ಮಡಿಕೇರಿ, ಜೂ. 8: ಆರೋಗ್ಯಪೂರ್ಣ ಬದುಕಿನೊಂದಿಗೆ ಸ್ವಸ್ಥ ಸಮಾಜದ ನಿರ್ಮಾಣದ ಚಿಂತನೆಗಳಡಿ ಕೇಂದ್ರ ಸರ್ಕಾರದಿಂದ ಅನುಷ್ಠಾನಗೊಂಡಿರುವ ವಿಶ್ವ ಯೋಗ ದಿನಾಚರಣೆÉ ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ತಾ. 21 ರಂದು ನಡೆಯಲಿದೆ. ಇದರ ಭಾಗವಾಗಿ ಜಿಲ್ಲೆಯಾದ್ಯಂತ ಉಚಿತ ಯೋಗ ಶಿಬಿರಗಳು ಒಂದು ತಿಂಗಳ ಕಾಲ ನಡೆಯಲಿದೆ ಎಂದು ಭಾರತೀಯ ವಿದ್ಯಾಭವನದ ಯೋಗ ಶಿಕ್ಷಕ ಕೆ.ಕೆ. ಮಹೇಶ್ ಕುಮಾರ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದ ಆಯುರ್ವೇದ, ಯೋಗ, ನ್ಯಾಚುರೋಪತಿ, ಯುನಾನಿ, ಸಿದ್ಧ ಮತ್ತು ಹೋಮಿಯೋಪತಿ (ಆಯುಷ್) ಸಚಿವಾಲಯದ ಮೂಲಕ ಯೋಗ ದಿನಾಚರಣೆÉಯನ್ನು ಆಯೋಜಿಸಲಾಗುತ್ತಿದೆ. ಪ್ರತಿ ಜಿಲ್ಲೆಯಲ್ಲಿ ಈ ಸಂಬಂಧ ಉಚಿತ ಯೋಗ ತರಬೇತಿ ಮತ್ತು ಯೋಗ ದಿನಾಚರಣೆ ನಡೆಸುವ ಜವಾಬ್ದಾರಿಯನ್ನು ವಿವಿಧ ಸ್ವಯಂ ಸೇವಾ ಸಂಸ್ಥೆಗಳಿಗೆ ವಹಿಸಲಾಗಿದೆ. ಅದರಂತೆ ಕೊಡಗಿನ ಜವಾಬ್ದಾರಿಯನ್ನು ಆರ್ಟ್ ಆಫ್ ಲಿವಿಂಗ್ ಸಂಸ್ಥೆಗೆ ವಹಿಸಲಾಗಿದೆ ಎಂದು ತಿಳಿಸಿದರು.

