ಕುಶಾಲನಗರ, ಜೂ. 9: ಕುಶಾಲನಗರದ ರಥಬೀದಿಯಲ್ಲಿನ ಶ್ರೀ ಚೌಡೇಶ್ವರಿ ಅಮ್ಮನ ವಾರ್ಷಿಕ ಮಹೋತ್ಸವ ಶ್ರದ್ಧಾಭಕ್ತಿಯಿಂದ ಜರುಗಿತು. ಗಣಪತಿ ಹೋಮ, ಧ್ವಜಾರೋಹಣ ನಂತರ ಸಮುದಾಯ ಬಾಂಧವರು ಕಾವೇರಿ ನದಿಗೆ ತೆರಳಿ ಗಂಗಾಜಲವನ್ನು ಮುಖ್ಯಬೀದಿಯಲ್ಲಿ ಮೆರವಣಿಗೆ ಮೂಲಕ ತರಲಾಯಿತು. ಕಳಸ ಹೊತ್ತ ಮಹಿಳೆಯರು ಮೆರವಣಿಗೆಯಲ್ಲಿ ಸಾಗಿದರು. ನಂತರ ಮಹಾಮಂಗಳಾರತಿ ಬಳಿಕ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ, ಅನ್ನಸಂತರ್ಪಣೆ ನಡೆಯಿತು.

ಕುಶಾಲನಗರ ದೇವಾಲಯಗಳ ಒಕ್ಕೂಟದ ಸದಸ್ಯರು ವಾರ್ಷಿಕೋತ್ಸವ ಅಂಗವಾಗಿ ದೇವಾಲಯದಲ್ಲಿ ಸಾಮೂಹಿಕ ಪೂಜೆ ಸಲ್ಲಿಸಿದರು. ಪಟ್ಟಣದ ವಿವಿಧ ದೇವಾಲಯಗಳ ಆಡಳಿತ ಮಂಡಳಿ ಪ್ರತಿನಿಧಿಗಳು, ಒಕ್ಕೂಟದ ಅಧ್ಯಕ್ಷ ಎಂ.ಕೆ. ದಿನೇಶ್, ಉಪಾಧ್ಯಕ್ಷ ಬಿ.ಎಲ್. ಸತ್ಯನಾರಾಯಣ, ಪ್ರಧಾನ ಕಾರ್ಯದರ್ಶಿ ಎಂ.ಎನ್. ಚಂದ್ರಮೋಹನ್, ಖಜಾಂಚಿ ಎಸ್.ಕೆ. ಶ್ರೀನಿವಾಸ್ ರಾವ್ ಇದ್ದರು.

ಶ್ರೀ ಚೌಡೇಶ್ವರಿ ದೇವಾಲಯದ ಅಧ್ಯಕ್ಷ ಡಿ.ಟಿ. ವಿಜಯೇಂದ್ರ, ಉಪಾಧ್ಯಕ್ಷ ಡಿ.ಆರ್. ಸೋಮಶೇಖರ್, ಡಿ.ಕೆ. ಮಹೇಶ್, ಪ್ರಧಾನ ಕಾರ್ಯದರ್ಶಿ ಡಿ.ವಿ. ರಾಜೇಶ್, ಸಹ ಕಾರ್ಯದರ್ಶಿ ಡಿ.ವಿ. ಚಂದ್ರು, ಖಜಾಂಚಿ ಡಿ.ಆರ್. ಕೃಷ್ಣಕುಮಾರ್ ಮತ್ತಿತರರು ಇದ್ದರು.