ಮಡಿಕೇರಿ, ಜೂ. 9: ಇಲ್ಲಿನ ಸರಕಾರಿ ಪ.ಪೂ. ಕಾಲೇಜು ಪ್ರೌಢಶಾಲಾ ವಿಭಾಗದ ಶಿಕ್ಷಕವೃಂದಕ್ಕೆ ದಲಿತ ಸಂಘರ್ಷ ಸಮಿತಿ ಸನ್ಮಾನ ಸಮಾರಂಭ ಏರ್ಪಡಿಸಿತ್ತು. ಮುಖ್ಯ ಭಾಷಣಕಾರರಾಗಿದ್ದ ‘ಶಕ್ತಿ' ಸಲಹಾ ಸಂಪಾದಕ ಬಿ.ಜಿ. ಅನಂತಶಯನ ಅವರು ಮಾತನಾಡುತ್ತಾ, ಬದುಕಿನಲ್ಲಿ ಪ್ರತಿಯೊಬ್ಬರು ಒಂದಿಲ್ಲೊಂದು ಹವ್ಯಾಸಗಳನ್ನು ಬೆಳೆಸಿಕೊಂಡರೆ ಉತ್ತಮ ಜೀವನ ನಡೆಸುವದು ಸಾಧ್ಯವೆಂದು ಅಭಿಪ್ರಾಯಪಟ್ಟರು.

ಜಗತ್ತಿನಲ್ಲಿ ಅದ್ಭುತ ಸಾಧನೆ ಮಾಡಿರುವ ಎಲ್ಲರನ್ನೂ ಕೂಡ ಬುದ್ಧಿವಂತರನ್ನಾಗಿ ರೂಪಿಸಿದವರು ಅಧ್ಯಾಪಕ ಸಮೂಹವೆಂದು ಉದಾಹರಣೆ ಸಹಿತ ಬೊಟ್ಟು ಮಾಡಿದ ಅನಂತಶಯನ ಅವರು, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ವೈಚಾರಿಕ ಚಿಂತನೆಯೊಂದಿಗೆ ಜ್ಞಾನ ಸಾಮಥ್ರ್ಯ ಹೆಚ್ಚಿಸಿಕೊಳ್ಳುವಂತೆ ಕರೆ ನೀಡಿದರು. ಪ್ರತಿಯೊಬ್ಬರ ಬದುಕು ಉತ್ತಮ ಗುಣಮಟ್ಟದಿಂದ ಕೂಡಿರಬೇಕೆಂದು ನುಡಿದ ಅವರು, ರಾಮಾಯಣ ಕೂಡ ಗುಣಮಟ್ಟದ ವಿಚಾರ ವಾದದಿಂದಲೇ ಸಾಧ್ಯವಾದು ದೆಂದು ಮಕ್ಕಳಿಗೆ ಉಪಕತೆಯ ಮೂಲಕ ವಿವರಿಸಿದರು. ಹೀಗಾಗಿ ಮಂದಿರಗಳಲ್ಲಿ ಮೂರ್ತಿ ಪೂಜೆಗಿಂತ ಜ್ಞಾನ ಕಲಿಸುವ ಗುರು ಪೂಜೆ ಶ್ರೇಷ್ಠವೆಂದು ಅವರು ನೆನಪಿಸಿದರು.

ಮದೆ ಮಹೇಶ್ವರ ವಿದ್ಯಾಲಯದ ಪ್ರಾಂಶುಪಾಲ ಸಿದ್ಧರಾಜು ಮಾತನಾಡಿ, ಜ್ಞಾನದಿಂದ ವಿಜ್ಞಾನ ಹುಟ್ಟಿಕೊಳ್ಳಲು ಸಾಧ್ಯವಾಯಿತೆಂದು ವ್ಯಾಖ್ಯಾನಿಸುತ್ತಾ, ಜ್ಞಾನ ಸಂಪಾದನೆಗಾಗಿ ವಿದ್ಯೆ ಕಲಿಯದಿದ್ದರೆ ಮನುಷ್ಯನ ಬದುಕು ಪಶು ಸಮಾನವೆಂದು ಬಣ್ಣಿಸಿದರು.

ಜಿಲ್ಲಾ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ದೇವದಾಸ್ ದಲಿತ ಸಂಘರ್ಷ ಸಮಿತಿಯ ಕಾರ್ಯವನ್ನು ಶ್ಲಾಘಿಸುತ್ತಾ, ಯಾರಿಗೂ ಬೇಡವೆನ್ನುವ ಸರಕಾರಿ ಶಾಲಾ ಶಿಕ್ಷಕರನ್ನು ಗುರುತಿಸಿ ಸನ್ಮಾನಿಸುವದು ಅಭಿನಂದನೀಯ ಎಂದರು. ಮಕ್ಕಳು ವಿದ್ಯೆಯೊಂದಿಗೆ ಗುರಿ ಹೊಂದಿರಬೇಕೆಂದು ಅವರು ಕಿವಿಮಾತು ಹೇಳಿದರು.

