ಶ್ರೀಮಂಗಲ, ಜೂ. 3: ‘ಕೊಡವ ತಕ್ಕ್ ಎಳ್ತ್‍ಕಾರಡ ಕೂಟ’, ‘ತಾವಳಗೇರಿ ಮೂಂದ್‍ನಾಡ್ ಕೊಡವ ಸಮಾಜ’, ಟಿ. ಶೆಟ್ಟಿಗೇರಿ ಹಾಗೂ ‘ಸಂಭ್ರಮ ಪೊಮ್ಮಕ್ಕಡ ಸಾಂಸ್ಕøತಿಕ ಪಿಂಞ ಕ್ರೀಡಾ ಸಂಸ್ಥೆ’, ಟಿ. ಶೆಟ್ಟಿಗೇರಿ ಇವರ ಸಂಯುಕ್ತ ಆಶ್ರಯದಲ್ಲಿ ತಾ. 5 ರಂದು ಪೂರ್ವಾಹ್ನ 10.30 ಗಂಟೆಗೆ ಟಿ. ಶೆಟ್ಟಿಗೇರಿಯಲ್ಲಿರುವ ತಾವಳಗೇರಿ ಮೂಂದ್‍ನಾಡ್ ಕೊಡವ ಸಮಾಜದ ಸಭಾಂಗಣದಲ್ಲಿ ಕೊಡವ ಸಾಹಿತ್ಯ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ.

ಕೊಡವ ತಕ್ಕ್ ಎಳ್ತ್‍ಕಾರಡ ಕೂಟದ ‘ಜನಪ್ರಿಯ ಕೊಡವ ಸಾಹಿತ್ಯ ಮಾಲೆ’ ಯೋಜನೆಯಲ್ಲಿ ಚೆಟ್ಟಂಗಡ ರವಿ ಸುಬ್ಬಯ್ಯ ಬರೆದ 145ನೇ ಹೆಜ್ಜೆಯ ಹಾಗೂ ಉಳುವಂಗಡ ಕಾವೇರಿ ಉದಯ ಬರೆದ 146ನೇ ಹೆಜ್ಜೆಯ ನೂತನ ಪುಸ್ತಕಗಳನ್ನು ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಲಾಗುವದು. ಈ ಸಂದರ್ಭ ಕೊಡವ ಭಾಷೆಯಲ್ಲಿ ಹಾಡುಗಾರಿಕೆ, ಓದುವದು ಹಾಗೂ ಹಾಸ್ಯ ಸ್ಪರ್ಧೆಗಳು ಪ್ರಾಥಮಿಕ ಶಾಲೆ, ಪ್ರೌಢಶಾಲೆ ಹಾಗೂ ಕಾಲೇಜು ಸಾರ್ವಜನಿಕರು ಎಂಬ ಮೂರು ವಿಭಾಗಗಳಲ್ಲಿ ನಡೆಯಲಿದ್ದು, ಮೂರು ವಿಭಾಗಕ್ಕೂ ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳೊಂದಿಗೆ ಪ್ರಶಂಸನಾ ಪತ್ರ ನೀಡಲಾಗುವದು.

‘ಕೂಟ’ದ ಅಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ‘ತಾವಳಗೇರಿ ಮೂಂದ್‍ನಾಡ್ ಕೊಡವ ಸಮಾಜ’ದ ಅಧ್ಯಕ್ಷರು ಹಾಗೂ ಪುಸ್ತಕ ಪ್ರಾಯೋಜಕ ಕೋಟ್ರಮಾಡ ಅರುಣ್ ಅಪ್ಪಣ್ಣ, ಪುಸ್ತಕ ದಾನಿಗಳಾದ ತಡಿಯಂಗಡ ಬಿ. ಕರುಂಬಯ್ಯ, ‘ಸಂಭ್ರಮ ಪೊಮ್ಮಕ್ಕಡ ಸಾಂಸ್ಕøತಿಕ ಪಿಂಞ ಕ್ರೀಡಾ ಸಂಸ್ಥೆ’, ಅಧ್ಯಕ್ಷೆ ತಡಿಯಂಗಡ ಸೌಮ್ಯ ಕರುಂಬಯ್ಯ ಹಾಗೂ ‘ಕೂಟ’ದ 146ನೇ ಹೆಜ್ಜೆಯ ಪುಸ್ತಕದ ಲೇಖಕಿ ಉಳುವಂಗಡ ಕಾವೇರಿ ಉದಯ ಭಾಗವಹಿಸಲಿದ್ದಾರೆ.

ಈ ಸಂದರ್ಭ ‘ಕೂಟ’ ಇದುವರೆಗೆ ಬಿಡುಗಡೆಗೊಳಿಸಿದ ಪುಸ್ತಕಗಳು ಹಾಗೂ ಕೊಡವ ಹಾಡಿನ ಸಿ.ಡಿ.ಗಳ ಪ್ರದರ್ಶನ ಹಾಗೂ ಮಾರಾಟವಿರುತ್ತದೆ. ಹೆಚ್ಚಿನ ಮಾಹಿತಿಗೆ 9448326014 ಹಾಗೂ 9880584732 ರಲ್ಲಿ ಸಂಪರ್ಕಿಸಲು ಕೂಟದ ಕಾರ್ಯದರ್ಶಿ ಅಮ್ಮಣಿಚಂಡ ಪ್ರವೀಣ್ ಚಂಗಪ್ಪ ಕೋರಿದ್ದಾರೆ.