ಮಡಿಕೇರಿ, ಜೂ. 9: ನಾಕೂರಿನ ಎಸ್. ಎಸ್. ಮಂಜುನಾಥ ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದು, ಸ್ಥಳೀಯ ಕಾನ್ಬೈಲ್ ಸರಕಾರಿ ಪ್ರೌಢಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಶಬ್ದಕೋಶ ಮತ್ತು ಶಾಲೆಯ ಎಲ್ಲಾವ ವಿದ್ಯಾರ್ಥಿಗಳಿಗೆ ಲೋಟಗಳನ್ನು ವಿತರಿಸಿದರು.
ಮಂಜುನಾಥ ಅವರ ಕೊಡುಗೆಯನ್ನು ಗ್ರಾ.ಪಂ. ಸದಸ್ಯ ವಸಂತ ಮತ್ತು ರಾಮಚಂದ್ರ ಶಾಲಾ ಮಕ್ಕಳಿಗೆ ವಿತರಿಸಿದರು. ಈ ಸಂದರ್ಭ ಮುಖ್ಯ ಶಿಕ್ಷಕ ಎಂ.ವಿ. ಮಂಜೇಶ್ ಮತ್ತು ಶಿಕ್ಷಕರು ಹಾಜರಿದ್ದರು.