ಕೂಡಿಗೆ, 9: ರಕ್ತದೊತ್ತಡ ಕ್ಷೀಣಗೊಂಡ ಪರಿಣಾಮ ಅಂಗನವಾಡಿ ಕಾರ್ಯಕರ್ತೆಯೋರ್ವರು ಸಾವನ್ನಪ್ಪಿರುವ ಘಟನೆ ಸಂಭವಿಸಿದೆ. ಇಲ್ಲಿಗೆ ಸಮೀಪದ ಭುವನಗಿರಿ ಅಂಗನವಾಡಿ ಕಾರ್ಯಕರ್ತೆ ಶಶಿಕಲಾ (40) ಎಂಬವರು ನಿನ್ನೆ ಸೋಮವಾರಪೇಟೆಗೆ ತರಬೇತಿಗೆ ತೆರಳಿದ್ದ ಸಂದರ್ಭ ರಕ್ತದೊತ್ತಡ ಕ್ಷೀಣಗೊಂಡು ಕುಸಿದುಬಿದ್ದಿದ್ದಾರೆ. ಪ್ರಥಮ ಚಿಕಿತ್ಸೆ ನೀಡಿ ಮೈಸೂರಿನ ಜೆಎಸ್ಎಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಂದು ಅವರು ಸಾವನ್ನಪ್ಪಿದ್ದಾರೆ. ಮೃತರು ಪತಿ, ಓರ್ವ ಪುತ್ರ, ಓರ್ವ ಪುತ್ರಿಯನ್ನು ಅಗಲಿದ್ದಾರೆ.