೇಶ್, ಜಿ.ಟಿ.ಲೋಕೇಶ್, ಜಿ.ಎಂ.ಜಯಪ್ಪ, ಜಿ.ಎಸ್.ನಾಗರಾಜು ಇದ್ದರು.