ಮಡಿಕೇರಿ, ಜೂ. 3: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ವತಿಯಿಂದ 2015ರಿಂದ 2017ರವರೆಗಿನ ಮೂರು ವರ್ಷದ ಗೌರವ ಪ್ರಶಸ್ತಿಯನ್ನು ಪ್ರಕಟಿಸಲಾಗಿದ್ದು, ವಿವಿಧ ಕ್ಷೇತ್ರಗಳಲ್ಲಿನ ಸೇವೆ-ಸಾಧನೆ ಪರಿಗಣಿಸಿ ಒಟ್ಟು 9 ಮಂದಿಯನ್ನು ಇದಕ್ಕೆ ಆಯ್ಕೆ ಮಾಡಲಾಗಿದೆ.ಕೊಡವ ಅಕಾಡೆಮಿ ಕಚೇರಿಯಲ್ಲಿ ಇಂದು ಅಧ್ಯಕ್ಷ ಬಿ.ಎಸ್. ತಮ್ಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸರ್ವ ಸದಸ್ಯರ ಸಭೆಯ ಬಳಿಕ ಕರೆದ ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷರು ಈ ಬಗ್ಗೆ ಮಾಹಿತಿ ನೀಡಿದರು.ಈಗಿನ ಆಡಳಿತ ಮಂಡಳಿ ವತಿಯಿಂದ ನಡೆಸಿರುವ ಕಾರ್ಯ ಚಟುವಟಿಕೆ, ಹಮ್ಮಿಕೊಂಡಿ ರುವ ಯೋಜನೆಗಳ ಕುರಿತು ಅಧ್ಯಕ್ಷ ಬಿ.ಎಸ್. ತಮ್ಮಯ್ಯ ಅವರು ವಿವರವಿತ್ತರು.

ಅಕಾಡೆಮಿಯ ಹಾಲಿ ಆಡಳಿತ ಮಂಡಳಿ ಈಗಾಗಲೇ 2 ವರ್ಷ 9 ತಿಂಗಳು ಪೂರೈಸಿದ್ದು, ಒಟ್ಟು 103 ಕಾರ್ಯಕ್ರಮಗಳನ್ನು ಆಯೋಜಿಸಿದೆ. ಹೊರ ರಾಜ್ಯಗಳಲ್ಲಿ ಸೇರಿದಂತೆ ಜಿಲ್ಲೆಯ ವಿವಿಧೆಡೆಗಳಲ್ಲಿ ಕಾರ್ಯಕ್ರಮ ಗಳನ್ನು ಸಂಘಟಿಸಲಾಗಿದೆ. ಕಾರ್ಯ ಯೋಜನೆಗೆ ತಕ್ಕಂತೆ ಸದಸ್ಯರುಗಳು, ಅಧಿಕಾರಿಗಳ ಸಹಕಾರದೊಂದಿಗೆ ಯಶಸ್ವಿಯಾಗಿ ಚಟುವಟಿಕೆ ನಡೆಸ ಲಾಗಿದೆ ಎಂದು ಅವರು ತಿಳಿಸಿದರು.

ಗೌರವ ಪ್ರಶಸ್ತಿಯು ರೂ. 50 ಸಾವಿರ ನಗದು ಹಾಗೂ ಪ್ರಶಸ್ತಿ ಪತ್ರ ಹೊಂದಿರುತ್ತದೆ. ಅಕಾಡೆಮಿಯಿಂದ ನೀಡಲಾಗುವ ಈ ಗೌರವ ಪ್ರಶಸ್ತಿ ರಾಜ್ಯ ಪ್ರಶಸ್ತಿಗೆ ಸಮನಾದದ್ದು ಎಂದು ಅವರು ಹೇಳಿದರು. ಹಲವು ಸುತ್ತಿನ ಚರ್ಚೆಯ ಬಳಿಕ ಸರ್ವ ಸದಸ್ಯರ ಒಪ್ಪಿಗೆಯಂತೆ 9 ಮಂದಿಯನ್ನು ಅಂತಿಮಗೊಳಿಸಲಾಯಿತು. ಆಯ್ಕೆಯಾದವರಲ್ಲಿ ಬಹುತೇಕರು 60 ವರ್ಷ ಮೇಲ್ಪಟ್ಟವರಾಗಿದ್ದು, ಆಯಾ ಕ್ಷೇತ್ರದಲ್ಲಿ

(ಮೊದಲ ಪುಟದಿಂದ) ಉತ್ತಮ ಸಾಧನೆ ಮಾಡಿದವರಾಗಿದ್ದಾರೆ. ಈ ಮಾಸಾಂತ್ಯದೊಳಗೆ ಪ್ರಶಸ್ತಿ ಪ್ರದಾನ ಮಾಡಲಾಗುವದು ಎಂದು ತಿಳಿಸಿದರು.

