ಮಡಿಕೇರಿ, ಜೂ. 1: ಕೊಡಗು ಜಿಲ್ಲೆಯಲ್ಲಿ 3ನೇ ಅಂತರ್ರಾಷ್ಟ್ರೀಯ ಯೋಗ ದಿನಾಚರಣೆ ಯಶಸ್ವಿಗೊಳಿಸಲು ಜಿಲ್ಲಾ ಆಯುಷ್ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರ್ಟ್ ಆಫ್ ಲಿವಿಂಗ್, ಬೆಂಗಳೂರು, ಪೌರಾಡಳಿತ ಮತ್ತು ಇತರೆ ಯೋಗ ಸಂಸ್ಥೆಗಳು ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಎಲ್ಲಾ ತಾಲೂಕುಗಳಿಂದ ತಲಾ 10 ದೈಹಿಕ ಶಿಕ್ಷಕರಿಗೆ ತಾ. 3 ರಂದು ಬೆಳಿಗ್ಗೆ 11 ಗಂಟೆಗೆ ಮಡಿಕೇರಿ ಅಶ್ವಿನಿ ಆಸ್ಪತ್ರೆ ಸಭಾಂಗಣದಲ್ಲಿ ಟಿ.ಒ.ಟಿ. (ಟ್ರೈನಿಂಗ್ ಆಫ್ ಟೀಚರ್ಸ್) ಯೋಗ ಶಿಕ್ಷಕರ ತರಬೇತಿ ನಡೆಯಲಿದೆ.

ಟಿ.ಒ.ಟಿ. (ಟ್ರೈನಿಂಗ್ ಆಫ್ ಟೀಚರ್ಸ್) ಕಾರ್ಯಕ್ರಮಕ್ಕೆ ಕಳುಹಿಸಲಿದ್ದು, ತರಬೇತಿ ಪಡೆದ ದೈಹಿಕ ಶಿಕ್ಷಕರು ತಮ್ಮ ವ್ಯಾಪ್ತಿಯ ತಾಲೂಕಿನಲ್ಲಿ 3ನೇ ಅಂತರ್ರಾಷ್ಟ್ರೀಯ ಯೋಗ ದಿನಾಚರಣೆಯ ಪ್ರೋಟೋಕಾಲ್‍ನಂತೆ ಶಾಲಾ ಹಾಗೂ ಕಾಲೇಜುಗಳ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಿ ಸಂಬಂಧಪಟ್ಟ ತಾಲೂಕುಗಳ ತಹಶೀಲ್ದಾರರ ಸಹಕಾರದೊಂದಿಗೆ ದಿನಾಚರಣೆ ಆಚರಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಜಿ.ಪಂ. ಸಿಇಓ ಚಾರುಲತಾ ಸೋಮಲ್, ಹೆಚ್ಚುವರಿ ಜಿಲ್ಲಾಧಿಕಾರಿಗಳಾದ ಎಂ. ಸತೀಶ್ ಕುಮಾರ್, ಈ ತರಬೇತಿಯಲ್ಲಿ ಜಿಲ್ಲಾ ಆಯುಷ್ ಇಲಾಖೆಯ ವತಿಯಿಂದ ಡಾ. ಕೆ. ಈಶ್ವರಿ, ಡಾ. ಎಂ.ಬಿ. ಶ್ರೀನಿವಾಸ, ಡಾ. ವಿಶ್ವತಿಲಕ್, ಡಾ. ಕೆ.ಜಿ. ಶುಭಾ, ಡಾ. ಜಿ. ಶೈಲಜಾ ಇವರುಗಳು ಭಾಗವಹಿಸಲಿದ್ದಾರೆ.

ಆರ್ಟ್ ಆಫ್ ಲಿವಿಂಗ್ ಬೆಂಗಳೂರು ಇಲ್ಲಿಯ ಟೀಚರ್ಸ್ ಕೋ-ಆರ್ಡಿನೇಟರ್ ಆಗಿರುವ ಯೋಗ ಶಿಕ್ಷಕರಾದ ರಾಜಪ್ಪ, ಕೆ.ಕೆ. ಮಹೇಶ್ ಕುಮಾರ್, ಬೋಪಯ್ಯ, ಕೃಷ್ಣ ಬೋಪಯ್ಯ, ಕೆ.ಪಿ. ಅರುಣ ಇವರುಗಳು ಭಾಗವಹಿಸಲಿದ್ದಾರೆ.

ವಿಶೇಷ ಆಹ್ವಾನಿತರಾಗಿ ಅಶ್ವಿನಿ ಆಸ್ಪತ್ರೆಯ ವೈದ್ಯ ಡಾ. ಪ್ರಕಾಶ್ ಕುಲಕರ್ಣಿ ಹಾಗೂ ಪ್ರಮುಖರಾದ ಕುಶಾಲಪ್ಪ ಅವರು ಭಾಗವಹಿಸಲಿದ್ದಾರೆ. ತಾ. 21 ರಂದು 3ನೇ ಅಂತರ್ರಾಷ್ಟ್ರೀಯ ಯೋಗ ದಿನಾಚರಣೆ ನಡೆಯಲಿದೆ.