ದಾನಿ ವಾಸುದೇವ ಹಾಗೂ ಉದ್ಯಮಿ ದಾಮೋದರ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಅವರುಗಳು ಮಾತನಾಡಿ, ಪ್ರಸಕ್ತ ಶೇ. 91 ಎಸ್ಸೆಸ್ಸೆಲ್ಸಿ ಫಲಿತಾಂಶ ಪಡೆದಿರುವ ಪ್ರೌಢಶಾಲೆ, ಮುಂದಿನ ಅವಧಿಗೆ ಶೇ. 100 ಸಾಧನೆಯೊಂದಿಗೆ ಮಾನ್ಯತೆ ಪಡೆಯುವಂತಾಗಲಿ ಎಂಬದಾಗಿ ಆಶಿಸಿದರು. ಶಿಕ್ಷಕ ಸಮೂಹಕ್ಕಿಂತ ಗೌರವ ಸ್ಥಾನವಿರುವವರು ಮತ್ತು ಪೂಜಾರ್ಹರು ಸಿಗಲಾರರೆಂದು ಅವರುಗಳು ಅಭಿಪ್ರಾಯಪಟ್ಟರು.

ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಹೆಚ್.ಎಲ್. ದಿವಾಕರ ನೇತೃತ್ವದಲ್ಲಿ ಎಲ್ಲಾ ಅಧ್ಯಾಪಕರನ್ನು ಭಾವನಾತ್ಮಕವಾಗಿ ಈ ಸಂದರ್ಭ ಗೌರವಿಸಲಾಯಿತು. ಉಪ ಪ್ರಾಂಶುಪಾಲ ಗುರುರಾಜ್ ಅವರು ಪ್ರಾಸ್ತಾವಿಕ ನುಡಿಯೊಂದಿಗೆ ಮಕ್ಕಳು ಎಸ್ಸೆಸ್ಸೆಲ್ಸಿಯಲ್ಲಿ ತೋರಿದ ಸಾಧನೆ ಹಾಗೂ ಶಿಕ್ಷಕರ ಪರಿಶ್ರಮವನ್ನು ಸ್ಮರಿಸುತ್ತಾ, ದ.ಸಂ.ಸ. ನೀಡಿದ ಸನ್ಮಾನದಿಂದ ಎಲ್ಲರ ಜವಾಬ್ದಾರಿ ಹೆಚ್ಚಿದೆ ಎಂದು ನುಡಿದರು.

ವೇದಿಕೆಯಲ್ಲಿ ಟೌನ್‍ಬ್ಯಾಂಕ್ ಉಪಾಧ್ಯಕ್ಷ ಸತೀಶ್ ಹಾಗೂ ಇತರ ಪ್ರಮುಖರು ಉಪಸ್ಥಿತರಿದ್ದು, ಶಿಕ್ಷಕಿ ಲೀನಾ ನಿರೂಪಿಸಿದರೆ, ಸಮಿತಿಯ ಕಾರ್ಯದರ್ಶಿ ಕುಮಾರ್ ಸ್ವಾಗತಿಸಿದರು. ದ.ಸಂ.ಸ. ಸನ್ಮಾನ ನೀಡಿದಕ್ಕೆ ಉಪಪ್ರಾಂಶುಪಾಲ(ಮೊದಲ ಪುಟದಿಂದ) ವೈಚಾರಿಕ ಚಿಂತನೆಯೊಂದಿಗೆ ಜ್ಞಾನ ಸಾಮಥ್ರ್ಯ ಹೆಚ್ಚಿಸಿಕೊಳ್ಳುವಂತೆ ಕರೆ ನೀಡಿದರು. ಪ್ರತಿಯೊಬ್ಬರ ಬದುಕು ಉತ್ತಮ ಗುಣಮಟ್ಟದಿಂದ ಕೂಡಿರಬೇಕೆಂದು ನುಡಿದ ಅವರು, ರಾಮಾಯಣ ಕೂಡ ಗುಣಮಟ್ಟದ ವಿಚಾರ ವಾದದಿಂದಲೇ ಸಾಧ್ಯವಾದು ದೆಂದು ಮಕ್ಕಳಿಗೆ ಉಪಕತೆಯ ಮೂಲಕ ವಿವರಿಸಿದರು. ಹೀಗಾಗಿ ಮಂದಿರಗಳಲ್ಲಿ ಮೂರ್ತಿ ಪೂಜೆಗಿಂತ ಜ್ಞಾನ ಕಲಿಸುವ ಗುರು ಪೂಜೆ ಶ್ರೇಷ್ಠವೆಂದು ಅವರು ನೆನಪಿಸಿದರು.