ಪುಸ್ತಕ ಪ್ರಶಸ್ತಿ

ಈ ಸಾಲಿನಲ್ಲಿ ಪುಸ್ತಕ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ಐದು ಮಂದಿ ಲೇಖಕರ ಪುಸ್ತಕಗಳು ಈ ಪ್ರಶಸ್ತಿಗೆ ಆಯ್ಕೆಯಾಗಿವೆ. ಪುಸ್ತಕ ಪ್ರಶಸ್ತಿ ಈ ಹಿಂದೆ ರೂ. 5 ಸಾವಿರವಿದ್ದು, ಇದನ್ನು ರೂ. 25 ಸಾವಿರಕ್ಕೆ ಹೆಚ್ಚಿಸಲಾಗಿದೆ. 2015-16ನೇ ಸಾಲಿನ ಪ್ರಶಸ್ತಿ ಇದಾಗಿದೆ ಎಂದು ತಮ್ಮಯ್ಯ ಮಾಹಿತಿ ನೀಡಿದರು.

ಕೊಡವ ಇತಿಹಾಸ ಸಮಗ್ರ ದಾಖಲೀಕರಣ

ಕೊಡವ ಇತಿಹಾಸದ ಕುರಿತು ಸಮಗ್ರ ದಾಖಲೀಕರಣವನ್ನು ಅಕಾಡೆಮಿ ಕೈಗೊತ್ತಿಕೊಂಡಿದೆ. 11 ವಿಚಾರಗಳಿಗೆ ಸಂಬಂಧಿಸಿದಂತೆ ಪರಿಣತರು ‘ಸ್ಕ್ರಿಫ್ಟ್’ ತಯಾರಿಸಿ ಕೊಟ್ಟಿದ್ದಾರೆ. ಇದರ ವೀಡಿಯೋ ದಾಖಲೀಕರಣವನ್ನು ಸಿರಿಗಂಧ ಶ್ರೀನಿವಾಸಮೂರ್ತಿ ಅವರು ಮಾಡುತ್ತಿ ದ್ದಾರೆ. ಇದು ಹೊಸದೊಂದು ದಾಖಲೆಯಾಗಿ ಉಳಿಯಲಿದ್ದು, ಕೊಡವ ಇತಿಹಾಸ-ಸಂಸ್ಕøತಿ, ಆಚಾರ-ವಿಚಾರದ ಸಮಗ್ರ ಮಾಹಿತಿಯನ್ನು ಸುಲಭವಾಗಿ ಪಡೆಯಬಹುದೆಂದರು.

ದಾಖಲೀಕರಣಕ್ಕೆ ಸಂಬಂಧಿಸಿ ದಂತೆ ಶೇ. 50 ರಷ್ಟು ಕೆಲಸ ಪೂರ್ಣಗೊಂಡಿದೆ. ಉಳಿದ ಶೇ. 50 ರಷ್ಟು ಕೆಲಸ ಪ್ರಗತಿಯಲ್ಲಿದ್ದು, ಈ ದಾಖಲೆ ಮುಂದಿನ ಪೀಳಿಗೆಗೆ ಅನುಕೂಲವಾಗಲಿದೆ. ಅಕಾಡೆಮಿಯ ಅಧಿಕಾರಾವಧಿ ಮುಗಿಯಲಿರುವ ಆಗಸ್ಟ್ 13 ರೊಳಗೆ ಬಿಡುಗಡೆ ಮಾಡಲಾಗುವದು ಎಂದು ಅವರು ತಿಳಿಸಿದರು.

