ಮಡಿಕೇರಿ, ಜೂ. 8: ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಮತ್ತು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ವತಿಯಿಂದ ವಿದ್ಯುತ್ ಸರಬರಾಜು ಮತ್ತು ನಿಯಮಾವಳಿ ಮತ್ತು ನಿಬಂಧನೆಗಳ ಕುರಿತು ಕಾರ್ಯಾಗಾರ ನಗರದ ಹೊಟೇಲ್ ವ್ಯಾಲಿ ವ್ಯೂನಲ್ಲಿ ನಡೆಯಿತು.

ಕಾರ್ಯಾಗಾರದಲ್ಲಿ ಮಾತನಾಡಿದ ಪ್ರಭಾಕರ್ ಅವರು ವಿದ್ಯುತ್ ಸರಬರಾಜು ನಿಯಮಾವಳಿ ಮತ್ತು ನಿಬಂಧನೆಗಳನ್ನು ಸಂಬಂಧಪಟ್ಟವರು ಅರಿತು ಕಾರ್ಯ ನಿರ್ವಹಿಸಬೇಕಿದೆ. ಗ್ರಾಹಕರಿಗೆ ಹಲವು ಸೌಲಭ್ಯಗಳನ್ನು ಒದಗಿಸುವ ಮೂಲಕ ಯಾವದೇ ರೀತಿಯ ಗೊಂದಲಕ್ಕೆ ಅವಕಾಶ ಮಾಡದೆ ಗ್ರಾಹಕರ ಸೇವೆ ಮಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಸೆಸ್ಕ್ ಕಾರ್ಯಪಾಲಕ ಇಂಜಿನಿಯರ್ ಸೋಮಶೇಖರ್, ಸಹಾಯಕ ಕಾರ್ಯಪಾಲಕ ಅಭಿಯಂತರ ದೇವಯ್ಯ, ದೊಡ್ಡಮನಿ, ಪ್ರಮುಖರಾದ ನಂದಾ ಸುಬ್ಬಯ್ಯ, ಕಾರ್ಯಾಗಾರದಲ್ಲಿ ಹಲವು ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.