ಮಡಿಕೇರಿ, ಜೂ. 9: ಸಂಪಾಜೆ ಗ್ರಾಮ ಪಂಚಾಯಿತಿ ಹಾಗೂ ವಿವಿಧ ಸಂಘ ಸಂಸ್ಥೆಗಳು ಕೊಯನಾಡಿನಿಂದ ಸಂಪಾಜೆವರೆಗೆ ಸ್ವಚ್ಛ ಭಾರತ್ ಅಭಿಯಾನ ನಡೆಯಿತು. ಪ್ರಯಾಣಿಕರಿಗೆ ಹಾಗೂ ಪ್ರವಾಸಿಗರಿಗೆ ಕರಪತ್ರ ಮೂಲಕ ಸ್ವಚ್ಛತೆ ಜಾಗೃತಿ ಮೂಡಿಸಲಾಯಿತು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಾಲಚಂದ್ರ ಕಳಗಿ ಮಾತಾನಾಡಿ ಗ್ರಾಮದ ಸ್ವಚ್ಛತೆಗೆ ಎಲ್ಲರೂ ಸಹಕರಿಸಲು ಮನವಿ ಮಾಡಿ ಪ್ರವಾಸಿಗರು ರಸ್ತೆ ಬದಿಯಲ್ಲಿ ಪ್ಲಾಸ್ಟಿಕ್ ಬಿಸಾಡುವದು ಅಥವಾ ಪ್ಲಾಸ್ಟಿಕ್ ಬಳಸುವದು ನಿಷೇಧಿಸಿದ್ದು ಪರಿಸರ ಹಾನಿ ಮಾಡುವ ಪ್ರಯಾಣಿಕರು ಕÀಂಡುಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ಪೋಲಿಸರಿಗೆ ಮಾಹಿತಿ ನೀಡುವಂತೆ ಸೂಚನೆ ನೀಡಲಾಯಿತು. ಸ್ವಚ್ಛ ಭಾರತ್, ಸ್ವಚ್ಛ ಸಂಪಾಜೆ, ಸ್ವಚ್ಛ ಕೊಡಗು ಆಗಬೇಕು ಅದಕ್ಕಾಗಿ ಎಲ್ಲರೂ ಸಹಕಾರವನ್ನು ಬಯಸುತ್ತೇವೆ ಎಂದರು. ಕಾರ್ಯಕ್ರಮದಲ್ಲಿ ಗ್ರಾ.ಪಂ. ಉಪಾಧ್ಯಕ್ಷ ಬಿ.ಆರ್. ಸುಂದರ, ಗ್ರಾಮಸ್ಥರಾದ ಉಲ್ಲಾಸ ಕೇನಾಜೆ, ಮೊಯ್ದಿನ್ ಕುಂಞ, ಮೀನಾಕುಮಾರಿ, ಮಾಲತಿ ನಾರಾಯಣ, ರಾಜೇಶ್ವರಿ, ಹೇಮಾವತಿ, ಎ.ಎಸ್.ಐ ಸುಕುಮಾರ್, ಪಿ.ಡಿ.ಓ. ಶೋಭರಾಣಿ, ಕೆ ಎಸ್ ತೀರ್ಥಪ್ರಸಾದ್, ಮಾಯಿಲಪ್ಪ ಓ ಆರ್, ಶ್ರೀಧರ, ಯಶೋಧರ, ಜಯರಾಜ್, ಬಬಿನ್ ಇನ್ನಿತರರು ಉಪಸ್ಥಿತರಿದ್ದರು.