ಮಡಿಕೇರಿ, ಜೂ. 1: 2017-18ನೇ ಸಾಲಿನ ಪ್ರಥಮ ಪದವಿ ತರಗತಿಗಳಿಗೆ ಪ್ರವೇಶಾತಿ ಪ್ರಾರಂಭವಾಗಿದ್ದು, ಬಿ.ಎ (ಹೆಚ್.ಇ.ಎಸ್, ಹೆಚ್.ಇ.ಪಿ) ಬಿ.ಕಾಂ, ಬಿಬಿಎ ಎಲ್ಲಾ ವಿಭಾಗಗಳಲ್ಲೂ ನುರಿತ ಪ್ರಾಧ್ಯಾಪಕರು, ಸುಸಜ್ಜಿತ ಗ್ರಂಥಾಲಯ, ಸರ್ಕಾರದ ವತಿಯಿಂದ ಎಸ್.ಸಿ-ಎಸ್.ಟಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‍ಟಾಪ್, ಕ್ರೀಡಾ ಸೌಲಭ್ಯಗಳು, ಉತ್ತಮವಾದ ಕ್ರೀಡಾ ಮೈದಾನ, ಕ್ರೀಯಾಶೀಲ ರಾಷ್ಟ್ರೀಯ ಸೇವಾ ಯೋಜನೆ, ವಾರ್ಷಿಕ ಸಂಚಿಕೆ ಹಾಗೂ ಗೋಡೆ ಪತ್ರಿಕೆ, ಕಲಿಕಾ ಮಟ್ಟ ಹೆಚ್ಚಿಸಲು ಉತ್ತಮ ಭೋಧನಾ ಮಾದರಿಗಳು, (ವಿಚಾರಗೋಷ್ಠಿ, ಗುಂಪು ಚರ್ಚೆ, ರಸಪ್ರಶ್ನೆ, ಕಿರುಪರೀಕ್ಷೆಗಳು ಇತ್ಯಾದಿ) ನುರಿತ ಉಪನ್ಯಾಸಕರಿಂದ ಪ್ರತಿ ವಿಭಾಗದಲ್ಲೂ ವಿಶೇಷ ಉಪನ್ಯಾಸ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಸುಸಜ್ಜಿತ ವಾಚನಾಲಯ, ಕೇಂದ್ರ, ರಾಜ್ಯ ಸರ್ಕಾರದಿಂದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರು ಹಾಗೂ ಎಸ್.ಟಿ-ಎಸ್.ಸಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ವಿದ್ಯಾರ್ಥಿನಿಯರಿಗೆ ರಾಜ್ಯ ಸರ್ಕಾರದ ಸಂಚಿ ಹೊನ್ನಮ್ಮ ವಿದ್ಯಾರ್ಥಿ ವೇತನ, ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರದ ರಾಜೀವ್ ಗಾಂಧಿ ಸಾಲ ಸೌಲಭ್ಯ, ಸ್ಕೌಟ್ಸ್-ಗೈಡ್ಸ್ (ರೇಂಜರ್, ರೋವರ್), ಉದ್ಯೋಗ ಮೇಳಗಳ ಆಯೋಜನೆ, ಕೌಶಲ್ಯ ತರಬೇತಿ ಕಾರ್ಯಕ್ರಮಗಳ ಆಯೋಜನೆ, ಮಹಾನ್ ವ್ಯಕ್ತಿಗಳ ದಿನಾಚರಣೆಯಂದು ಅವರ ವ್ಯಕ್ತಿತ್ವದ ಪರಿಚಯ, ವಿದ್ಯಾರ್ಥಿಗಳಿಗೆ ಅರಿವು ಕಾರ್ಯಕ್ರಮ ಎಜುಸ್ಯಾಟ್ ತರಗತಿಗಳು.

ಹೆಚ್ಚಿನ ವಿವರಗಳಿಗೆ ಪ್ರಾಂಶುಪಾಲರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಜೂನಿಯರ್ ಕಾಲೇಜು ಆವರಣ, ಮಡಿಕೇರಿ ದೂರವಾಣಿ ಸಂಖ್ಯೆ: 08272-223913 ಇ-ಮೇಲ್ ವಿಳಾಸ ಠಿಡಿiಟಿಛಿiಠಿಚಿಟgಜಿgಛಿmಜಞ @gmಚಿiಟ.ಛಿom ನ್ನು ಸಂಪರ್ಕಿಸಬಹುದು.