ಶನಿವಾರಸಂತೆ, ಜೂ. 10: ಸಕಲೇಶಪುರದಿಂದ ಕೇರಳಕ್ಕೆ ತೆರಿಗೆ ವಂಚಿಸಿ ಅಕ್ರಮವಾಗಿ ಸಾಗಿಸುತ್ತಿದ್ದ 1 ಲೋಡ್ ಕಾಳುಮೆಣಸನ್ನು ಲಾರಿ ಸಹಿತ ಪೊಲೀಸರು ವಶಪಡಿಸಿಕೊಂಡ ಘಟನೆ ಸ್ಥಳೀಯ ಗುಡುಗಳಲೆ ಜಂಕ್ಷನ್‍ನಲ್ಲಿ ನಡೆದಿದೆ.
ಚಾಲಕ ಆಶಿಕ್‍ನೊಂದಿಗೆ ಲಾರಿಯನ್ನು ವಶಪಡಿಸಿಕೊಂಡು ಶನಿವಾರಸಂತೆ ಪೊಲೀಸ್ ಠಾಣೆ ಸರಹದ್ದಿನಲ್ಲಿ ನಿಲ್ಲಿಸಿ ಮಡಿಕೇರಿಯ ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತ ಸೋಮಶೇಖರ್ ಅವರಿಗೆ ಮಹಿತಿ ನೀಡಲಾಯಿತು. ಸ್ಥಳಕ್ಕೆ ಆಗಮಿಸಿದ ಸಹಾಯಕ ಆಯುಕ್ತ ಸೋಮಶೇಖರ್ ಪರಿಶೀಲಿಸಿ ಲಾರಿಗೆ ರೂ. 1,52,625 ತೆರಿಗೆ ಪಾವತಿಸುವಂತೆ ಸೂಚಿಸಿದರು. ವ್ಯಾಪಾರಿ ಅಶ್ರಫ್ ತೆರಿಗೆ ಪಾವತಿಸಿ ಕಾಳುಮೆಣಸು ಸಹಿತ ಲಾರಿಯನ್ನು ಪಡೆದುಕೊಂಡಿದ್ದಾರೆ.