ವೆಚ್ಚದಲ್ಲಿ ಕಟ್ಟಡ ನಿರ್ಮಿಸಲಾಗಿ ಇಲಾಖೆಗಳ ನಿಲ್ರ್ಯಕ್ಷದಿಂದಾಗಿ ಬಾಕಿ ಹಣ ಸರಕಾರಕ್ಕೆ ವಾಪಸು ಆಗಿದೆ. ಆದರೆ ಕಟ್ಟಿದ ಕಟ್ಟಡ ಇನ್ನೇನು ಉದ್ಘಾಟನೆಗೆ ಮಾತ್ರ ಬಾಕಿ ಇತ್ತು. ಆದರೆ 10 ವರ್ಷಗಳು ಕಳೆದರೂ ಕಟ್ಟಡ ಉದ್ಘಾಟನೆಗೊಳ್ಳದೆ ಕಾಡು ಪಾಲಾಗಿದೆ.ಜೂನಿಯರ್ ಕಾಲೇಜಿಗೆ ಸ್ವಂತ ಕಟ್ಟಡ ಇಲ್ಲದಿರುವದರಿಂದ ಈಗ ನಾಪೆÇೀಕ್ಲು ಪ್ರೌಢ ಶಾಲೆಯ ಕಟ್ಟಡಗಳನ್ನು ಬಳಸಲಾಗುತ್ತಿದ್ದು ಉಪಾನ್ಯಾಸಕರು ಮತ್ತು ಸಿಬ್ಬಂದಿ ವರ್ಗದವರು, ಉತ್ತಮ ಕಚೇರಿ ಕೂಡ ಇಲ್ಲದೆ ಹಳೆಯ ಅನಾನುಕೂಲದಿಂದ ಕೂಡಿದ ಕಟ್ಟಡವನ್ನು ಬಳಸಿಕೊಳ್ಳುವಂತಾಗಿದೆ. ಏಕೆ ಹೀಗೆ ಎಂದು ಸಾರ್ವಜನಿಕರ ಪ್ರಶ್ನೆಯಾಗಿದೆ. ಹಾಗಾದರೆ ಸರಕಾರಿ ಶಾಲೆಗಳಿಗೆ ವಿದ್ಯಾರ್ಥಿಗಳನ್ನು ಸೇರಿಸುವದು ಬೇಡವೇ? ಎಂದು ಪೋಷಕರೊಬ್ಬರು ತಮ್ಮ ಅಳಲನ್ನು ತೋರಿಕೊಂಡಿದ್ದಾರೆ,

ನಾಪೆÉÇೀಕ್ಲು ಪದವಿಪೂರ್ವ ಕಾಲೇಜಿಗೆ 2007 ರಲ್ಲಿ ಹೊಸ ಕಟ್ಟಡ ನಿರ್ಮಾಣ ಮಾಡಿದ ಲೋಕೋಪ ಯೋಗಿ ಇಲಾಖೆಯವರಾಗಲಿ, ಈ ಕಟ್ಟಡ ಕಾಮಗಾರಿಯ ಗುತ್ತಿಗೆದಾರ ರಾಗಲಿ ನಮಗೆ ಕಟ್ಟಡವನ್ನು ಬಿಟ್ಟು ಕೊಟ್ಟಿಲ್ಲ. ಇನ್ನು ಹಣ ಕೊಡಲು ಬಾಕಿ ಇದೆ ಎಂದು ಗುತ್ತಿಗೆದಾರರನ್ನು ಕೇಳುವಾಗ ಹೇಳುತ್ತಿದ್ದಾರೆ ಇದರಿಂದ ಕಾಲೇಜಿನ ಪ್ರಾಧ್ಯಾಪಕ ವರ್ಗ ಮತ್ತು ಮಕ್ಕಳಿಗೆ ತೊಂದರೆಯಾಗಿದೆ ಎಂದು ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಕರವಂಡ ಲವ ನಾಣಯ್ಯ ಆರೋಪಿಸಿದ್ದಾರೆ.

ನಾಪೆÇೀಕ್ಲು ಬೇತು ಗ್ರಾಮದ ವಿದ್ಯಾಭಿಮಾನಿಗಳು ಶತಮಾನಗಳ ಹಿಂದೆ ಈ ವಿಭಾಗದ ಮಕ್ಕಳ ಉದ್ಧಾರಕ್ಕಾಗಿ ಸುಮಾರು 56 ಏಕ್ರೆ ಜಾಗವನ್ನು ಶಾಲೆಗಾಗಿ ದಾನ ನೀಡಿರುವದರಿಂದ ಇಂದು ಈ ವಿಭಾಗದ ಜನರು ವಿದ್ಯೆ ಕಲಿತು ಇಂದು ಮಂತ್ರಿ ಮಹೋದಯರಾಗಿದ್ದಾರೆ. ಇಂತಹ ವಿದ್ಯಾ ದೇಗುಲದಲ್ಲಿ ಪದವಿ ಕಾಲೇಜಿಗೆ ಹೊಸ ಕಟ್ಟಡ ನಿರ್ಮಾಣ ಮಾಡಿ 10 ವರ್ಷ ಕಳೆದರು ಕಟ್ಟಡದ ಉದ್ಘಾಟನೆ ಆಗದೆ ಇರುವದು ನಾಚಿಕೆಗೇಡಿನ ವಿಷಯ. ಕೂಡಲೇ ಸಂಬಂಧಿಸಿದವರು ಕಾಡು ಬೆಳೆದ ಕಟ್ಟಡಕ್ಕೆ ಮರು ಜೀವ ಕಲ್ಪಿಸಿದರೆ ಒಳ್ಳೆಯದು ಎಂದು ಗ್ರಾ.ಪಂ. ಮಾಜಿ ಅಧ್ಯಕ್ಷ ಕುಲ್ಲೇಟಿರ ಅರುಣ್ ಬೇಬ ಪ್ರತಿಕ್ರಿಯಿಸಿದ್ದಾರೆ.

ಚಿತ್ರ ವರದಿ: ದುಗ್ಗಳ ಸದಾನಂದ