ನಾಪೋಕ್ಲು,ಜೂ. 3: ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಟ್ಟ ಮಕ್ಕಿ ಪೈಸಾರಿಯಲ್ಲ್ಲಿ ಕಸ ವಿಲೇವಾರಿಗಾಗಿ ಕಂದಾಯ ಇಲಾಖೆಯಿಂದ ಗುರುತಿಸಿದ ಜಾಗವನ್ನು ಪರಿಶೀಲನೆಗಾಗಿ ಜಿಲ್ಲಾ ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಚಾರುಲತಾ ಸೋಮಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ಹಿಂದೆ ಗ್ರಾ.ಪಂ. ತ್ಯಾಜ್ಯ ವಿಲೇವಾರಿ ನರಿಯಂದಡ ಗ್ರಾಮದ ಸರ್ವೆ ನಂ. 134/2ರಲ್ಲಿ ಜಾಗ ಮಂಜೂರು ಮಾಡಿದ್ದು, ಇಲ್ಲಿ ಕೆಲವು ಸಮಸ್ಯೆಗಳಿರುವದರಿಂದ ಬದಲಾವಣೆಗೆ ಪಂಚಾಯಿತಿ ಮೂಲಕ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ, ತಹಶೀಲ್ದಾರ್ ಅವರಿಗೆ ಮನವಿ ನೀಡಲಾಗಿದ್ದು, ಇದಕ್ಕೆ ಸ್ಪಂದಿಸಿ ಈ ಭೇಟಿ ನೀಡಲಾಗಿದ್ದು, ಈ ಸಂದರ್ಭ ಸ್ಥಳದಲ್ಲಿದ್ದ ಕಂದಾಯ ಪರಿವೀಕ್ಷಕ ರಾಮಯ್ಯ ಅವರಿಗೆ ಕೂಡಲೇ ಸೂಕ್ತ ಜಾಗವನ್ನು ಗುರುತಿಸುವಂತೆ ಸೂಚಿಸಲಾಯಿತು.

ಈ ಸಂದರ್ಭ ಜಿ.ಪಂ. ಸದಸ್ಯ ನೆಲ್ಲಚಂಡ ಕಿರಣ್ ಕಾರ್ಯಪ್ಪ, ತಾ.ಪಂ. ಸದಸ್ಯೆ ಉಮಾಪ್ರಭು, ಗ್ರಾ.ಪಂ. ಅಧ್ಯಕ್ಷ ಬೇಬಿ ಶಿವಪ್ಪ, ಗ್ರಾ.ಪಂ. ಉಪಾಧ್ಯಕ್ಷ ಮುಂಡ್ಯೂಳಂಡ ಸೋಮಯ್ಯ, ಪಿ.ಡಿ.ಓ. ಪೂವಮ್ಮ, ಗ್ರಾ.ಪಂ. ಸದಸ್ಯರಾದ ರತೀಶ್ ಕುಮಾರ್, ಬಿ.ಇ. ಶಾಂತಿ, ಕೆ. ಪ್ರಕಾಶ್, ಡಿ. ಭಾರತಿ, ಹಾಗೂ ಜಿ.ಪಂ. ಇಂಜಿನಿಯರ್‍ಗಳಾದ ಗವಿ ಸಿದ್ದಪ್ಪ, ಸುಬ್ಬಯ್ಯ ಸಾರ್ವಜನಿಕರು ಉಪಸ್ಥಿತರಿದ್ದರು. - ದುಗ್ಗಳ