ಮದೆ ಮಹೇಶ್ವರ ವಿದ್ಯಾಲಯದ ಪ್ರಾಂಶುಪಾಲ ಸಿದ್ಧರಾಜು ಮಾತನಾಡಿ, ಜ್ಞಾನದಿಂದ ವಿಜ್ಞಾನ ಹುಟ್ಟಿಕೊಳ್ಳಲು ಸಾಧ್ಯವಾಯಿತೆಂದು ವ್ಯಾಖ್ಯಾನಿಸುತ್ತಾ, ಜ್ಞಾನ ಸಂಪಾದನೆಗಾಗಿ ವಿದ್ಯೆ ಕಲಿಯದಿದ್ದರೆ ಮನುಷ್ಯನ ಬದುಕು ಪಶು ಸಮಾನವೆಂದು ಬಣ್ಣಿಸಿದರು.

ಜಿಲ್ಲಾ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ದೇವದಾಸ್ ದಲಿತ ಸಂಘರ್ಷ ಸಮಿತಿಯ ಕಾರ್ಯವನ್ನು ಶ್ಲಾಘಿಸುತ್ತಾ, ಯಾರಿಗೂ ಬೇಡವೆನ್ನುವ ಸರಕಾರಿ ಶಾಲಾ ಶಿಕ್ಷಕರನ್ನು ಗುರುತಿಸಿ ಸನ್ಮಾನಿಸುವದು ಅಭಿನಂದನೀಯ ಎಂದರು. ಮಕ್ಕಳು ವಿದ್ಯೆಯೊಂದಿಗೆ ಗುರಿ ಹೊಂದಿರಬೇಕೆಂದು ಅವರು ಕಿವಿಮಾತು ಹೇಳಿದರು.

ದಾನಿ ವಾಸುದೇವ ಹಾಗೂ ಉದ್ಯಮಿ ದಾಮೋದರ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಅವರುಗಳು ಮಾತನಾಡಿ, ಪ್ರಸಕ್ತ ಶೇ. 91 ಎಸ್ಸೆಸ್ಸೆಲ್ಸಿ ಫಲಿತಾಂಶ ಪಡೆದಿರುವ ಪ್ರೌಢಶಾಲೆ, ಮುಂದಿನ ಅವಧಿಗೆ ಶೇ. 100 ಸಾಧನೆಯೊಂದಿಗೆ ಮಾನ್ಯತೆ ಪಡೆಯುವಂತಾಗಲಿ ಎಂಬದಾಗಿ ಆಶಿಸಿದರು. ಶಿಕ್ಷಕ ಸಮೂಹಕ್ಕಿಂತ ಗೌರವ ಸ್ಥಾನವಿರುವವರು ಮತ್ತು ಪೂಜಾರ್ಹರು ಸಿಗಲಾರರೆಂದು ಅವರುಗಳು ಅಭಿಪ್ರಾಯಪಟ್ಟರು.

ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಹೆಚ್.ಎಲ್. ದಿವಾಕರ ನೇತೃತ್ವದಲ್ಲಿ ಎಲ್ಲಾ ಅಧ್ಯಾಪಕರನ್ನು ಭಾವನಾತ್ಮಕವಾಗಿ ಈ ಸಂದರ್ಭ ಗೌರವಿಸಲಾಯಿತು. ಉಪ ಪ್ರಾಂಶುಪಾಲ ಗುರುರಾಜ್ ಅವರು ಪ್ರಾಸ್ತಾವಿಕ ನುಡಿಯೊಂದಿಗೆ ಮಕ್ಕಳು ಎಸ್ಸೆಸ್ಸೆಲ್ಸಿಯಲ್ಲಿ ತೋರಿದ ಸಾಧನೆ ಹಾಗೂ ಶಿಕ್ಷಕರ ಪರಿಶ್ರಮವನ್ನು ಸ್ಮರಿಸುತ್ತಾ, ದ.ಸಂ.ಸ. ನೀಡಿದ ಸನ್ಮಾನದಿಂದ ಎಲ್ಲರ ಜವಾಬ್ದಾರಿ ಹೆಚ್ಚಿದೆ ಎಂದು ನುಡಿದರು.

ವೇದಿಕೆಯಲ್ಲಿ ಟೌನ್‍ಬ್ಯಾಂಕ್ ಉಪಾಧ್ಯಕ್ಷ ಸತೀಶ್ ಹಾಗೂ ಇತರ ಪ್ರಮುಖರು ಉಪಸ್ಥಿತರಿದ್ದು, ಶಿಕ್ಷಕಿ ಲೀನಾ ನಿರೂಪಿಸಿದರೆ, ಸಮಿತಿಯ ಕಾರ್ಯದರ್ಶಿ ಕುಮಾರ್ ಸ್ವಾಗತಿಸಿದರು. ದ.ಸಂ.ಸ. ಸನ್ಮಾನ ನೀಡಿದಕ್ಕೆ ಉಪಪ್ರಾಂಶುಪಾಲರು ಅಭಿವಂದಿಸಿದರು.ರು ಅಭಿವಂದಿಸಿದರು.