ಕೂಡಿಗೆ, ಜೂ. 3: ರೈತರು ಸಾವಯವ ಕೃಷಿಕ ಸಂಘಗಳ ಒಕ್ಕೂಟದಿಂದ ಕಳೆದ ಮೂರು ವರ್ಷ ಗಳಿಂದ ತಾಲೂಕಿನ ಕೆಲವು ಹೋಬಳಿಗಳಲ್ಲಿ ಒಂದೊಂದು ಗ್ರಾಮಗಳನ್ನು ದತ್ತು ತೆಗೆದುಕೊಳ್ಳುವ ಮೂಲಕ ಸಾವಯವ ಗೊಬ್ಬರಗಳನ್ನು ಉತ್ಪಾದಿಸಲು ಎಲ್ಲಾ ರೀತಿಯ ಸಹಕಾರಗಳನ್ನು ಒಕ್ಕೂಟದಿಂದ ನೀಡುತ್ತಿದ್ದು, ಇದನ್ನು ಕೆಲವು ರೈತರು ಸದ್ಬಳಿಸಿಕೊಳ್ಳುತ್ತಿದ್ದರೂ, ಇನ್ನುಳಿದ ರೈತರು ಸಾವಯವ ಗೊಬ್ಬರವನ್ನು ತಮ್ಮ ಮನೆಯ ಹಿತ್ತಲುಗಳಲ್ಲಿ ಉತ್ಪಾದಿಸುವತ್ತ ಗಮನಹರಿಸಬೇಕು ಎಂದು ತಾಲೂಕು ಸಹಾಯಕ ಕೃಷಿ ನಿರ್ದೇಶಕ ಡಾ. ಹೆಚ್.ಎಸ್. ರಾಜಶೇಖರ್ ಹೇಳಿದರು.

ಸಾವಯವ ಕೃಷಿ ಸಂಘದ ಅಧ್ಯಕ್ಷ ಹುಲಸೆ ಗ್ರಾಮದ ಹೆಚ್.ಎನ್. ಹೇಮಂತ್ ಕುಮಾರ್ ತೋಟಕ್ಕೆ ಭೇಟಿ ನೀಡಿ, ಅಲ್ಲಿ ಉತ್ಪಾದಿಸಿದ್ದ ಸಾವಯವ ಗೊಬ್ಬರ ಮತ್ತು ಬೆಳೆಗಳನ್ನು ವೀಕ್ಷಿಸಿ, ರೈತರು ತಯಾರಿಸಿ ತಮ್ಮ ಜಮೀನುಗಳಲ್ಲಿ ಹಾಕಿ ಬೆಳೆಗಳನ್ನು ಬೆಳೆದು ಆರೋಗ್ಯಪೂರ್ಣ ಆಹಾರಗಳನ್ನು ಪಡೆದು ಜಮೀನಿನ ಫಲವತ್ತತೆಯನ್ನು ಹೆಚ್ಚಿಸಿಕೊಳ್ಳಲು ಕರೆ ನೀಡಿದರು.

ಈ ಸಂದರ್ಭ ಕೊಡಗು ಮತ್ತು ಹಾಸನ ಪ್ರಾಂತೀಯ ಸಹಕಾರ ಸಾವಯವ ಕೃಷಿಕರ ಸಂಘಗಳ ಒಕ್ಕೂಟ ನಿಯಮಿತ ಅಧ್ಯಕ್ಷ ವೈ.ಸಿ. ರುದ್ರಪ್ಪ, ಒಕ್ಕೂಟದ ಉಪಾಧ್ಯಕ್ಷ ಮುತ್ತಪ್ಪ, ಒಕ್ಕೂಟದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯ ಪ್ರಸಾದ್, ನಿರ್ದೇಶಕರುಗಳಾದ ಕೃಷ್ಣ ಮೂರ್ತಿ, ಮಾಗೋಡ್ ಬಸವರಾಜ್, ಧರ್ಮಲಿಂಗಂ, ಹೆಚ್.ಎನ್. ಕಪೀನಪ್ಪ, ಜಿಲ್ಲಾ ಕಾರ್ಯಸಂಯೋಜಕ ಪುಟ್ಟಸ್ವಾಮಿ, ಕ್ಷೇತ್ರಾಧಿಕಾರಿ ಲೋಕೇಶ್, ಕೃಷಿ ಇಲಾಖೆಯ ಅಧಿಕಾರಿ ಪೂಣಚ್ಚ ಇದ್ದರು.