8 ಕೇಂದ್ರಗಳಲ್ಲಿ ಯೋಗ ತರಬೇತಿ

ಆರ್ಟ್ ಆಫ್ ಲೀವಿಂಗ್‍ನ ಕೊಡಗು ಜಿಲ್ಲಾ ಯೋಗ ಶಿಕ್ಷಕರ ಸಂಯೋಜಕ ಅಳಮೇಂಗಡ ರಾಜಪ್ಪ ಮಾತನಾಡಿ, ಈ ಬಾರಿ ಜಿಲ್ಲಾ ವ್ಯಾಪ್ತಿಯ ಸೋಮವಾರಪೇಟೆ, ಗೋಣಿಕೊಪ್ಪಲು, ಪೆÀÇನ್ನಂಪೇಟೆ, ಅಮ್ಮತ್ತಿ, ಟಿ. ಶೆಟ್ಟಿಗೇರಿ, ಮಡಿಕೇರಿ ಸೇರಿದಂತೆ ಎಂಟು ಕೇಂದ್ರಗಳಲ್ಲಿ ಉಚಿತ ಯೋಗ ತರಬೇತಿ ಶಿಬಿರ ತಿಂಗಳ ಕಾಲ ನಡೆಯಲಿದೆ ಎಂದರು. ಬಹುತೇಕ ಕೇಂದ್ರಗಳಲ್ಲಿ ಈಗಾಗಲೇ ಯೋಗ ತರಬೇತಿ ಆರಂಭವಾಗಿದ್ದು, ಮಡಿಕೇರಿಯಲ್ಲಿ ತಾ. 10 ರಿಂದ ನಗರದ ಭಾರತೀಯ ವಿದ್ಯಾಭವನ, ಬಾಲಭವನ, ಗೌಳಿಬೀದಿಯ ಆರ್ಟ್ ಆಫ್ ಲಿವಿಂಗ್ ಜಿಲ್ಲಾ ಮಾಹಿತಿ ಕೇಂದ್ರÀ್ರ, ಬಸಪ್ಪ ಶಿಶು ವಿಹಾರ ದಾಸವಾಳ, ಸ್ವಸ್ಥ ಯೋಗ ಕೇಂದ್ರ್ರ ಮೈತ್ರಿ ಹಾಲ್, ಅಶ್ವಿನಿ ಆಸ್ಪತ್ರೆ. ಮಹದೇವಪೇಟೆಯ ವಾಸವಿ ಮಹಿಳಾ ಸಂಘ ಕನ್ನಿಕಾ ಪರಮೇಶ್ವರಿ ದೇವಸ್ಥಾನ, ಕಾವೇರಿ ಲೇಔಟ್ ಮತ್ತು ಅಂಬೇಡ್ಕರ್ ಭವನದಲ್ಲಿ ಉಚಿತ ಯೋಗ ತರಬೇತಿ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಈಗಾಗಲೇ ನಗರದ ಅಶ್ವಿನಿ ಆಸ್ಪತ್ರೆಯಲ್ಲಿ ಜಿಲ್ಲೆಯ ವಿವಿಧೆಡೆಗಳಲ್ಲಿನ 30 ಶಾಲಾ ಶಿಕ್ಷಕರಿಗೆ ಯೋಗ ತರಬೇತಿಯನ್ನು ನೀಡಲಾಗಿದ್ದು, ಇವರು ತಮ್ಮ ಶಾಲಾ ವ್ಯಾಪ್ತಿಯ ಸಾರ್ವಜನಿಕರಲ್ಲಿ ಯೋಗದ ಕುರಿತು ಮಾಹಿತಿ ಮತ್ತು ತರಬೇತಿಯನ್ನು ನೀಡಲಿದ್ದಾರೆ ಎಂದು ರಾಜಪ್ಪ ತಿಳಿಸಿದರು.

ಯೋಗ ದಿನಾಚರಣೆÉ

ಪ್ರಸಕ್ತ ಸಾಲಿನ 3ನೇ ವರ್ಷದ ಯೋಗ ದಿನಾಚರಣೆ ತಾ. 21 ರಂದು ನಗರದ ಜ. ತಿಮ್ಮಯ್ಯ ಕ್ರೀಡಾಂಗಣದ ಒಳಾಂಗÀಣ ಕ್ರೀಡಾಂಗಣದಲ್ಲಿ ಹಾಗೂ ಜಿಲ್ಲೆಯ ವಿವಿಧೆಡೆಗಳ ಯೋಗ ತರಬೇತಿ ಕೇಂದ್ರ್ರಗಳಲ್ಲಿ ಬೆಳಿಗ್ಗೆ 7 ರಿಂದ 8 ಗಂಟೆಯವರೆಗೆ ಏಕಕಾಲದಲ್ಲಿ ಯೋಗ ದಿನವನ್ನು ಆಚರಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಯೋಗ ಜಾಥಾ

ಯೋಗ ದಿನಾಚರಣೆಯ ಪೂರ್ವಭಾವಿಯಾಗಿ ತಾ. 18 ರಂದು ನಗರದ ಗಾಂಧಿ ಮೈದಾನದಿಂದ ‘ಯೋಗ ಜಾಥಾ’ ನಡೆಯಲಿದೆ. ಈ ಜಾಥಾ ನಗರದ ಮುಖ್ಯ ಬೀದಿಗಳನ್ನು ಹಾದು ಗಾಂಧಿ ಮೈದಾನಕ್ಕೆ ಬಂದು ಸೇರಲಿದೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಆರ್ಟ್ ಆಫ್ ಲಿವಿಂಗ್‍ನ ಜಿಲ್ಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಹಾಗೂ ವಕೀಲ ಕೆ.ಡಬ್ಲ್ಯು. ಬೋಪಯ್ಯ, ಪತಂಜಲಿ ಯೋಗ ಶಿಕ್ಷಣ ಕೇಂದ್ರದ ಯೋಗ ಶಿಕ್ಷಕರಾದ ಸಿ.ಕೆ. ಶ್ರೀಪತಿ ಮತ್ತು ಝಾನ್ಸಿ ಉಪಸ್ಥಿತರಿದ್ದರು.