*ಗೋಣಿಕೊಪ್ಪಲು, ಜೂ7 : 750 ವರ್ಷಗಳ ಇತಿಹಾಸ ಹೊಂದಿರುವ ಹಳ್ಳಿಗಟ್ಟು ಭಧ್ರಕಾಳಿ ದೇವಸ್ಥಾನದ ಪುನರ್‍ಪ್ರತಿಷ್ಠಾಪನೆ ಮೂರು ದಿನಗಳ ಕಾಲ ನಡೆಯಿತು. ನೀಲೇಶ್ವರ ತಂತ್ರಿಗಳ ನೇತೃತ್ವದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ನೆರವೇರಿತು.

ಗಣಪತಿ ಹೋಮ, ರಾಕ್ಷೋಘ್ನ ಹೋಮ, ವಾಸ್ತು ಬಲಿ, ಅನುಜ್ಞಾ ಕಲಶ, ಪ್ರೋಕ್ತ ಹೋಮ, ಆದಿವಾಸ ಹೋಮ, ಬ್ರಹ್ಮಕಲಶ ಪೂಜೆ ನಂತರ ಹಸ್ತ ನಕ್ಷತ್ರದಲ್ಲಿ ಭದ್ರಕಾಳಿ ಮೂರ್ತಿಯ ಪ್ರತಿಷ್ಠಾಪನಾ ಕಾರ್ಯ ನಡೆಯಿತು. ಸ್ಥಳೀಯ ಗ್ರಾಮಸ್ಥರು ಪೂಜಾ ಕಾರ್ಯದಲ್ಲಿ ತೊಡಗಿಸಿಕೊಂಡು ಭಕ್ತಿ ಮೆರೆದರು.

ಶಾಸಕ ಕೆ.ಜಿ. ಬೋಪಯ್ಯ ವಿಶೇಷ ಪೂಜೆ ನೆರವೇರಿಸಿದರು. ವೀರಾಜಪೇಟೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಈ.ಸಿ. ಜೀವನ್, ಸ್ಥಳೀಯ ಪ್ರಮುಖ ತೋರೇರ ವಿನು, ತಾಲೂಕು ಫೆಡರಲ್ ಉಪಾಧ್ಯಕ್ಷ ಮಧು ದೇವಯ್ಯ ದೇವರ ಪೂಜಾ ಕಾರ್ಯದಲ್ಲಿ ತೊಡಗಿಸಿಕೊಂಡರು.

ದೇವಸ್ಥಾನ ಸಮಿತಿ ಅಧ್ಯಕ್ಷ ಚಮ್ಮಟ್ಟಿರ ಕುಶಾಲಪ್ಪ, ಕಾರ್ಯದರ್ಶಿ ಮೂಕಳೇರ ಪೂಣಚ್ಚ ಸೇರಿದಂತೆ ಸಮಿತಿ ಸದಸ್ಯರು ಗ್ರಾಮಸ್ಥರು ಸೇರಿ ವೈಭವಿತವಾಗಿ ಪುನರ್‍ಪ್ರತಿಷ್ಟಾಪನಾ ಕಾರ್ಯದಲ್ಲಿ ತೊಡಗಿಸಿಕೊಂಡರು. ಭಕ್ತಾದಿಗಳಿಗೆ ಮೂರು ದಿನ ಅನ್ನಸಂತರ್ಪಣೆ, ಪ್ರಸಾದ ವಿನಿಯೋಗ ನಡೆಯಿತು.