ಗೋಣಿಕೊಪ್ಪಲು, ಜೂ.9: ವೀರಾಜಪೇಟೆ ಪಟ್ಟಣ ಪಂಚಾಯಿತಿಯನ್ನು ಪುರಸಭೆಯಾಗಿ ಮೇಲ್ಧರ್ಜೆಗೇರಿಸುವ ಪ್ರಸ್ತಾವನೆ ಸದ್ಯ ಸರ್ಕಾರದ ಮುಂದೆ ಇಲ್ಲ ಎಂದು ಪೌರಾಡಳಿತ, ಸ್ಥಳೀಯ ಸಂಸ್ಥೆಗಳು, ಸಾರ್ವಜನಿಕ ಉದ್ದಿಮೆಗಳ ರಾಜ್ಯ ಸಚಿವ ಈಶ್ವರ ಬಿ. ಖಂಡ್ರೆ ಮಾಹಿತಿ ನೀಡಿದ್ದಾರೆ.ಶಾಸಕ ಕೆ.ಜಿ.ಬೋಪಯ್ಯ ಅವರು, ಕೊಡಗು ಜಿಲ್ಲೆ ವೀರಾಜಪೇಟೆ ಪಟ್ಟಣ ಪಂಚಾಯಿತಿಯನ್ನು ಪುರಸಭೆಯನ್ನಾಗಿ ಪರಿವರ್ತಿಸುವ ಪ್ರಸ್ತಾವನೆ ಸರ್ಕಾರದ ಮುಂದಿದೆಯೇ, ಈ ಬಗ್ಗೆ ಸರ್ಕಾರದ ನಿಲುವೇನು? ಎಂದು ಪ್ರಶ್ನಿಸಿದರು. ಸಚಿವರು ಪ್ರಶ್ನೆಗೆ ಉತ್ತರಿಸಿ ಪುರಸಭೆಯಾಗಿ ಪರಿವರ್ತನೆಯಾಗಲು ಕೆಲವೊಂದು ಮಾನದಂಡಗಳಿವೆ.
ಪುರಸಭೆಯಾಗಿ ಪರಿವರ್ತನೆ ಯಾಗಲು 20 ಸಾವಿರ ಜನಸಂಖ್ಯೆ ಅಗತ್ಯ. ಆದರೆ, ವೀರಾಜಪೇಟೆಯಲ್ಲಿ ಸುಮಾರು 17 ಸಾವಿರ ಮಾತ್ರ್ರ ಜನಸಂಖ್ಯೆ ಇದೆ ಎಂದು ಸಚಿವರು ಉತ್ತರಿಸಿದರು.
ಪುರಸಭೆಯಾಗಿ ಪರಿವರ್ತಿಸಲು ಎರಡು ಬಾರಿ ನಿರ್ಣಯ ಮಾಡಿ ಪ್ರಸ್ತಾವನೆ ಕಳುಹಿಸಲಾಗಿದೆ.