ಸೋಮವಾರಪೇಟೆ, ಜೂ.7 : ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಇಲ್ಲಿನ ಒಕ್ಕಲಿಗರ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ಐದನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸ್ಮರಣ ಸಂಚಿಕೆ ಮತ್ತು ವಿವಿಧ ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು.

ಸಮ್ಮೇಳನ ಅಂಗವಾಗಿ ಹೊರತರಲಾದ ಸ್ಮರಣ ಸಂಚಿಕೆಯನ್ನು ಮಾಜೀ ಸಚಿವ ಬಿ.ಎ. ಜೀವಿಜಯ ಅವರು ಬಿಡುಗಡೆಗೊಳಿಸಿದರು.

ಸಾಹಿತಿ ಹಾಗು ಜಾನಪದ ಕಲಾವಿದರಾದ ಪ್ರೊ. ಬೆಸೂರು ಮೋಹನ್ ಪಾಳೇಗಾರ್ ಅವರು ಬರೆದ ಗ್ರಾಮೀಣ ಜಾನಪದ ಆಟಗಳು, ವಿಘರ್ಷಣೆ ವಿಜ್ಞಾನ, ಕ್ರೀಡಾ ಮನೋಲ್ಲಾಸ ವಿಜ್ಞಾನ, ತಾಂತ್ರಿಕ ಜ್ಞಾನ ವಿಜ್ಞಾನ ಪುಸ್ತಕವನ್ನು ಶಾಸಕ ಎಂ.ಪಿ. ಅಪ್ಪಚ್ಚುರಂಜನ್, ರೇಷ್ಮೆ ಮಂಡಳಿ ಅಧ್ಯಕ್ಷ ಟಿ.ಪಿ. ರಮೇಶ್, ಸಮ್ಮೇಳನಾಧ್ಯಕ್ಷ ಚಂದ್ರಶೇಖರ ಮಲ್ಲೋರಹಟ್ಟಿ, ಕಸಾಪ ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್, ತಾಲೂಕು ಅಧ್ಯಕ್ಷ ಜವರಪ್ಪ ಸೇರಿದಂತೆ ಇತರರು ಬಿಡುಗಡೆಗೊಳಿಸಿದರು.

ಇದೇ ಸಂದರ್ಭ ಶಿಕ್ಷಕಿ ರಾಣಿ ರವೀಂದ್ರ ಬರೆದ ಇಂಚರ ಕವನ ಸಂಕಲನವನ್ನು ಬೆಂಗಳೂರು ದೂರದರ್ಶನ ಕೇಂದ್ರದ ದಕ್ಷಿಣ ವಲಯ ಮಹಾನಿರ್ದೇಶಕ ಡಾ.ಮಹೇಶ್ ಜೋಷಿ ಬಿಡುಗಡೆಗೊಳಿಸಿದರು.