ಫೆಲೋಶಿಪ್

ಅಕಾಡೆಮಿಯ ಕಾರ್ಯ ಯೋಜನೆಯಲ್ಲಿ ಒಂದಾದ ಫೆಲೋಶಿಪ್ ಅನ್ನು ಈ ಬಾರಿ ನಾಲ್ವರು ಲೇಖಕರು ಪಡೆದುಕೊಂಡಿ ದ್ದಾರೆ. ಮಾಸ್ಟರ್ ಡಿಗ್ರಿ ಆದವರಿಗೆ ಮಾತ್ರ ಈ ಅವಕಾಶವಿದ್ದು, ಇದರೊಂದಿಗೆ ಹರದಾಸ ಅಪ್ಪನೆರವಂಡ ಅಪ್ಪಚ್ಚಕವಿ ಅವರ ಜೀವನ ಚರಿತ್ರೆಯ ಬಗ್ಗೆ ಸಂಶೋಧನಾ ಕೃತಿ ಪ್ರಕಟಿಸಲು ಮತ್ತು ಕೃತಿಯ ಪುಸ್ತಕ ಮುದ್ರಣ ಯೋಜನೆ ಹಮ್ಮಿಕೊಳ್ಳ ಲಾಗಿದೆ. ಸಾಹಿತಿ ಐತಿಚಂಡ ರಮೇಶ್ ಉತ್ತಪ್ಪ ಅವರು ಈ ಸಂಶೋಧನಾ ಕೃತಿ ತಯಾರಿಸುತ್ತಿದ್ದಾರೆಂದು ತಮ್ಮಯ್ಯ ಮಾಹಿತಿ ನೀಡಿದರು.

ಸಿ.ಡಿ. ಬಿಡುಗಡೆ: ಪ್ರಶಸ್ತಿ ಪ್ರದಾನ ಸಂದರ್ಭ ಹೊಸದಾಗಿ ಮತ್ತೊಂದು ಸಿ.ಡಿ ಹೊರತರಲಾಗುತ್ತಿದೆ. ಖ್ಯಾತ ಸಾಹಿತಿ ಐ.ಮಾ. ಮುತ್ತಣ್ಣ ಅವರ ಸಾಹಿತ್ಯವಿರುವ ಹಾಡಿನ ಸಿ.ಡಿ.ಯನ್ನು ಸದಸ್ಯ ಮದ್ರೀರ ಸಂಜು ಉಸ್ತುವಾರಿಯಲ್ಲಿ ಹೊರತರಲಾಗು ತ್ತಿದೆ. ಇದಲ್ಲದೆ ಈಗಿನ ಆಡಳಿತ ಮಂಡಳಿ ಬಂದ ಬಳಿಕ ‘ಕುಂದ್‍ಲ್ ಕೇಮೊ, ದೇವಪಾಟ್, ಕೊಡವ ಕೀರ್ತನೆ, ಹಾಕಿ ಹಬ್ಬಕ್ಕೆ ಸಂಬಂಧಿಸಿದ ಗೋಲ್‍ಪೊಯ್ಯನ ಎಂಬ ಸಿ.ಡಿ. ಹೊರತರಲಾಗಿದ್ದು, ಇದು ಐದನೇ ಸಿ.ಡಿ.ಯಾಗಿದೆ ಎಂದರು.

ಈ ಸಂದರ್ಭ ಅಕಾಡೆಮಿ ರಿಜಿಸ್ಟ್ರಾರ್ ಉಮರಬ್ಬ, ಸದಸ್ಯರು ಗಳಾದ ಡಾ. ಮೇಚಿರ ಸುಭಾಷ್ ನಾಣಯ್ಯ, ಕುಡಿಯರ ಬೋಪಯ್ಯ, ಚೋವಂಡ ಎಸ್. ಬೋಪಯ್ಯ, ಮುಲ್ಲೇಂಗಡ ಬೇಬಿ ಚೋಂದಮ್ಮ, ಮಾದೇಟಿರ ಬೆಳ್ಯಪ್ಪ, ಕಾಳಚಂಡ ಕಾರ್ಯಪ್ಪ, ಅಣ್ಣೀರ ಹರೀಶ್ ಮಾದಪ್ಪ, ಮೂಕೈರಿರ ಲೀಲಾವತಿ, ವಾಣಿ ಚಂಗುವಮಯ್ಯ ಹಾಜರಿದ್ದರು.