ಶನಿವಾರಸಂತೆ, ಜೂ. 3: ಇಲ್ಲಿನ ಠಾಣಾ ಸರಹದ್ದಿನಲ್ಲಿ ನಿನ್ನೆ ಬೆಳಗ್ಗಿನ ಜಾವ ಕ್ಯಾತೆ ಗ್ರಾಮದ ಬಳಿ (ಏಂ-12 ಃ- 4838) ಕ್ಯಾಂಟರ್ ವಾಹನದಲ್ಲಿ ಅಕ್ರಮವಾಗಿ ಮರಳನ್ನು ಕಳ್ಳಸಾಗಣಿಕೆ ಮಡುತ್ತಿರುವದಾಗಿ ದೊರೆತ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿ ಮರಳು ಹಾಗೂ ವಾಹನವನ್ನು ವಶಪಡಿಸಿಕೊಂಡು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಪೊಲೀಸರಿಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಸ್ಥಳಕ್ಕೆ ತೆರಳಿದಾಗ ಇಲಾಖೆಯ ವಾಹನ ಕೆಟ್ಟು ನಿಂತಿತ್ತು. ವಾಹನವನ್ನು ಸರಿಪಡಿಸಿಕೊಂಡು ಬೆನ್ನಟ್ಟಿದಾಗ ರಸ್ತೆಯ ಬದಿಯಲ್ಲಿ ಅರೋಪಿಗಳು ಮರಳು ತುಂಬಿದ ವಾಹನವನ್ನು ಬಿಟ್ಟು ಕಾಡಿನಲ್ಲಿ ಪರಾರಿಯಾದರು ಪೊಲೀಸರು ಮರಳು ಹಾಗೂ ವಾಹನವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ವರದಿ ಮಾಡಿದ್ದಾರೆ.
ಕಾರ್ಯಾಚರಣೆಯಲ್ಲಿ ಠಾಣಾಧಿಕಾರಿ ಹೆಚ್.ಎಂ. ಮರಿಸ್ವಾಮಿ, ಸಿಬ್ಬಂದಿಗಳಾದ ಸಂತೋಷ್, ವಿಶ್ವನಾಥ, ಹರೀಶ್, ಶಫೀರ್, ಚಾಲಕ ಕೆ.ಎಸ್. ವಿವೇಕ್ ಪಾಲ್ಗೊಂಡಿದ್ದರು.