ಮಡಿಕೇರಿ, ಜೂ. 7: ನಗರದ ಅಶ್ವಿನಿ ಆಸ್ಪತ್ರೆಯಲ್ಲಿ ತಾ. 11 ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆ ವರೆಗೆ ‘ಮಧುಮೇಹ ಕಣ್ಣಿನ ಪೊರೆ ಜಾಗೃತಿ ಶಿಬಿರ’ ಏರ್ಪಡಿಸಲಾಗಿದೆ. ಮೈಸೂರಿನ ಬೃಂದಾವನ ಆಸ್ಪತ್ರೆ, ಕುಶಾಲನಗರದ ಲೋಪಾಮುದ್ರ ಕಣ್ಣಿನ ಆಸ್ಪತ್ರೆ, ಹಾಗೂ ಗೋಣಿಕೊಪ್ಪಲುವಿನ ಲೋಪಾಮುದ್ರ ವೈದ್ಯಕೀಯ ಕೇಂದ್ರಗಳ ಸಹಯೋಗದಲ್ಲಿ ಈ ಶಿಬಿರ ಆಯೋಜಿಸಲಾಗಿದೆ.
ಶಿಬಿರದಲ್ಲಿ ಅನುಭವಿ ವೈದ್ಯರು, ನೇತ್ರ ತಜ್ಞರು ಪಾಲ್ಗೊಳ್ಳಲಿದ್ದಾರೆ. ನಾಗರಿಕರು ಈ ಪರೀಕ್ಷಾ ಉಚಿತ ಶಿಬಿರದ ಸದುಪಯೋಗ ಪಡೆದುಕೊಳ್ಳಲು ಆಯೋಜಕರು ಕೋರಿದ್ದಾರೆ.