ಮಡಿಕೇರಿ, ಜೂ. 4: ಕೊಡಗಿನ ಅಸ್ತಿತ್ವಕ್ಕೆ ಧಕ್ಕೆ ಎದುರಾದರೆ ಅದನ್ನು ರಕ್ಷಿಸುವ ನಿಟ್ಟಿನಲ್ಲಿ ತನ್ನ ಬೆಂಬಲ ಸದಾ ಇರುತ್ತದೆ ಎಂದು ಸಂಸದ ಪ್ರತಾಪ್ ಸಿಂಹ ಭರವಸೆಯಿತ್ತರು. ಯುನೈಟೆಡ್ ಕೊಡವ ಆರ್ಗನೈ ಸೇಷನ್, ಕೊಡವ ಒಗ್ಗಟ್ ಮೈಸೂರು ಸಂಯುಕ್ತಾಶ್ರಯ ದಲ್ಲಿ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಸಭಾಂಗಣದಲ್ಲಿ ಏರ್ಪಡಿಸ ಲಾಗಿದ್ದ ಹಿರಿಯ ವಕೀಲ ಪಾಲೇಕಂಡ ಸುಬ್ಬಯ್ಯ ಅವರು ಸಂಯೋಜಿಸಿರುವ ‘ದಿ.ಗ್ಯಾಲಂಟ್ ಕೊಡವ ಅಂಡ್ ಹಿಸ್‍ಗನ್’ ಎಂಬ ಪುಸ್ತಕವನ್ನು ಬಿಡುಗಡೆ ಮಾಡಿ ಪ್ರತಾಪ್ ಸಿಂಹ ಮಾತನಾಡಿದರು. ಕೊಡಗಿನ ಬಗ್ಗೆ ತನಗೆ ಅತೀವ ಪ್ರೀತಿ ಹಾಗೂ ಗೌರವ ವಿದೆ. ಕೊಡಗು ಜಿಲ್ಲೆ ತನ್ನದೇ ಆದ ವೈಶಿಷ್ಟ್ಯ ಹೊಂದಿದ್ದು, ಕೊಡಗಿನ ಹಿತಕ್ಕಾಗಿ ಪ್ರಾಮಾಣಿಕ ಕೆಲಸ ಮಾಡು ವದಾಗಿ ಅವರು ಆಶ್ವಾಸನೆಯಿತ್ತರು.ಪಾಲೇಕಂಡ ಸುಬ್ಬಯ್ಯ ಅವರು ಮಾತನಾಡಿ, ಕೊಡವರಿಗೆ ಕೋವಿ ಹಕ್ಕು ಎಂಬದು ಹಿಂದಿನಿಂದಲೂ ಬಂದಂತಹ ಶಾಶ್ವತ ಹಕ್ಕು. ಆ ಹಕ್ಕನ್ನು ಉಳಿಸಿಕೊಳ್ಳುವಲ್ಲಿ ಒಗ್ಗಟ್ಟು ಪ್ರದರ್ಶಿ ಸುವ ಹಾಗೂ ಎಚ್ಚರಿಕೆ ವಹಿಸುವ ಅನಿವಾರ್ಯತೆ ಇದೆ ಎಂದು ಅಭಿಪ್ರಾಯಪಟ್ಟರು. ಸುಪ್ರೀಂ ಕೋರ್ಟ್‍ನ ವಕೀಲ

(ಮೊದಲ ಪುಟದಿಂದ) ಬ್ರಿಜೇಶ್ ಕಾಳಪ್ಪ ಮಾತನಾಡಿ, 1652 ಭಾಷೆ, 3000 ಜಾತಿ, 25,000 ಉಪ ಪಂಗಡಗಳಿರುವ ದೇಶದಲ್ಲಿ ಕೊಡವರಿಗೆ ಮಾತ್ರ ಕೋವಿ ಹಕ್ಕು ಲಭಿಸಿದ್ದು, ಅದನ್ನು ಉಳಿಸಿಕೊಳ್ಳುವಲ್ಲಿ ಪ್ರತಿಯೊಬ್ಬರು ಗಮನ ಹರಿಸಬೇಕು ಎಂದು ಹೇಳಿದರು. ಅಪರ ಜಿಲ್ಲಾಧಿಕಾರಿ ಸತೀಶ್ ಕುಮಾರ್ ಮಾತನಾಡಿ, ಕೊಡವರ ಕೋವಿ ಹಕ್ಕಿಗೆ ಸಂಬಂಧಿಸಿದಂತೆ ಕಾನೂನಿನಡಿ ಆ ಹಕ್ಕನ್ನು ಸಂರಕ್ಷಿಸುವಲ್ಲಿ ಜಿಲ್ಲಾಡಳಿತ ಸಹಕಾರ ನೀಡಲಿದೆ ಎಂದರು.

ಯುಕೋ ಸಂಚಾಲಕ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಸ್ವಾಗತಿಸಿದರು. ಕೊಡವ ಒಗ್ಗಟ್ ಸಂಸ್ಥೆಯ ಮುಖಂಡ ಜಮ್ಮಡ ಗಣೇಶ್ ಅಯ್ಯಣ್ಣ ನಿರೂಪಿಸಿ, ವಂದಿಸಿದರು.