ಸುಂಟಿಕೊಪ್ಪ, ಜೂ. 7: ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯ ಕಸ ವಿಲೇವಾರಿಗಾಗಿ ಟ್ರಾಕ್ಟರ್‍ಅನ್ನು ಉಪಯೋಗಿಸಲಾಗುತ್ತಿದ್ದು ಇದೀಗ ಗ್ರಾಮದ ವಿವಿಧ ಬಡಾವಣೆಗಳ ಇಕ್ಕಟ್ಟಿನ ರಸ್ತೆಗಾಗಿ ಟ್ರಾಕ್ಟರ್ ಸಾಗಲು ಸಾಧ್ಯವಾಗದೆ ಕಸವಲೇವಾರಿಗೆ ತೊಂದರೆಯುಂಟಾಗುತ್ತಿದ್ದುದ್ದನ್ನು ಗಮನಿಸಿ ಗ್ರಾ.ಪಂ. ಆಡಳಿತ ಮಂಡಳಿ ನೂತನ ಗೂಡ್ಸ್ ಆಟೋ ರಿಕ್ಷಾವನ್ನು ಖರೀದಿಸಿದೆ. ಪ್ರತಿದಿನ ಗ್ರಾ.ಪಂ. ವ್ಯಾಪ್ತಿಯ ವಾರ್ಡ್‍ಗಳಿಗೆ ಬರುವಾಗ ಗ್ರಾಮಸ್ಥರು ತ್ಯಾಜ್ಯವನ್ನು ತಂದು ಹಾಕುವ ಮೂಲಕ ಸಹಕಾರ ನೀಡಬೇಕೆಂದು ಗ್ರಾ.ಪಂ. ಅಧ್ಯಕ್ಷೆ ರೋಸ್‍ಮೇರಿ ರಾಡ್ರಿಗಸ್ ಹೇಳಿದರು.

ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯಲ್ಲಿ ಸ್ವಚ್ಚ ಗ್ರಾಮಕ್ಕೆ ಆದ್ಯತೆ ನೀಡಲಾಗಿದೆ. ಗ್ರಾಮದಲ್ಲಿ ಪ್ಲಾಸ್ಟಿಕ್, ತಂಬಾಕು ಮಾರಾಟ ನಿಷೇಧಿಸಲಾಗಿದೆ. ಈ ನಿಟ್ಟಿನಲ್ಲಿ ಎಷ್ಟೋ ಆಟೋ ಗೂಡ್ಸ್ ವಾರ್ಡ್‍ಗಳಿಗೆ ಬರುವಾಗ ಗ್ರಾಮಸ್ಥರು ಕಸವನ್ನು ಈ ಗಾಡಿಗೆ ಹಾಕುವ ಕೆಲಸ ಮಾಡಬೇಕು, ಎಲ್ಲೆಡೆ ತೊಟ್ಟಿಯನ್ನು ಇನ್ನು ಮುಂದೆ ಹಾಕಲಾಗುವದಿಲ್ಲ ಎಂದು ಪಿಡಿಓ ಮೇದಪ್ಪ ಹೇಳಿದರು.

ಗ್ರಾ.ಪಂ. ಉಪಾಧ್ಯಕ್ಷ ಪಿ.ಆರ್. ಸುಕುಮಾರ್, ಸದಸ್ಯರುಗಳಾದ ಬಿ.ಎಂ. ಸುರೇಶ್, ಎ. ಶ್ರೀಧರ್ ಕುಮಾರ್, ಶಾಹಿದ್, ಕೆ.ಇ. ಕರೀಂ, ನಾಗರತ್ನ ಸುರೇಶ್, ರತ್ನಾ ಜಯನ್, ಜ್ಯೋತಿ ಭಾಸ್ಕರ್, ಶಿವಮ್ಮ ಮಹೇಶ್, ರಹೇನಾ ಫೈರೋಜ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.