ವೀರಾಜಪೇಟೆ, ಜೂ. 3: ತಂಬಾಕು ವಸ್ತುಗಳ ಸೇವನೆಯಿಂದ ಮನುಷ್ಯನ ದೇಹದಲ್ಲಿ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಅಪರ ಸಿವಿಲ್ ನ್ಯಾಯಾಧೀಶ ಬಿ.ಕೆ. ಮನು ಹೇಳಿದರು.

ತಾಲೂಕು ಕಾನೂನು ಸೇವೆಗಳ ಸಮಿತಿ, ವೀರಾಜಪೇಟೆ ವಕೀಲರ ಸಂಘ ಹಾಗೂ ಪೊಲೀಸ್ ಇಲಾಖೆ ವತಿಯಿಂದ ಅಮ್ಮತ್ತಿ ಸರ್ಕಾರಿ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ. ‘’ತಂಬಾಕು ನಿಷೇಧ ದಿನಾಚರಣೆ’’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವೀರಾಜಪೇಟೆ ವಕೀಲರ ಸಂಘದ ಅಧ್ಯಕ್ಷ ಎನ್.ಜಿ. ಕಾಮತ್ ಅವರು ಮಾತನಾಡಿ, ತಂಬಾಕು ಮಾದಕ ವಸ್ತುಗಳಿಂದ ಎಲ್ಲರೂ ದೂರವಿದ್ದು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.

ವಕೀಲ ಕೆ.ವಿ. ಸುನೀಲ್ ಅವರು ‘ತಂಬಾಕು ನಿಷೇದ’ ಎಂಬ ವಿಷಯ ಕುರಿತು ಮಾತನಾಡಿ 2003 ರಿಂದ ತಂಬಾಕು ನಿಷೇಧ ಕಾಯಿದೆ ಜಾರಿಯಲ್ಲಿದ್ದರೂ ವರ್ಷಕ್ಕೆ 8 ಲಕ್ಷ ಜನರು ಕ್ಯಾನ್ಸರ್ ರೋಗದಿಂದ ಸಾವನ್ನಪ್ಪುತ್ತಿದ್ದಾರೆ ಎಂದು ಮಾಹಿತಿಯಿತ್ತರು.

ವಕೀಲ ಮಹಮ್ಮದ್ ರಫೀಕ್ ಉಪನ್ಯಾಸ ನೀಡಿದರು.